Bengaluru News: ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಮೇಲೆ 55 ಕೋಟಿ ರೂಪಾಯಿ ನಕಲಿ ಕಾಮಗಾರಿ ನಡೆಸಿದ್ದ ಆರೋಪ; ಲೋಕಾಯುಕ್ತ ದಾಳಿ
ಇತ್ತೀಚೆಗೆ ಲಂಚ ತೆಗೆದುಕೊಳ್ಳುವ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಅದರಂತೆ ಲೋಕಾಯುಕ್ತ (Lokayukta) ಪೊಲೀಸರು ಫುಲ್ ಆ್ಯಕ್ಟೀವ್ ಆಗಿದ್ದು, ಇದೀಗ ದೇವರಾಜ್ ಅರಸ್ ಟ್ರಕ್ ಟರ್ಮಿನಲ್ನಲ್ಲಿ ಬಹುಕೋಟಿ ಹಗರಣ ನಡೆದ ಆರೋಪದ ಮೇಲೆ ದಾಳಿ ಮಾಡಿದ್ದಾರೆ.
ಬೆಂಗಳೂರು: ಇತ್ತೀಚೆಗೆ ಲಂಚ ತೆಗೆದುಕೊಳ್ಳುವ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಅದರಂತೆ ಲೋಕಾಯುಕ್ತ (Lokayukta) ಪೊಲೀಸರು ಫುಲ್ ಆ್ಯಕ್ಟೀವ್ ಆಗಿದ್ದಾರೆ. ಒಂದೇ ತಿಂಗಳಲ್ಲಿ ರಾಜ್ಯದ 9 ಕಡೆಗಳಲ್ಲಿ ದಾಳಿ ಮಾಡಲಾಗಿದೆ. ಅದರಂತೆ ಇದೀಗ ದೇವರಾಜ್ ಅರಸ್ ಟ್ರಕ್ ಟರ್ಮಿನಲ್ (Devraj Urs Truck Terminal) ನಲ್ಲಿ ಬಹುಕೋಟಿ ಹಗರಣ ನಡೆದಿದ್ದು, 55 ಕೋಟಿ ರೂಪಾಯಿ ನಕಲಿ ಕಾಮಗಾರಿ ನಡೆಸಿದ್ದ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ ಬೆಂಗಳೂರಿನ ಯಶವಂತಪುರದಲ್ಲಿ ಡಿವೈಎಸ್ಪಿ ಪ್ರಕಾಶ್ ರೆಡ್ಡಿ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳು ಮೂರು ನಕಲಿ ಕಂಪನಿಗಳಿಗೆ ಗುತ್ತಿಗೆ ನೀಡಿರುವುದು ಬೆಳಕಿಗೆ ಬಂದಿದೆ.
40,000 ರೂ. ಲಂಚಕ್ಕೆ ಬೇಡಿಕೆ: ಮುಂಗಡವಾಗಿ 5 ಸಾವಿರ ರೂ. ಸ್ವೀಕರಿಸುವಾಗ ಗ್ರಾಮ ಪಂಚಾಯತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ
ಮಂಡ್ಯ: ತಾಲೂಕಿನ ಬೇಲೂರು ಗ್ರಾಮ ಪಂಚಾಯತಿ ಕಾರ್ಯದರ್ಶಿ ದಯಾನಂದ್ ಎಂಬಾತ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿತ್ತು. ಮಂಜುನಾಥ್ ಎಂಬುವರ ಇ-ಸ್ವತ್ತು ಮಾಡಿಕೊಡಲು 40,000 ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಕಾರ್ಯದರ್ಶಿ. ಮುಂಗಡವಾಗಿ 5,000 ರೂ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ. ಇನ್ನು ಲಂಚ ಕೇಳಿದ ಸಂಬಂಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದ ಮಂಜುನಾಥ್, ಈ ಹಿನ್ನೆಲೆ ಲೋಕಾಯುಕ್ತ ಡಿವೈಎಸ್ಪಿ ಸುನೀಲ್ ಕುಮಾರ್ ನೇತೃತ್ವದಲ್ಲಿ ದಾಳಿ ಮಾಡಲಾಗಿ, ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ.
ಇದನ್ನೂ ಓದಿ:ಲೋಕಾಯುಕ್ತ ಬಲೆಗೆ ಬಿದ್ದ ಚಿಕ್ಕೋಡಿ ಭೂದಾಖಲೆಗಳ ಸಹಾಯಕ ನಿರ್ದೇಶಕ
ಮೃತ ಹಸುವಿನ ಪೋಸ್ಟ್ ಮಾರ್ಟ್ಂ ರಿಪೋರ್ಟ್ ನೀಡಲು ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದಿದ್ದ ಪಶು ವೈದ್ಯಾಧಿಕಾರಿ
ಚಿತ್ರದುರ್ಗ: ಅದರಂತೆ ಹಸುವಿನ ಮರಣೋತ್ತರ ಪರೀಕ್ಷೆ ವರದಿ ನೀಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಪಶು ವೈದ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿರುವಂತಹ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದಲ್ಲಿ ನಡೆದಿತ್ತು. ಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿದ್ದು, ಚಿಕ್ಕಜಾಜೂರು ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ. ತಿಪ್ಪೇಸ್ವಾಮಿ ಬಲೆಗೆ ಬಿದ್ದಿದ್ದ. ಮೃತ ಹಸುವಿನ ಪೋಸ್ಟ್ ಮಾರ್ಟ್ಂ ರಿಪೋರ್ಟ್ ನೀಡಲು ಕಾಗಳಗೆರೆ ಗ್ರಾಮದ ರೈತ ಎಸ್.ಸ್ವಾಮಿಯಿಂದ 7,000 ರೂ. ಲಂಚ ಸ್ವೀಕರಿಸುತ್ತಿದ್ದರು ಎನ್ನಲಾಗಿತ್ತು.
13 ಸಾವಿರ ಲಂಚ ಪಡೆಯುತ್ತಿದ್ದ ದಸ್ತು ಬರಹಗಾರ ಲೋಕಾಯುಕ್ತ ಬಲೆಗೆ
ದಾವಣಗೆರೆ: ಲಂಚ ಪಡೆಯುತ್ತಿದ್ದ ದಸ್ತು ಬರಹಗಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದ. ದಾವಣಗೆರೆ ಜಿಲ್ಲೆ ಹರಿಹರ ಪಟ್ಟಣದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದಸ್ತು ಬರಹಗಾರ ಪರಮೇಶ್ವರ್ ಎಂಬುವವರು 13 ಸಾವಿರ ಹಣ ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಪರಮೇಶ್ವರ್ನನ್ನು ಬಂಧಿಸಿದ್ದರು.
ಇದನ್ನೂ ಓದಿ:ಮಧ್ಯ ಪ್ರದೇಶ: ತಿಂಗಳ ಸಂಬಳ 30 ಸಾವಿರ; ಲೋಕಾಯುಕ್ತ ದಾಳಿ ವೇಳೆ ಪತ್ತೆಯಾಗಿದ್ದು ₹7 ಕೋಟಿ ಮೌಲ್ಯದ ಆಸ್ತಿ
ಮನೆ ಖರೀದಿಯ ಸೇಲ್ ಡೀಡ್ ನೋಂದಣಿ ಪತ್ರ ನೀಡಲು ಹರಿಹರದ ಮಂಜುನಾಥ್ ಎನ್ನುವರ ಬಳಿ ಪರಮೇಶ್ವರ್ 20 ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದ. ಹೀಗಾಗಿ ಮಂಜುನಾಥ್ ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ನಿನ್ನೆ ರಾತ್ರಿ ಸಬ್ ರಿಜಿಸ್ಟರ್ ಕಚೇರಿ ಬಳಿ ಮಂಜುನಾರ್ನಿಂದ 13 ಸಾವಿರ ಲಂಚ ಪಡೆಯುವಾಗ ಪರಮೇಶ್ವರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದ. ಈ ವೇಳೆವ ಅರೋಪಿಯಿಂದ 40 ಸಾವಿರ ನಗದು ಸೇರಿದಂತೆ ವಿವಿಧ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಲೋಕಾಯುಕ್ತ ಎಸ್ಪಿ, ಎಂಎಸ್ ಕೌಲಾಪುರೆ, ಇನ್ಸ್ಪೆಕ್ಟರ್ ರಾಷ್ಟ್ರಪತಿ ಎಚ್ ಎಸ್, ಅಂಜನೇಯ ನೇತೃತ್ವದಲ್ಲಿ ದಾಳಿ ನಡೆದಿತ್ತು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ