ರಾಜ್ಯದ ಹಲವು ಕಡೆ ಶೋಭಾಯಾತ್ರೆ ಆರಂಭ; ಡೊಳ್ಳು ಕುಣಿತ ಡಿಜೆ ಜೊತೆ ಭರ್ಜರಿ ಸ್ಟೆಪ್ಸ್, ಶೋಭಯಾತ್ರೆಯಲ್ಲೂ ಕಂಡು ಬಂದ ಭಾವೈಕ್ಯತೆ

| Updated By: ಆಯೇಷಾ ಬಾನು

Updated on: Apr 10, 2022 | 12:23 PM

ಕಲಬುರಗಿಯಲ್ಲಿ ನಡೆಯುತ್ತಿರುವ ಶ್ರೀರಾಮನವಮಿ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಶೋಭೆಯಾತ್ರೆ ಹಿನ್ನೆಲೆ ಮುಸ್ಲಿಂ ಬಾಂಧವರು ಜ್ಯೂಸ್, ತಂಪು ಪಾನಿಯ ವ್ಯವಸ್ಥೆ ಮಾಡಿದ್ದಾರೆ. ಕಲಬುರಗಿ ನಗರದ ಖಾದ್ರಿ ಚೌಕ್ ನಲ್ಲಿ ತಪ್ಪು ಪಾನಿಯ ವ್ಯವಸ್ಥೆ ಮಾಡಿದ್ದಾರೆ.

ರಾಜ್ಯದ ಹಲವು ಕಡೆ ಶೋಭಾಯಾತ್ರೆ ಆರಂಭ; ಡೊಳ್ಳು ಕುಣಿತ ಡಿಜೆ ಜೊತೆ ಭರ್ಜರಿ ಸ್ಟೆಪ್ಸ್, ಶೋಭಯಾತ್ರೆಯಲ್ಲೂ ಕಂಡು ಬಂದ ಭಾವೈಕ್ಯತೆ
ಶೋಭಾಯಾತ್ರೆ
Follow us on

ಬೆಂಗಳೂರು: ಕರುನಾಡಿನಲ್ಲಿ ಇಂದು ಶ್ರೀರಾಮನವಮಿ(Rama Navami) ಸಂಭ್ರಮ ಮನೆ ಮಾಡಿದೆ. ಎಲೆಲ್ಲೂ ರಾಮನ ಜಪ ಶುರುವಾಗಿದೆ. ರಾಮನವಮಿ ಹಿನ್ನೆಲೆ ರಾಜ್ಯದ ಅನೇಕ ಕಡೆ ಶೋಭಾಯಾತ್ರೆ(Shobha Yatra) ಕಾರ್ಯಕ್ರಮ ಕೈಗೊಳ್ಳಲಾಗಿದೆ. ಶ್ರೀರಾಮನವಮಿ ಪ್ರಯುಕ್ತ ಚನ್ನಪಟ್ಟಣದ ಡೂಮ್ ಲೈಟ್ ಸರ್ಕಲ್ನಿಂದ ಮಂಗಳವಾರಪೇಟೆ ನಗರದ ವರೆಗೂ ಶೋಭಾಯಾತ್ರೆ ಮಾಡಲಾಗುತ್ತಿದೆ. ಶ್ರೀ ರಾಮ ಸೇವಾ ಸಮಿತಿವತಿಯಿಂದ ಬೊಂಬೆನಗರಿ ಚನ್ನಪಟ್ಟಣದಲ್ಲಿ ಬೃಹತ್ ಶೋಭಾಯಾತ್ರೆ ಕೈಗೊಳ್ಳಲಾಗಿದೆ. ಶೋಭಾಯಾತ್ರೆಯಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪಾಲ್ಗೊಳ್ಳಲಿದ್ದು ಶೋಭಾಯಾತ್ರೆ ಹೋಗುವ ಮಾರ್ಗ ಕೇಸರಿಮಯವಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ರಾಮನಗರ ಜಿಲ್ಲೆ ಚನ್ನಪಟ್ಟಣದ ಡೂಮ್ ಲೈಟ್​ ವೃತ್ತದಲ್ಲಿ ಶೋಭಾಯಾತ್ರೆ ವೇಳೆ ಬೆಂಕಿ ತಗುಲಿ ಹಿಂದೂಪರ ಸಂಘಟನೆ ಕಾರ್ಯಕರ್ತನಿಗೆ ಗಾಯಗಳಾಗಿವೆ. ಸ್ವಸ್ತಿಕ್​ ಚಿತ್ರದ ಮೇಲೆ ಪೆಟ್ರೋಲ್ ಬಿದ್ದು ಬೆಂಕಿ​ ಹೊತ್ತಿಕೊಂಡಿದೆ.

ಬೆಂಗಳೂರಿನಲ್ಲಿ ಆರ್ಎಸ್ಎಸ್ ವತಿಯಿಂದ ಯಾತ್ರೆ
ಆರ್ಎಸ್ಎಸ್ ಕಾರ್ಯಕರ್ತರು ಶೋಭಾಯಾತ್ರೆ ಶ್ರೀರಾಮ ರಥ ಸಿದ್ಧವಾಗಿದ್ದು ಹೊಸಕೆರೆಹಳ್ಳಿ ಭವಾನಿ ಶಂಕರ ದೇವಾಲಯದಿಂದ ಹರೇಹಳ್ಳಿಯ ಹನುಮಗಿರಿ ಬೆಟ್ಟದ ವರೆಗೆ ಶೋಭಾಯಾತ್ರೆ ನಡೆಯಲಿದೆ. ಶ್ರೀ ಮಧುಸೂದನಾನಂದ ಪುರಿ ಸ್ವಾಮೀಜಿ, ಓಂಕಾರ ಆಶ್ರಮ‌ ಚನ್ನಸಂದ್ರರವರು ಶೋಭಾಯಾತ್ರೆಗೆ ಚಾಲನೆ ನೀಡಿದ್ದಾರೆ. ಡೊಳ್ಳು ಕುಣಿತ ಜೊತೆ ಆರ್ಎಸ್ಎಸ್ ಕಾರ್ಯಕರ್ತರ ಶೋಭಯಾತ್ರೆ ಮಾಡುತ್ತಿದ್ದಾರೆ. ಶೋಭಾಯಾತ್ರೆಯ ದಾರಿಯುದ್ದಕ್ಕೂ ಪಾನಕ ಮಜ್ಜಿಗೆ ಕೊಸಂಬರಿ ವಿತರಣೆ ಮಾಡಲಾಗುತ್ತಿದೆ. ಇನ್ನು ಪದ್ಮನಾಭನಗರದಲ್ಲಿ ಸಚಿವ ಅಶೋಕ್ ನೇತೃತ್ವದಲ್ಲಿ ಶ್ರೀರಾಮರಥಯಾತ್ರೆ ಕಾರ್ಯಕ್ರಮಕ್ಕೆ ನಡೆಯುತ್ತಿದೆ. ವಾಜಪೇಯಿ ಮೈದಾನದಲ್ಲಿ ಶ್ರೀರಾಮರಥಯಾತ್ರೆ ಕಾರ್ಯಕ್ರಮ ನಡೆಯುತ್ತಿದ್ದು ಮಂತ್ರಾಲಯದ ಶ್ರೀಗಳು, ಕಾಗಿನೆಲೆ ಈಶ್ವರಾನಂದಪುರಿ ಶ್ರೀಗಳು, ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಗಳು ಭಾಗಿಯಾಗಿದ್ದಾರೆ.

ಶೋಭಾಯಾತ್ರೆಯಲ್ಲಿ ಮೊಳಗಿದ ಕಾಶಿ ಮಥುರಾ ಘೋಷಣೆ
ಇನ್ನು ಬೆಂಗಳೂರಿನಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಅಯೋಧ್ಯೆ ಆಯ್ತು, ಕಾಶಿ ಮಥುರಾ ಬಾಕಿ ಎಂಬ ಘೋಷಣೆ ಮೊಳಗಿದೆ. “ಹೇ ತೋ ಬೀ ಝಕೀ ಹೇ.. ಕಾಶಿ ಮಥುರಾ ಬಾಕಿ ಹೇ” ಎಂದು ಹಿಂದೂಪರ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಅಯೋಧ್ಯ ತೋ ಸೀರ್ಫ್ ಝಾಂಕಿ ಹೇ.. ಕಾಶಿ ಮಥುರಾ ಬಾಕಿ ಹೇ ಎಂದು ಕೂಗಿದ್ದಾರೆ.

ಕಲಬುರಗಿ ನಗರದಲ್ಲಿ ರಾಮನವಮಿ ಪ್ರಯುಕ್ತ ಶೋಭಾಯಾತ್ರೆ
ಕಲಬುರಗಿ ನಗರದಲ್ಲಿ ಶ್ರೀರಾಮನವಮಿ ಪ್ರಯುಕ್ತ ಭರ್ಜರಿ ಕಾರ್ಯಕ್ರಮ ಜರುಗಲಿದೆ. ಕಲಬುರಗಿ ನಗರದಾದ್ಯಂತ ಮದ್ಯ ಮಾರಾಟ ನಿಷೇಧ ಮಾಡಿ, ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕಾರ ಆದೇಶ ಮಾಡಿದ್ದಾರೆ. ಕಲಬುರಗಿ ನಗರದಲ್ಲಿ ಶ್ರೀರಾಮಶೋಭಾಯಾತ್ರೆ ಆರಂಭವಾಗಿದ್ದು ರಾಮತೀರ್ಥದಿಂದ ಶ್ರೀರಾಮಶೋಭಾಯಾತ್ರೆ ಹೊರಟಿದೆ. ಮೆರವಣಿಗೆಯಲ್ಲಿ ರಾಮ ಭಕ್ತರು ಕುಣಿದು ಕುಪ್ಪಳಿಸುತ್ತಿದ್ದಾರೆ. ಇನ್ನು ವಿಶೇಷವೆಂದರೆ ಶೋಭಾಯಾತ್ರೆಯಲ್ಲಿ ಇತ್ತೀಚೆಗೆ ನಿಧನರಾಗಿರೋ ಅನೇಕ ಮಹನೀಯರ ಭಾವಚಿತ್ರವನ್ನೂ ಮೆರವಣಿಗೆ ಮಾಡಲಾಗುತ್ತಿದೆ. ಬಿಪಿನ್ ರಾವತ್, ಲತಾ ಮಂಗೇಶ್ಕರ್, ಪುನಿತ್ ರಾಜಕುಮಾರ ಮತ್ತು ಹಿಂದು ಕಾರ್ಯಕರ್ತ ಹರ್ಷ ಭಾವಚಿತ್ರಗಳು ರಾರಾಜಿಸುತ್ತಿವೆ.

ಕಲಬುರಗಿಯಲ್ಲಿ ನಡೆಯುತ್ತಿರುವ ಶ್ರೀರಾಮನವಮಿ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಶೋಭೆಯಾತ್ರೆ ಹಿನ್ನೆಲೆ ಮುಸ್ಲಿಂ ಬಾಂಧವರು ಜ್ಯೂಸ್, ತಂಪು ಪಾನಿಯ ವ್ಯವಸ್ಥೆ ಮಾಡಿದ್ದಾರೆ. ಕಲಬುರಗಿ ನಗರದ ಖಾದ್ರಿ ಚೌಕ್ ನಲ್ಲಿ ತಪ್ಪು ಪಾನಿಯ ವ್ಯವಸ್ಥೆ ಮಾಡಿದ್ದಾರೆ. ಶ್ರೀರಾಮನ ಭಕ್ತರಿಗಾಗಿ ಜ್ಯೂಸ್ ತಂಪು ಪಾನಿಯ ವಿತರಿಸಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ರಾಮ ನವಮಿಯಂದು ಮುಸ್ಲಿಂ ಬಾಂಧವರು ಇದೇ ರೀತಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಶೋಭಾಯಾತ್ರೆಯಲ್ಲಿ ರಾರಾಜಿಸಿದ ಬಿಪಿನ್ ರಾವತ್, ಲತಾ ಮಂಗೇಶ್ಕರ್, ಪುನಿತ್ ರಾಜಕುಮಾರ್ ಚಿತ್ರ

ಇದನ್ನೂ ಓದಿ: Rama Navami 2022: ತುಮಕೂರಿನಲ್ಲಿ ಕೇಸರಿ ಶಾಲು ಧರಿಸಿ ಪಾನಕ ಹಂಚಿ ರಾಮನವಮಿ ಆಚರಿಸಿದ ಹಿಂದೂ ಮುಸ್ಲಿಮರು

ಪುನೀತ್​, ಡಾ. ರಾಜ್​ ಬಗ್ಗೆ ಶ್ರುತಿಗೆ ಇದ್ದ 2 ಆಸೆ ಈಡೇರಲೇ ಇಲ್ಲ; ‘ದ್ವಿತ್ವ’ ಬಗ್ಗೆ ಮಾತಾಡಿದ ನಟಿ

Published On - 12:09 pm, Sun, 10 April 22