BBMP: ಜೂನ್ 1ರಿಂದ ಪೌರ ಕಾರ್ಮಿಕರಿಗೆ ಬಿಸಿಯೂಟ ಬಂದ್; ತಿಂಡಿ ವೆಚ್ಚ ಅಕೌಂಟ್​ಗೆ ಜಮಾ

ತಿಂಡಿ ಹಣ ನೇರವಾಗಿ ಪೌರಕಾರ್ಮಿಕರ ಬ್ಯಾಂಕ್ ಖಾತೆಗೆ ಜಮಾ ಮಾಡಲೂ ಪ್ಲಾನ್ ಮಾಡಲಾಗಿದೆ. ಬಿಸಿಯೂಟ ಬದಲಿಗೆ ನೇರವಾಗಿ ಪೌರ ಕಾರ್ಮಿಕರ ಅಕೌಂಟ್ ಗೆ 50 ರೂ ಹಣ ವರ್ಗಾವಣೆ ಮಾಡಲಾಗುತ್ತೆ.

BBMP: ಜೂನ್ 1ರಿಂದ ಪೌರ ಕಾರ್ಮಿಕರಿಗೆ ಬಿಸಿಯೂಟ ಬಂದ್; ತಿಂಡಿ ವೆಚ್ಚ ಅಕೌಂಟ್​ಗೆ ಜಮಾ
ಪ್ರಾತಿನಿಧಿಕ ಚಿತ್ರImage Credit source: deccanherald.com
Follow us
ಆಯೇಷಾ ಬಾನು
|

Updated on:May 26, 2023 | 11:53 AM

ಬೆಂಗಳೂರು: ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಆಡಳಿತಕ್ಕೆ ಬರುತ್ತಿದ್ದಂತೆ ಬಹಳಷ್ಟು ಬದಲಾವಣೆಗೆ ಮುಂದಾಗಿದೆ(Congress Government). ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಹಲವು ವಿಚಾರಗಳ ಬಗ್ಗೆ ಖಡಕ್ ಸೂಚನೆ, ಬಿಜೆಪಿ ಅಧಿಕಾರ ಅವಧಿಯಲ್ಲಿ ನಡೆದ ಹಗರಣಗಳ ಮರು ತನಿಖೆ, ಇಂದಿರಾ ಕ್ಯಾಂಟಿನ್​ಗೆ(Indira Canteen)ಮರು ಜೀವ ಹೀಗೆ ಒಂದರಮೇಲೊಂದರಂತೆ ಅನೇಕ ಬದಲಾವಣೆಗೆ ಕಾಂಗ್ರೆಸ್ ಮುಂದಾಗಿದೆ. ಇದರ ನಡುವೆ ಈಗ ಬಿಬಿಎಂಪಿಯ(BBMP)ಮೇಜರ್ ಸರ್ಜರಿ ಶುರುವಾಗಿದೆ. ಅದಮ್ಯ ಚೇತನ, ಇಸ್ಕಾನ್ ಬಿಸಿಯೂಟಕ್ಕೆ ಬ್ರೇಕ್ ಹಾಕಲು ಮುಂದಾಗಿದೆ.

ಜೂನ್ ಒಂದರಿಂದ ಪೌರ ಕಾರ್ಮಿಕರಿಗೆ ಬಿಸಿಯೂಟ ಬಂದ್ ಆಗಲಿದೆ. ದಿನ ಬೆಳಿಗ್ಗೆ, ಮಧ್ಯಾಹ್ನ ಅದಮ್ಯ ಚೇತನ, ಇಸ್ಕಾನ್ ಸಂಸ್ಥೆಗಳ ಮೂಲಕ ಪೌರ ಕಾರ್ಮಿಕರಿಗೆ ತಿಂಡಿ ಹಾಗೂ ಬಿಸಿಯೂಟ ನೀಡಲಾಗುತ್ತಿತ್ತು. ಈ ಊಟದಲ್ಲಿ ಉಪ್ಪು ಇಲ್ಲ, ಖಾರ ಇಲ್ಲ, ರುಚಿಯಂತೊ ಮೊದ್ಲೆ ಇಲ್ಲ ಅಂತ ಪೌರಕಾರ್ಮಿಕರು ಬಿಬಿಎಂಪಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಸಿಯೂಟಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮುಂದಾಗಿದ್ದು ಜೂನ್ 1 ರಿಂದ ಬಿಸಿಯೂಟ ಬಂದ್ ಆಗಲಿದೆ.

ಇದನ್ನೂ ಓದಿ: Bengaluru Rain: ಕೆಲವೇ ಗಂಟೆ ಸುರಿದ ಮಳೆಗೆ ಬೆಂಗಳೂರು ತತ್ತರ, ಬಿಬಿಎಂಪಿಯ ನಿರ್ಲಕ್ಷದಿಂದ ಕಾಡಿದೆ ಜಲಗಂಡಾಂತರ?

ಬಿಬಿಎಂಪಿಯಲ್ಲಿ ಗುತ್ತಿಗೆ ಆಧಾರದಲ್ಲಿ 15, 700 ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 4 ವರ್ಷಗಳಿಂದ ಅದಮ್ಯ ಚೇತನ ಹಾಗೂ ಇಸ್ಕಾಂ ಸಂಸ್ಥೆಗಳ ಮೂಲಕ ಬಿಸಿಯೂಟ ಪೂರೈಕೆ ಮಾಡಲಾಗುತ್ತಿದೆ. ಆಹಾರ ಪೂರೈಕೆಯ ವೆಚ್ಚವನ್ನು ಪಾಲಿಕೆ ಭರಿಸುತ್ತಿತ್ತು. ಪೌರಕಾರ್ಮಿಕರು ಆಹಾರದ ಬಗ್ಗೆ ಒಂದಲ್ಲ ಒಂದು ರೀತಿ ಅಸಮಾಧಾನ ವ್ಯಕ್ತಪಡಿಸುತ್ತಿದ್ರು. ಪೂರೈಕೆಯಾಗುತ್ತಿದ್ದ ಆಹಾರದಲ್ಲಿ ಶೇ.30 ರಿಂದ 4೦ ರಷ್ಟು ಪೌರಕಾರ್ಮಿಕರು ಮಾತ್ರ ಊಟ ಮಾಡುತ್ತಿದ್ದು ಉಳಿದ ಆಹಾರ ನಿತ್ಯ ವ್ಯರ್ಥವಾಗುತ್ತಿತ್ತು. ಈಗ ಇದಕ್ಕೆ ಬ್ರೇಕ್ ಹಾಕಲು ಬಿಬಿಎಂಪಿ ಹೊಸ ಯೋಜನೆ ಜಾರಿ ಮಾಡಿದೆ. ಬಿಸಿಯೂಟದ ಮೊತ್ತವನ್ನು ಪೌರಕಾರ್ಮಿಕರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುವ ಬಗ್ಗೆ ಈ ಹಿಂದೆ ಚರ್ಚೆ ನಡೆಸಲಾಗಿತ್ತು. ಜೊತೆಗೆ ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸಿದೆ. ತಿಂಡಿ ಹಣ ನೇರವಾಗಿ ಪೌರಕಾರ್ಮಿಕರ ಬ್ಯಾಂಕ್ ಖಾತೆಗೆ ಜಮಾ ಮಾಡಲೂ ಪ್ಲಾನ್ ಮಾಡಲಾಗಿದೆ. ಬಿಸಿಯೂಟ ಬದಲಿಗೆ ನೇರವಾಗಿ ಪೌರ ಕಾರ್ಮಿಕರ ಅಕೌಂಟ್ ಗೆ 50 ರೂ ಹಣ ವರ್ಗಾವಣೆ ಮಾಡಲಾಗುತ್ತೆ. ಪ್ರತಿ ಊಟಕ್ಕೆ ಜಿಎಸ್‌ಟಿ ಸೇರಿದಂತೆ ಸುಮಾರು 5೦ ರೂ ನೀಡಲು ಇಲಾಖೆ ನಿರ್ಧರಿಸಿದೆ. ಈ ಹಣದಲ್ಲಿ ಅವರು ತಮಗೆ ಅನುಕೂಲವಾಗುವ ಕಡೆ ತಿಂಡಿ ಮಾಡಬಹುದಾಗಿದೆ. ಪ್ರತಿ ತಿಂಗಳು ಒಂದೇ ಬಾರಿ ಪೌರಕಾರ್ಮಿಕ ಅಕೌಂಟ್ ಗೆ ಹಣ ವರ್ಗಾವಣೆ ಮಾಡಲಾಗುತ್ತೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:43 am, Fri, 26 May 23