Bengaluru Rain: ಕೆಲವೇ ಗಂಟೆ ಸುರಿದ ಮಳೆಗೆ ಬೆಂಗಳೂರು ತತ್ತರ, ಬಿಬಿಎಂಪಿಯ ನಿರ್ಲಕ್ಷದಿಂದ ಕಾಡಿದೆ ಜಲಗಂಡಾಂತರ?

ಕಳೆದ 3 ತಿಂಗಳಿಂದ ಚುನಾವಣಾ ಕೆಲಸಗಳನ್ನೇ ಮಾಡ್ತಿದ್ದೇವೆ ಎನ್ನುತ್ತಿದ್ದ ಪಾಲಿಕೆ, ಇದರ ಮಧ್ಯೆ ಮಳೆ ಎದುರಿಸಲು ಬೇಕಾದ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಹೀಗಾಗಿ ಮಳೆಗಾಲದ ಆರಂಭದಲ್ಲಿಯೇ ಮಳೆ ಸಮಸ್ಯೆ ಎದುರಾಗಿದೆ.

Bengaluru Rain: ಕೆಲವೇ ಗಂಟೆ ಸುರಿದ ಮಳೆಗೆ ಬೆಂಗಳೂರು ತತ್ತರ, ಬಿಬಿಎಂಪಿಯ ನಿರ್ಲಕ್ಷದಿಂದ ಕಾಡಿದೆ ಜಲಗಂಡಾಂತರ?
ಮಳೆ
Follow us
|

Updated on: May 26, 2023 | 7:37 AM

ಬೆಂಗಳೂರು: ಕಳೆದ ವರ್ಷ ಬೆಂಗಳೂರಿನಲ್ಲಿ(Bengaluru Rain) ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಕೆರೆಯಂತಾಗಿದ್ವು. ವಾಹನಗಳು ಸಂಚರಿಸುತ್ತಿದ್ದ ರಸ್ತೆಗಳಲ್ಲಿ ಬೋಟ್‌ಗಳ ಸಂಚಾರ ಆರಂಭವಾಗಿತ್ತು. ಕೆಲವು ಪ್ರದೇಶಗಳಲ್ಲಂತೂ ರಸ್ತೆಯಲ್ಲೇ ಮೀನು ಹಿಡಿಯೋ ದೃಶ್ಯಗಳೂ ಕಂಡುಬಂದಿತ್ತು. ಕೋಟ್ಯಾಂತರ ರೂಪಾಯಿ ಕೊಟ್ಟು ವಿಲ್ಲಾ ಖರೀದಿಸಿದ್ದೋರೆಲ್ಲಾ ಮನೆಗಳಿಗೆ ನೀರು ನುಗ್ಗಿ ಕಂಗಾಲಾಗೋಗಿದ್ರು. ಆದ್ರೆ, ಈ ಬಾರಿ ಆ ಥರ ಆಗೋದಿಲ್ಲ. ಬಿಬಿಎಂಪಿ ಎಲ್ಲದಕ್ಕೂ ರೆಡಿಯಾಗಿದೆ ಅಂತೇನಾದ್ರೂ ಅಂದುಕೊಂಡಿದ್ರೆ, ನಿಮ್ಮ ಊಹೆ ಖಂಡಿತಾ ತಪ್ಪು. ಬಿಬಿಎಂಪಿ(BBMP) ನಿಮ್ಮ ನಂಬಿಕೆಯನ್ನು ಉಲ್ಟಾ ಮಾಡೋದ್ರಲ್ಲಿ ಸಂಶಯವೇ ಇಲ್ಲ. ಇನ್ನೊಂದಡೆ ಪಾದಚಾರಿ ಮಾರ್ಗಗಳು ಅಪಾಯಕ್ಕೆ ಬಾಯ್ತೆರೆದು ನಿಂತಿವೆ.

ಬಿಬಿಎಂಪಿಯ ನಿರ್ಲಕ್ಷದಿಂದ ನಗರಕ್ಕೆ ಕಾಡಿದೆ ಜಲಗಂಡಾಂತರ?

ಕಳೆದ 3 ತಿಂಗಳಿಂದ ಚುನಾವಣಾ ಕೆಲಸಗಳನ್ನೇ ಮಾಡ್ತಿದ್ದೇವೆ ಎನ್ನುತ್ತಿದ್ದ ಪಾಲಿಕೆ, ಇದರ ಮಧ್ಯೆ ಮಳೆ ಎದುರಿಸಲು ಬೇಕಾದ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಹೀಗಾಗಿ ಮಳೆಗಾಲದ ಆರಂಭದಲ್ಲಿಯೇ ಮಳೆ ಸಮಸ್ಯೆ ಎದುರಾಗಿದೆ. ಪಾಲಿಕೆಯ ಚುನಾವಣೆ ಕೂಡಾ ನಡೆಯದೇ ಇರೋದ್ರಿಂದ ವಾರ್ಡ್ ಮಟ್ಟದಲ್ಲೂ ಅಭಿವೃದ್ಧಿಯೂ ಇಲ್ಲದಂತಾಗಿದೆ. ಸಿಎಂ ಎಚ್ಚರಿಕೆ ಬೆನ್ನಲೆ ಈಗ ಪಾಲಿಕೆ ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿತೋಡೋ ಕೆಲಸ ಮಾಡ್ತಿದೆ.

ಪ್ರತೀ ವರ್ಷ ಮಳೆಗಾಲಕ್ಕೂ ಮೊದಲೇ, ಬೀಳುವ ಹಂತದಲ್ಲಿರೋ ಹಾಗೂ ಒಣಗಿದ ಮರಗಳನ್ನು ತೆರವು ಮಾಡ್ತಿದ್ದ ಪಾಲಿಕೆ, ಈ ವರ್ಷ ಯವುದೇ ಕೆಲಸ ಮಾಡಿಲ್ಲ. ಇನ್ನು, ಮಳೆ ಹಾನಿಯಾಗೋ ಸೂಕ್ಷ್ಮ ಪ್ರದೇಶ ಪಟ್ಟಿ ಮಾಡಿ ನೆರೆ ತಪ್ಪಿಸಲು ಯತ್ನಿಸ್ತಿದ್ದ ಪಾಲಿಕೆ, ಈ ಬಾರಿ ಯಾವುದೇ ಪ್ರಯತ್ನಕ್ಕೂ ಕೈ ಹಾಕಿಲ್ಲ. ಕಳೆದ ಬಾರಿ ಮಳೆ ಹಾನಿಯಾದಾಗ ಒತ್ತುವರಿ ತೆರವಿಗೆ ಮುಂದಾಗಿದ್ದ ಪಾಲಿಕೆ, ಒತ್ತುವರಿ ತೆರವಾದ ಪ್ರದೇಶದಲ್ಲಿ ಇಂದಿಗೂ ರಾಜಕಾಲುವೆ ನಿರ್ಮಿಸಿಲ್ಲ. ಇದ್ರಿಂದಾಗಿ ಈ ಬಾರಿಯೂ ರಸ್ತೆಯಲ್ಲಿ ಬೋಟ್‌ಗಳ ಸಂಚಾರ ಕಂಡುಬರುತ್ತೆ ಅನ್ನೋದನ್ನು ಸಾಬೀತು ಮಾಡಲಿದೆ. ಆದ್ರೆ ಪಾಲಿಕೆ ಆಯುಕ್ತರು ಮಾತ್ರ ಇಲ್ಲ ನಾವು ಕಂಪ್ಲೀಟ್ ಸಿದ್ಧತೆ ಮಾಡಿಕೊಂಡಿದ್ದೇವೆ ಅಂತಿದ್ದಾರೆ.

ಇದನ್ನೂ ಓದಿ: Bangalore News: ಮೂಲಸೌಕರ್ಯಕ್ಕಾಗಿ ಬಂಡೇಮಠ ಕೆಎಚ್.ಬಿ. ನಿವಾಸಿಗಳ ಪ್ರತಿಭಟನೆ; ಕಾಮಗಾರಿ ಪೂರ್ಣಗೊಳಿಸಲು ಬಿಬಿಎಂಪಿಗೆ ಒತ್ತಾಯ

ಅಂಡರ್ ಪಾಸ್ ಆಯ್ತು ಈಗ ಅಪಾಯಕ್ಕೆ ಆಹ್ವಾನ ನೀಡ್ತೀವೆ ಪಾದಚಾರಿ ಮಾರ್ಗಗಳು

ಅಂಡರ್ ಪಾಸ್ ಆಯ್ತು ಈಗ ಅಪಾಯಕ್ಕೆ ಬಾಯ್ತೆರದು ನಿಂತಿವೆ ಪಾದಚಾರಿ ಮಾರ್ಗಗಳು. ಪಾದಚಾರಿ ಸಂಚಾರ ಮಾರ್ಗಗಳೂ ಅಪಾಯಕ್ಕೆ ಅಹ್ವಾನ ನೀಡಿದ್ದಂತಿವೆ. ಜೋರು ಮಳೆ ಬಂದ್ರೆ ಬೆಂಗಳೂರಿನ ಪಾದಚಾರಿ ಮಾರ್ಗಗಳಲ್ಲಿಯೂ ನೀರು ತುಂಬಿಲೊಳ್ಳುತ್ತದೆ ಮಳೆಗಾಲದಲ್ಲಿ ಪಾದಚಾರಿ ಸುರಂಗ ಮಾರ್ಗಗಳ ಮೊರೆ ಹೋದ್ರೆ ಅಪಘಾತ ಫಿಕ್ಸ್ ಎನ್ನುವಂತಾಗಿದೆ. ಬಹುತೇಕ್ ಪಾದಚಾರಿ ಮಾರ್ಗಗಳು ಪುಟ್ ಪಾತ್ ಹೊಂದಿಕೊಂಡಿರುವುದರಿಂದ ಪುಟ್ ಪುತ್ ಹಾಗೂ ರಸ್ತೆಯ ನೀರು ಪಾದಚಾರಿ ಮಾರ್ಗಕ್ಕೆ ನುಗ್ಗುವ ಸಾದ್ಯತೆ ಇದೆ ಒಂದೊಮ್ಮೆ ದೊಡ್ಡ ಮಳೆ ಬಂದ ಟೈಮ್ ನಲ್ಲಿ ಪಾದಚಾರಿ ಮಾರ್ಗಗಳ ಮೊರೆ ಹೋದ್ರೆ ಅಪಾಯ ಫಿಕ್ಸ್ ಎನ್ನಲಾಗಿದೆ

ಒಟ್ನಲ್ಲಿ ಪಾದಚಾರಿ ಸಂಚಾರಿ ಮಾರ್ಗಗಳು ಅಪಾಯಕ್ಕೆ ಅವಕಾಶ ಮಾಡುವಂತಿದ್ದು ಪರ್ಯಾಯ ಕ್ರಮಗಳ ಬಗ್ಗೆ ಚಿಂತನೆ ಶುರು ಮಾಡಿದೆ ಮತ್ತೊಂದಡೆ ಮುಖ್ಯ ರಾಜಕಾಲುವೆ ಹೂಳು ಅಲ್ಪಸಲ್ಪ ತೆಗೆದಿರೋ ಬಿಬಿಎಂಪಿ, ರಾಜಾಕಾಲುವೆಗೆ ಸಂಪರ್ಕ ಕಲ್ಪಿಸೋ ಪ್ರೈಮರಿ ಹಾಗೂ ಸೆಕೆಂಡರಿ ಹಂತದ ಕಾಲುವೆಗಳ ಹೂಳೆತ್ತಿಲ್ಲ. ಇನ್ನೊಂದೆಡ, ಕೈಗೆತ್ತಿಕೊಂಡ ಕಾಮಗಾರಿಗಳನ್ನೂ ಪೂರ್ಣಗೊಳಿಸಿಲ್ಲ. ಹೀಗಾಗಿ ಮಳೆ ಬಂದಾಗ ಅನಾಹುತದ ಪ್ರಮಾಣ ಹೆಚ್ಚುತ್ತಿದ್ದು, ಮಳೆ ಗಾಲ ಆರಂಭಕ್ಕೂ ಮುನ್ನವೇ ಜನ ಪರದಾಡುವಂತಾಗ್ತಿದೆ. ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ಈ ವರ್ಷವೂ ಜನರು ಪರದಾಟ ಫಿಕ್ಸ್ ಅನ್ನೋದಂತೂ ಸತ್ಯ.

ವರದಿ: ವಿನಯಕುಮಾರ್ ಕಾಶಪ್ಪನವರ್, ಟಿವಿ9

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ