Ram Navami Violence: ಪ್ರೆಸಿಡೆನ್ಸಿ ವಿವಿಯಲ್ಲಿ ಪಾನಕ, ಕೋಸಂಬರಿ ಹಂಚಲು ವಿರೋಧ; ಹಿಂದೂಪರ‌ ಸಂಘಟನೆಯಿಂದ ವಿವಿ ಮುಂದೆ ಪ್ರತಿಭಟನೆ

|

Updated on: Mar 30, 2023 | 6:28 PM

ಬೆಂಗಳೂರಿನ ದೇವನಹಳ್ಳಿಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ರಾಮ ನವಮಿ ಪ್ರಯುಕ್ತ ಪ್ರಸಾದ ವಿತರಿಸುತ್ತಿರುವಾಗ ಕೆಲವರು ಇದನ್ನು ವಿರೋಧಿಸಿದ್ದಾರೆ. ಇದೆ ವಿಚಾರಕ್ಕೆ ಕ್ಯಾಂಪಸ್​ನಲ್ಲಿ ಗಲಾಟೆಯಾಗಿದೆ. ನಂತರ ಸ್ಥಳಕ್ಕೆ ರಾಜಾನುಕುಂಟೆ ಪೊಲೀಸರು ಬೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದ್ದಾರೆ

Ram Navami Violence: ಪ್ರೆಸಿಡೆನ್ಸಿ ವಿವಿಯಲ್ಲಿ ಪಾನಕ, ಕೋಸಂಬರಿ ಹಂಚಲು ವಿರೋಧ; ಹಿಂದೂಪರ‌ ಸಂಘಟನೆಯಿಂದ ವಿವಿ ಮುಂದೆ ಪ್ರತಿಭಟನೆ
Ram Navami Violence in Presidency College campus protest for not allowing to distribute prasad
Follow us on

ಎಲ್ಲೆಡೆ ನೋಡಿದರು ರಾಮ ನವಮಿಯ (Ram Navami) ಸಂಭ್ರಮ ಮನೆ ಮಾಡಿದೆ. ಮನೆ, ಮಠ, ದೇಗುಲಗಳಲ್ಲಿ ಕೋಸಂಬರಿ, ಪಾನಕ ಮತ್ತು ಮಜ್ಜಿಗೆಯನ್ನು ಪ್ರಸಾದವಾಗಿ ಎಲ್ಲರಿಗೂ ಹಂಚುತ್ತಿದ್ದಾರೆ. ಎಲ್ಲರು ಖುಷಿಯಿಂದ ಹಬ್ಬವನ್ನು (Festival) ಆಚರಿಸುತ್ತಿರುವ ಸಂದರ್ಭದಲ್ಲಿ ಬೆಂಗಳೂರಿನ ಒಂದು ಕಾಲೇಜಿನಲ್ಲಿ ಪ್ರಸಾದ ನೀಡುವ ವಿಚಾರಕ್ಕೆ ಗಲಾಟೆಯಾಗಿದೆ (protest). ನಂತರ ಪೊಲೀಸರು ಬಂದು ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಬೆಂಗಳೂರಿನ ದೇವನಹಳ್ಳಿಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ರಾಮ ನವಮಿ ಪ್ರಯುಕ್ತ ಪ್ರಸಾದ ವಿತರಿಸುತ್ತಿರುವಾಗ ಕೆಲವರು ಇದನ್ನು ವಿರೋಧಿಸಿದ್ದಾರೆ. ಇದೆ ವಿಚಾರಕ್ಕೆ ಕ್ಯಾಂಪಸ್​ನಲ್ಲಿ ಗಲಾಟೆಯಾಗಿದೆ.

ಬೆಂಗಳೂರು ನಗರ ಜಿಲ್ಲೆಯಲಹಂಕ ತಾಲೂಕಿನ ದಿಬ್ಬೂರು ಬಳಿಯ ಪ್ರೆಸಿಡೆನ್ಸಿ ಯೂನಿವರ್ಸಿಟಿಯಲ್ಲಿ ಮಧ್ಯಾಹ್ನ ಕೇಸರಿ ಶಾಲು ಹಾಕಿಕೊಂಡು ಪಾನಕ, ಕೋಸಂಬರಿ ಹಂಚಲು ಕೆಲವರು ಹೋಗಿದ್ದರು. ಹೀಗಾಗಿ ಶಾಲು ಹಾಕ್ಕೊಂಡು ವಿವಿ ಒಳಗಡೆ ಪ್ರಸಾದ ಹಂಚುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರು. ಇದೆ ವಿಷಯಕ್ಕೆ ಪ್ರಸಾದ ಹಂಚುವವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಗಲಾಟೆ ಹೆಚ್ಚಾಗುತ್ತಿದ್ದಂತೆ ಹಿಂದೂಪರ‌ ಸಂಘಟನೆಗಳು ವಿವಿ ಮುಂದೆ ಪ್ರತಿಭಟನೆ ಪ್ರಾರಂಭಿಸಿದರು. ಕೇಸರಿ ಶಾಲು ಹಾಕ್ಕೊಂಡು ಬಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.

ನಂತರ ಸ್ಥಳಕ್ಕೆ ರಾಜಾನುಕುಂಟೆ ಪೊಲೀಸರು ಬೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದ್ದಾರೆ. ಗಲಾಟೆ ಮಾಡಿದವರು ವಿದ್ಯಾರ್ಥಿಗಳ, ಅಥವಾ ಹೊರಗಿನವರ ಎಂಬುದು ಇನ್ನು ತಿಳಿದುಬಂದಿಲ್ಲ.

ಇದನ್ನೂ ಓದಿ: ಸಿದ್ದರಾಮಯ್ಯ ನಿವಾಸದ ಮುಂದೆ ಗದ್ದಲ: ವಿವಿಧ ಕ್ಷೇತ್ರಗಳ ಟಿಕೆಟ್​ ಆಕಾಂಕ್ಷಿಗಳ ಬೆಂಬಲಿಗರಿಂದ ಹೈಡ್ರಾಮಾ

ಎರಡು ತಿಂಗಳ ಹಿಂದೆಯಷ್ಟೇ ಇದೆ ಪ್ರೆಸಿಡೆನ್ಸಿ ವಿವಿಯಲ್ಲಿ ವಿದ್ಯಾರ್ಥಿನಿಯ ಕೊಲೆಯಾಗಿ ಬಹಳಷ್ಟು ಸುದ್ದಿಯಾಗಿತ್ತು. ಪ್ರೆಸಿಡೆನ್ಸಿ ವಿವಿ ಕ್ಯಾಂಪಸ್ ಒಳಗೆ ಲಯಸ್ಮಿತ ಎಂಬ ವಿದ್ಯಾರ್ಥಿನಿಯನ್ನು ಪವನ್‌ ಕಲ್ಯಾಣ್‌ ಎಂಬುವವನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಅಲ್ಲದೆ, ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಪವನ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹದಿನಾರು ದಿನದ ಬಳಿಕ ಆರೋಪಿ ಪವನ್‌ ಬದುಕುಳಿದಿದ್ದ, ಪವನ್‌ಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

Published On - 6:22 pm, Thu, 30 March 23