AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಕಾರಿನಲ್ಲಿ ಲಗೇಜ್​​​ಗೆ ಅವಕಾಶ ಇಲ್ಲ, ದಂಪತಿಗೆ ಅವ್ಯಾಚ ಪದಗಳಿಂದ ನಿಂದಿಸಿದ ಕ್ಯಾಬ್ ಡ್ರೈವರ್

ಬೆಂಗಳೂರಿನಲ್ಲಿ ಉಬರ್ ಗೋ ಡ್ರೈವರ್‌ನಿಂದ ದಂಪತಿಗಳಿಗೆ ಆಗಿರುವ ಕೆಟ್ಟ ಅನುಭವದ ಬಗ್ಗೆ ಪೋಸ್ಟ್​​ವೊಂದನ್ನು ಹಂಚಿಕೊಂಡಿದ್ದಾರೆ. ಸೂಟ್‌ಕೇಸ್‌ಗಳಿದ್ದ ಕಾರಣ ಕಾರು ಹತ್ತಿಸಿಕೊಳ್ಳಲು ಚಾಲಕ ನಿರಾಕರಿಸಿದ್ದಾನೆ. ಜತೆಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದಂಪತಿ ಆರೋಪಿಸಿದ್ದಾರೆ. ಈ ಬಗ್ಗೆ ಇಲ್ಲಿದೆ ನೋಡಿ ಸ್ಟೋರಿ

ಬೆಂಗಳೂರು: ಕಾರಿನಲ್ಲಿ ಲಗೇಜ್​​​ಗೆ ಅವಕಾಶ ಇಲ್ಲ, ದಂಪತಿಗೆ ಅವ್ಯಾಚ ಪದಗಳಿಂದ ನಿಂದಿಸಿದ ಕ್ಯಾಬ್ ಡ್ರೈವರ್
ವೈರಲ್​​​ ಪೋಸ್ಟ್​
ಅಕ್ಷಯ್​ ಪಲ್ಲಮಜಲು​​
|

Updated on: Oct 14, 2025 | 6:06 PM

Share

ಬೆಂಗಳೂರು, ಅ.14: ಬೆಂಗಳೂರಿನಲ್ಲಿ ಕ್ಯಾಬ್​​​​ ಡ್ರೈವರ್​​​ಗಳ ಕಿರಿಕ್ (Bengaluru Uber driver)​​ ಹೆಚ್ಚಾಗಿವೆ. ಸಾಮಾಜಿಕ ಜಾಲತಾಣಲ್ಲಿ ಬೆಂಗಳೂರು ಕ್ಯಾಬ್​​​ ಡ್ರೈವರ್​​ಗಳ ಬಗ್ಗೆ ದಿನಕ್ಕೊಂದು ಸುದ್ದಿಗಳು ವೈರಲ್​ ಆಗುತ್ತಲೇ ಇರುತ್ತದೆ. ಇದೀಗ ಮತ್ತೊಂದು ಪೋಸ್ಟ್​​​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಬೆಂಗಳೂರು ಮೂಲದ ದಂಪತಿಯ ಲಗೇಜ್​​​ಗಳನ್ನು ನೋಡಿ ಉಬರ್ ಚಾಲಕ ಬಾಯಿಗೆ ಬಂದಂತೆ ಅವ್ಯಾಚ ಪದಗಳಿಂದ ನಿಂದಿಸಿದ್ದಾನೆ. ಇದೀಗ ಈ ಪೋಸ್ಟ್​​ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಕಾರಣವಾಗಿದೆ. ಬೆಂಗಳೂರಿನ ಅಗರ ಸರೋವರದ ಬಳಿ ವರ್ಕಲಾ ಪ್ರವಾಸ ಮುಗಿಸಿ ವಾಪಸ್ಸು ಬರುವ ವೇಳೆ ಈ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಉಬರ್ ಗೋ ಸವಾರಿಯ ಚಾಲಕನು ದಂಪತಿಗಳನ್ನು ಲಗೇಜ್​ ಸಮೇತ ನೋಡಿ ಕಾರು ಹತ್ತಿಸಿಕೊಳ್ಳಲು ನಿರಾಕರಿಸಿದ್ದಾನೆ. ಉಬರ್ ಗೋನಲ್ಲಿ ಸೂಟ್‌ಕೇಸ್‌ಗಳಿಗೆ ಅನುಮತಿ ಇಲ್ಲ ಎಂದು ಕ್ಯಾಬ್ ಡ್ರೈವರ್​​ ಹೇಳಿದ್ದಾನೆ. ಈ ನಿಯಮ ಯಾವಾಗದಿಂದ ಶುರುವಾಗಿದೆ. ನಾವು ಇಲ್ಲಿಯವರೆಗೆ ಈ ನಿಯಮದ ಬಗ್ಗೆ ಕೇಳಿಲ್ಲ ಎಂದು ಹೇಳಿದ್ದಾರೆ. ನಂತರ ದಂಪತಿ ಡ್ರೈವರ್​​​ನಲ್ಲಿ ಕ್ಯಾಬ್​​ನ್ನು ಕ್ಯಾನ್ಸಲ್​​​ ಮಾಡುವಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಡ್ರೈವರ್​ ದಂಪತಿಗಳನ್ನು ಅವ್ಯಾಚ ಪದಗಳಿಂದ ನಿಂದಿಸಿದ್ದಾನೆ. ಈ ಘಟನೆಯ ಬಗ್ಗೆ ವಿಡಿಯೋ ಕೂಡ ಮಾಡಿಕೊಂಡಿದ್ದಾರೆ. ಅವ್ಯಾಚ ಪದಗಳಿಂದ ನಿಂದಿಸಿದ್ದು ಮಾತ್ರವಲ್ಲದೆ, ಹಲ್ಲೆ ಮಾಡಲು ಕೂಡ ಮುಂದಾಗಿದ್ದಾನೆ ಎಂದು ದಂಪತಿಗಳು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಉಳಿಯಲು 5 ವರ್ಷ ಅವಕಾಶ: ಮೋದಿಗೆ ಧನ್ಯವಾದ ತಿಳಿಸಿದ ಅಮೆರಿಕದ ಉದ್ಯಮಿ

ಇಲ್ಲಿದೆ ನೋಡಿ ಪೋಸ್ಟ್​​:

Uber driver in Bangalore hurled abuses and got aggressive because we had 2 suitcases — Uber hasn’t done anything even after a month byu/MysteriousTime6680 inbangalore

ಇನ್ನು ಘಟನೆಯ ಬಗ್ಗೆ ಪೊಲೀಸರಿಗೆ ಸಾಕ್ಷಿ ಸಮೇತವಾಗ ದೂರು ನೀಡಿದ್ದೇವೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮವನ್ನು ಪೊಲೀಸರು ತೆಗೆದುಕೊಂಡಿಲ್ಲ. ಪ್ರಕರಣದ ಬಗ್ಗೆ ಯಾವುದೇ ಅಪ್ಡೇಟ್​​ ನೀಡಿಲ್ಲ ಎಂದು ದಂಪತಿಗಳು ಹೇಳಿದ್ದಾರೆ. ಇನ್ನು ಈ ಪೋಸ್ಟ್​​​ ಅನೇಕ ಬಳಕೆದಾರರು ಕಮೆಂಟ್​​ ಕೂಡ ಮಾಡಿದ್ದರೆ. ಸಾಮಾನ್ಯವಾಗಿ ಉಬರ್ ಗೋ ನಲ್ಲಿ ಚಿಕ್ಕ ಕಾರುಗಳು ಸಿಗುವುದು, ಅದರಲ್ಲಿ ವಸ್ತುಗಳನ್ನು ಸಾಗಿಸುವುದು ತುಂಬಾ ಕಷ್ಟ, ಹಾಗಾಗಿ ನಾನು ಉಬರ್ ಸೆಡಾನ್ ಅನ್ನು ಬುಕ್​​ ಮಾಡುತ್ತೇನೆ ಎಂದು ಒಬ್ಬ ಬಳಕೆದಾರ ಕಮೆಂಟ್​ ಮಾಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಎಂಟ್ರಿ ಕೊಟ್ಟಿದ್ದು ವಧು, ಆದ್ರೆ ಎಲ್ಲರೂ ನೋಡಿದ್ದು ಫೋಟೊಗ್ರಾಫರ್​ನ
ಎಂಟ್ರಿ ಕೊಟ್ಟಿದ್ದು ವಧು, ಆದ್ರೆ ಎಲ್ಲರೂ ನೋಡಿದ್ದು ಫೋಟೊಗ್ರಾಫರ್​ನ
ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಮೋದಿ
ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಮೋದಿ
ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ಅಶ್ವಿನಿ ಫಿದಾ
ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ಅಶ್ವಿನಿ ಫಿದಾ
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ
ನಾನಾ... ಹೌದು ನೀನೇ... ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!
ನಾನಾ... ಹೌದು ನೀನೇ... ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!
ಮುಚ್ಚಿದ್ದ ತರಕಾರಿ ಗಾಡಿಯಿಂದ ಒಂದು ಈರುಳ್ಳಿ ತೆಗೆದುಕೊಂಡು ಹಣವಿಟ್ಟ ಯುವಕರು
ಮುಚ್ಚಿದ್ದ ತರಕಾರಿ ಗಾಡಿಯಿಂದ ಒಂದು ಈರುಳ್ಳಿ ತೆಗೆದುಕೊಂಡು ಹಣವಿಟ್ಟ ಯುವಕರು
ಬೆಂಗಳೂರು: ಅಕ್ಷಯನಗರ ಸ್ಕ್ರಾಪ್​ ಗೋಡೌನ್​ನಲ್ಲಿ ಭಾರಿ ಅಗ್ನಿ ಅವಘಡ
ಬೆಂಗಳೂರು: ಅಕ್ಷಯನಗರ ಸ್ಕ್ರಾಪ್​ ಗೋಡೌನ್​ನಲ್ಲಿ ಭಾರಿ ಅಗ್ನಿ ಅವಘಡ
ಮಕರ ಸಂಕ್ರಾಂತಿ ಆಚರಣೆಯ ಸರಿಯಾದ ದಿನಾಂಕ, ಮಹತ್ವ ಏನು?
ಮಕರ ಸಂಕ್ರಾಂತಿ ಆಚರಣೆಯ ಸರಿಯಾದ ದಿನಾಂಕ, ಮಹತ್ವ ಏನು?