AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಉಳಿಯಲು 5 ವರ್ಷ ಅವಕಾಶ: ಮೋದಿಗೆ ಧನ್ಯವಾದ ತಿಳಿಸಿದ ಅಮೆರಿಕದ ಉದ್ಯಮಿ

ಅಮೆರಿಕನ್ ಉದ್ಯಮಿ ಟೋನಿ ಕ್ಲೋರ್ ಬೆಂಗಳೂರಿನಲ್ಲಿ ಬ್ಲಾಕ್‌ಚೈನ್ ಮತ್ತು AI ಉದ್ಯಮಕ್ಕಾಗಿ 5 ವರ್ಷಗಳ ಭಾರತ ವೀಸಾ ಪಡೆದಿದ್ದಾರೆ. ಭಾರತದ "ಅತಿಥಿ ದೇವೋ ಭವ" ಸಂಸ್ಕೃತಿ ಮತ್ತು ವಿದೇಶಿಗರನ್ನು ಸ್ವಾಗತಿಸುವ ನೀತಿಯನ್ನು ಅವರು ಶ್ಲಾಘಿಸಿದ್ದಾರೆ. ಪ್ರಧಾನಿ ಮೋದಿ ಅವರ ನೀತಿ ಭಾರತ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುತ್ತಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಉಳಿಯಲು 5 ವರ್ಷ ಅವಕಾಶ: ಮೋದಿಗೆ ಧನ್ಯವಾದ ತಿಳಿಸಿದ ಅಮೆರಿಕದ ಉದ್ಯಮಿ
ವೈರಲ್ ಪೋಸ್ಟ್
ಅಕ್ಷಯ್​ ಪಲ್ಲಮಜಲು​​
|

Updated on: Oct 14, 2025 | 3:30 PM

Share

ಬೆಂಗಳೂರು, ಅ.14: ಭಾರತದ ವಿಚಾರಗಳು ಹಾಗೂ ಸಂಸ್ಕೃತಿ, (American entrepreneur )ಮಾನವಿಯ ಮೌಲ್ಯಗಳ ಬಗ್ಗೆ ವಿದೇಶಿಗರು ಹೆಚ್ಚು ಇಷ್ಟಪಡುತ್ತಾರೆ. ಏಕೆಂದರೆ ಭಾರತದ್ದು ಅತಿಥಿ ದೇವೋ ಭವ ಸಂಸ್ಕೃತಿ, ಭಾರತದಲ್ಲಿ ವಿದೇಶಿಗರಿಗೆ ವಿಭಿನ್ನವಾದ ಗೌರವವನ್ನು ನೀಡಲಾಗುತ್ತದೆ. ವಿದೇಶಿಗರಿಗೂ ಅಷ್ಟೇ ಭಾರತದ ಸಂಸ್ಕೃತಿ, ಇಲ್ಲಿನ ವಿಚಾರಧಾರೆಗಳು ತುಂಬಾ ಇಷ್ಟಪಡುತ್ತಾರೆ. ಇದೀಗ ಅಮೆರಿಕ ವ್ಯಕ್ತಿಯೊಬ್ಬರು ತನ್ನ ಉದ್ಯಮಗಾಗಿ ಭಾರತಕ್ಕೆ ಅಂದರೆ ಕರ್ನಾಟಕಕ್ಕೆ ಬಂದಿದ್ದಾರೆ. ಇದೀಗ ಅವರಿಗೆ ಭಾರತ ಸರ್ಕಾರ ವೀಸಾ ನೀಡಿ, 5 ವರ್ಷಗಳ ಕಾಲ ಭಾರತದಲ್ಲಿ ಇರಲು ಅವಕಾಶ ನೀಡಿದೆ. ಈ ಖುಷಿಯ ವಿಚಾರವನ್ನು ಎಕ್ಸ್​​ನಲ್ಲಿ ಹಂಚಿಕೊಂಡಿದ್ದಾರೆ. ಇದರ ಜತೆಗೆ ತಮ್ಮ ಕರ್ನಾಟಕದ ಸ್ನೇಹಿತೆಯನ್ನು ಪರಿಚಯ ಮಾಡಿದ್ದಾರೆ.

ಅಮೆರಿಕದ ಟೋನಿ ಕ್ಲೋರ್​​ ಎಂಬ ಉದ್ಯಮಿ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಈ ವಿಚಾರವನ್ನು ಎಕ್ಸ್​​ನಲ್ಲಿ ತಮ್ಮ ಗೆಳತಿಗೆ ಚುಂಬಿಸುವ ಫೋಟೋವನ್ನು ಹಾಕಿಕೊಂಡು ಹೇಳಿಕೊಂಡಿದ್ದಾರೆ.  ಇನ್ನು ಈ ಪೋಸ್ಟ್​​​ನಲ್ಲಿ ಪ್ರಧಾನಿ ಮೋದಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಟೋನಿ ಕ್ಲೋರ್ ಅವರನ್ನು ಈ ಬಗ್ಗೆ ಹಿಂದೂಸ್ಥಾನ್​​​​ ಟೈಮ್ಸ್​​​  ವಿಶೇಷ ಸಂದರ್ಶನವನ್ನು ಮಾಡಿತ್ತು. ಐದು ವರ್ಷಗಳ ಭಾರತೀಯ ವೀಸಾವನ್ನು ನೀಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಟೋನಿ ಕ್ಲೋರ್, ಭಾರತದ ಸ್ವಾಗತಾರ್ಹ ರೀತಿಯನ್ನು ಅಮೆರಿಕದ ನಿರ್ಬಂಧಿತ ವಿಧಾನಕ್ಕೆ ಹೋಲಿಸಿದ್ದಾರೆ. ಅಂದರೆ, ಭಾರತ ಎಲ್ಲರನ್ನೂ ಸ್ವಾಗತಿಸುತ್ತದೆ. ಆದರೆ ಅಮೆರಿಕ ವಲಸಿಗರನ್ನು ಓಡಿಸುವ ಪ್ರವೃತ್ತಿಯನ್ನು ಹೊಂದಿದೆ ಎಂದು ಹೇಳಿದ್ದಾರೆ. ಭಾರತವು ವಿದೇಶಿ ಬ್ಲಾಕ್‌ಚೈನ್ ಮತ್ತು AI ಬಿಲ್ಡರ್​​​​ಗಳನ್ನು ಸ್ವಾಗತಿಸುತ್ತಿದೆ. ಈ ಕಾರಣಕ್ಕೆ ನನಗೆ 5 ವರ್ಷಗಳ ವೀಸಾ ನೀಡಿದೆ ಎಂದು ಹೇಳಿದ್ದಾರೆ.

ಇಲ್ಲಿದೆ ನೋಡಿ ಪೋಸ್ಟ್​​:

ಭಾರತ ವಿದೇಶಿಗರಿಗೂ ಅವಕಾಶವನ್ನು ನೀಡುತ್ತಿದೆ. ಈ ಮೂಲಕ ತನ್ನ ದೇಶದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದೆ. ಆದರೆ ಟ್ರಂಪ್ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅಮೆರಿಕ ವಿದೇಶಿಗರಿಗೆ ಕಿಕ್ ರಾಕ್ ಮಾಡುತ್ತಿದೆ.  ಆದರೆ ಭಾರತ ಸ್ವಾಗತ ಭಾಯ್ ಎಂದು ಹೇಳುತ್ತಿದೆ. ಈ ಮೂಲಕ ಟ್ರಂಪ್​​​​​ ವಿಧಾನಕ್ಕೂ ಹಾಗೂ ಭಾರತ ಪ್ರಧಾನಿ ಮೋದಿಯ ನೀತಿಗೂ ಇರುವ ವ್ಯತ್ಯಾಸವನ್ನು ತಿಳಿಸಿದ್ದಾರೆ. ಎಕ್ಸ್​​​ನಲ್ಲಿ ಟೋನಿ ಕ್ಲೋರ್ ತಮ್ಮ ವೀಸಾ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ B-1 ವೀಸಾವನ್ನು ಸೆಪ್ಟೆಂಬರ್ 23, 2025 ರಂದು ನೀಡಲಾಯಿತು ಮತ್ತು ಸೆಪ್ಟೆಂಬರ್ 22, 2030 ರವರೆಗೆ ಮಾನ್ಯವಾಗಿರುತ್ತದೆ. B-1 ವೀಸಾವು ಸಾಮಾನ್ಯವಾಗಿ ಸಭೆಗಳು, ಭೇಟಿ, ವಾಣಿಜ್ಯ ಅವಕಾಶಗಳ ಉದ್ದೇಶಗಳಿಗಾಗಿ ನೀಡಲಾಗುತ್ತದೆ.

ಇದನ್ನೂ ಓದಿ: ಅಬ್ಬಬ್ಬಾ, ಬೆಂಗಳೂರಿನಲ್ಲಿ ಮನೆ ಕೆಲಸದವರಿಗೆ ತಿಂಗಳಿಗೆ 45 ಸಾವಿರ ರೂ. ವೇತನ ನೀಡುವ ರಷ್ಯಾದ ಮಹಿಳೆ

ಭಾರತೀಯ ರಾಯಭಾರ ಕಚೇರಿಗಳ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, B-1 ವೀಸಾ ಭಾರತದಲ್ಲಿ ವ್ಯಾಪಾರ ಉದ್ಯಮಗಳನ್ನು ಸ್ಥಾಪಿಸಲು ಬಯಸುವ ವಿದೇಶಿಯರಿಗೆ ಇದನ್ನು ನೀಡಲಾಗುತ್ತದೆ. ಕೈಗಾರಿಕಾ ಅಥವಾ ವ್ಯಾಪಾರ ಉದ್ಯಮವನ್ನು ಸ್ಥಾಪಿಸಲು, ಇದು ಕೈಗಾರಿಕಾ, ವಾಣಿಜ್ಯ ಅಥವಾ ಗ್ರಾಹಕ ವಸ್ತುಗಳನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಭಾರತಕ್ಕೆ ಭೇಟಿ ನೀಡಲು” ಅನುಮತಿಸುತ್ತದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್