ಬೆಂಗಳೂರು: ಗ್ಯಾರಂಟಿಗಳ ಜಾರಿ ಬಗ್ಗೆ ಜೂನ್ 1ರವರೆಗೆ ಕಾಯುತ್ತೇವೆ. ಷರತ್ತುಗಳು ಇಲ್ಲದೆ ಗ್ಯಾರಂಟಿಗಳನ್ನು ಜಾರಿಮಾಡಬೇಕು(Congress Guarantee). ಒಂದು ವೇಳೆ ಷರತ್ತು ವಿಧಿಸಿದರೆ ಜೂನ್ 1ರಿಂದ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಂಸದ ಪ್ರತಾಪ್ ಸಿಂಹ(Prathap Simha) ಎಚ್ಚರಿಕೆ ನೀಡಿದ್ದರು. ಸದ್ಯ ಈ ಬಗ್ಗೆ ನೂತನ ಸಚಿವ ರಾಮಲಿಂಗಾರೆಡ್ಡಿ(Ramalinga Reddy) ತಿರುಗೇಟು ನೀಡಿದ್ದಾರೆ. ಪ್ರತಾಪ್ ಸಿಂಹ ಯಾವ ಪ್ರತಿಭಟನೆ ಮಾಡುವುದು ಬೇಕಿಲ್ಲ. ಎಲ್ಲ ಬೇಡಿಕೆ ಈಡೇರಿಸುತ್ತೇವೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ನೂತನ ಸಚಿವ ರಾಮಲಿಂಗಾರೆಡ್ಡಿ ಅವರು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಪ್ರತಾಪ್ ಸಿಂಹ ಯಾವ ಪ್ರತಿಭಟನೆ ಮಾಡುವುದು ಬೇಕಿಲ್ಲ. ನಮ್ಮ ಸರ್ಕಾರ ಬಂದು ಒಂದು ವಾರ ಆಗಿದೆ. ನಾವು ಎಲ್ಲ ಬೇಡಿಕೆ ಈಡೇರಿಕೆ ಮಾಡ್ತೀವಿ. ಕಳೆದ ಬಿಜೆಪಿ ಸರ್ಕಾರ 600 ಭರವಸೆ ನೀಡಿತ್ತು ಇದರಲ್ಲಿ 60 ಅಷ್ಟೇ ಈಡೇರಿಸಿದೆ. ಪ್ರಧಾನಿ ಪ್ರತಿಯೊಬ್ಬರಿಗೂ $15 ಲಕ್ಷ ನೀಡುವುದಾಗಿ ಹೇಳಿದ್ರು. ಎಲ್ಲರ ಖಾತೆಗೂ ಹಣ ಹಾಕಿದ್ರಾ ಅಂತಾ ರಾಮಲಿಂಗಾರೆಡ್ಡಿ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಷರತ್ತುಗಳಿಲ್ಲದೆ ಗ್ಯಾರಂಟಿ ಜಾರಿಮಾಡಬೇಕು, ಇಲ್ಲಾಂದ್ರೆ ಜೂನ್ 1ರಿಂದ ಹೋರಾಟ: ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಈ ವರ್ಷ ಮಾತುಗಾರರು ಎಲ್ಲ ಮನೆ ಸೇರಿದ್ದಾರೆ. ಸಿಟಿ ರವಿ, ಡಾ. ಕೆ. ಸುಧಾಕರ್, ಪಿ ರಾಜೀವ್ ಹಾಗೂ ರೇಣುಕಾಚಾರ್ಯ ಎಲ್ಲರೂ ಮನೆ ಸೇರಿದ್ದಾರೆ ಎಂದರು. ಇನ್ನು ಇದೇ ವೇಳೆ ರಾಮಲಿಂಗಾರೆಡ್ಡಿ ಅವರು ಕಾರ್ಯಕರ್ತರಿಗೆ ಕರೆಂಟ್ ಬಿಲ್ ಕಟ್ಟದಂತೆ ಕರೆ ನೀಡಿದ್ದ ಹೆಚ್ಡಿ ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ನಾವು ನೀಡಿರುವ ಗ್ಯಾಂರಟಿ ಈಡೇರಿಸುತ್ತೇವೆ. ಎಲ್ಲ ಮಾಹಿತಿ ತಗೆದುಕೊಳ್ಳುತ್ತಿದ್ದೇವೆ. ಬಹುತೇಕ ಇಂದು ಸಂಪುಟ ವಿಸ್ತರಣೆ ಆಗುತ್ತೆ. 99% ನಾಳೆ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಬಹುದು ಎಂದರು.
ಇಂದಿರಾ ಕ್ಯಾಂಟೀನ್ ಆರಂಭ ಮಾಡಿದ್ದೆ ಕಾಂಗ್ರೆಸ್ ಸರ್ಕಾರ. ಪ್ರತಿ ವಿಧಾನಸಭಾ ಕ್ಷೇತ್ರ ಹಾಗೂ ಆಸ್ಪತ್ರೆಯಲ್ಲಿ ಕ್ಯಾಂಟೀನ್ ಆರಂಭ ಮಾಡಲಾಗಿದೆ. ಬಿಜೆಪಿ ಸರ್ಕಾರ ಬಂದ ನಂತರ ಹಣ ನೀಡದೇ ಮುಚ್ಚಿ ಹೋಗಿತ್ತು. ಪ್ಲಾನ್ ಮಾಡಿ ಕ್ಯಾಂಟೀನ್ ಕ್ಲೋಸ್ ಮಾಡಿದ್ರು. ಈ ಸಂಬಂಧ ನಾವು ಹೋರಾಟ ಕೂಡ ಮಾಡಿದ್ದೇವೆ. ಹಿಂದಿನ ಸರ್ಕಾರದ ನಿರ್ಲಕ್ಷ್ಯ ದಿಂದ ಮುಚ್ಚಿ ಹೋಗಿತ್ತು. ಬೆಂಗಳೂರಿಗೆ ಬೇರೆ ಬೇರೆ ಊರಿಂದ ಜನರು ಬರ್ತಾರೆ. ಬೆಂಗಳೂರಿಗರಿಗೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಆಗಲಿ ಅಂತಾ ಐದು ರೂಪಾಯಿಗೆ ತಿಂಡಿ, ಹತ್ತು ರೂಪಾಯಿಗೆ ಊಟ ನೀಡಲಾಗುತ್ತಿದೆ. ನೀರಿನ ಸಮಸ್ಯೆ ಇತ್ತು ಈಗ ಅದನ್ನ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸರ್ಕಾರ ಮುಂದೆ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಅಧಿಕಾರಿಯನ್ನ ನೇಮಕ ಮಾಡಿದ್ರೆ ಒಳ್ಳೆಯದು. ಸ್ವಚ್ಚತೆ ಕಾಪಾಡಲು, ಊಟ ನಿರ್ವಹಣೆ, ಟೋಕನ್ನ ಎಲ್ಲವನ್ನೂ ನಿರ್ವಹಣೆಗೆ ಅಧಿಕಾರಿಯ ನೇಮಕವಾದ್ರೆ ಉತ್ತಮ. ಕ್ವಾಲಿಟಿ, ಕ್ವಾಂಟಿಟಿ ಚೆನ್ನಾಗಿ ಮಾಡುತ್ತೆವೆ. ಇಂದಿರಾ ಕ್ಯಾಂಟೀನ್ ಹೆಸರು ಬಿಜೆಪಿ ಅವರಿಗೆ ಸಹಿಸಿಕೊಳ್ಳಲು ಆಗ್ತಿಲ್ಲ. ಇಂದಿರಾಗಾಂಧಿ ಹೆಸರು ಅಂದ್ರೆ ಅವರಿಗೆ ಯಾಕಿಷ್ಟು ಬೇಸರ ಗೊತ್ತಿಲ್ಲ ಎಂದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ