AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangalore Rains: ಬೆಂಗಳೂರಿನ 226 ಪ್ರದೇಶಗಳಿಗೆ ಮುಳುಗಡೆ ಭೀತಿ; ಕೆಎಸ್‌ಎನ್‌ಡಿಎಂಸಿ ವರದಿ

ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಸಮಿತಿಯ ಇತ್ತೀಚಿನ ವರದಿಯು ಮುಂಬರುವ ಮಾನ್ಸೂನ್ ಋತುವಿಗೆ ಬೆಂಗಳೂರು ಎಷ್ಟು ಕಳಪೆಯಾಗಿ ಸಿದ್ಧವಾಗಿದೆ ಎಂಬುದರ ಮೇಲೆ ಬೆಳಕು ಚೆಲ್ಲಿದೆ.

Bangalore Rains: ಬೆಂಗಳೂರಿನ 226 ಪ್ರದೇಶಗಳಿಗೆ ಮುಳುಗಡೆ ಭೀತಿ; ಕೆಎಸ್‌ಎನ್‌ಡಿಎಂಸಿ ವರದಿ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:May 26, 2023 | 2:47 PM

ಬೆಂಗಳೂರು: ರಾಜ್ಯದಾದ್ಯಂತ ಮುಂಗಾರುಪೂರ್ವ ಮಳೆ (Pre Monsoon Rain) ಆರಂಭವಾಗಿದ್ದು, ಹಲವೆಡೆ ಈಗಾಗಲೇ ಅನೇಕ ಅನಾಹುತಗಳು ಸಂಭವಿಸಿವೆ. ಬೆಂಗಳೂರಿನಲ್ಲಿಯೂ (Bengaluru) ಹಲವೆಡೆ ಕೃತಕ ನೆರೆ ಪರಿಸ್ಥಿತಿ ಉಂಟಾಗಿದೆ. ಕೆಲವು ದಿನಗಳ ಹಿಂದಷ್ಟೇ ಕೆಆರ್ ಸರ್ಕಲ್ ಅಂಡರ್​ಪಾಸ್​​ನಲ್ಲಿ ಕಾರೊಂದು ನೀರಿನಲ್ಲಿ ಮುಳುಗಿ ಯುವತಿಯೊಬ್ಬರು ಮೃತಪಟ್ಟಿದ್ದರು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಮುಂಗಾರು ಮಳೆಗೆ ಬೆಂಗಳೂರು ಹೇಗೆ ಸಿದ್ಧಗೊಂಡಿದೆ ಮತ್ತು ಮಹಾನಗರದಲ್ಲಿ ಪ್ರವಾಹ ಭೀತಿ ಎದುರಿಸುತ್ತಿರುವ ಎಷ್ಟು ಪ್ರದೇಶಗಳಿವೆ ಎಂಬುದನ್ನು ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಸಮಿತಿಯ (KSNDMC) ಪಟ್ಟಿ ಮಾಡಿದೆ.

ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಸಮಿತಿಯ ಇತ್ತೀಚಿನ ವರದಿಯು ಮುಂಬರುವ ಮಾನ್ಸೂನ್ ಋತುವಿಗೆ ಬೆಂಗಳೂರು ಎಷ್ಟು ಕಳಪೆಯಾಗಿ ಸಿದ್ಧವಾಗಿದೆ ಎಂಬುದರ ಮೇಲೆ ಬೆಳಕು ಚೆಲ್ಲಿದೆ. ಈಗಾಗಲೇ ಇನ್ಫೋಸಿಸ್ ಟೆಕ್ಕಿ ಸೇರಿದಂತೆ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ನಗರದಲ್ಲಿ ಪೂರ್ವ ಮುಂಗಾರು ಮಳೆಯ ನಂತರ ಹಲವಾರು ತಗ್ಗು ಪ್ರದೇಶಗಳು ಜಲಾವೃತವಾಗಿವೆ.

ಕೆಎಸ್‌ಎನ್‌ಡಿಎಂಸಿ ವರದಿಯು ಬೆಂಗಳೂರಿನಲ್ಲಿ ದಿನಕ್ಕೆ 70 ಮಿಮೀ ಮಳೆಯಯಾದರೆ ನಗರದಲ್ಲಿ ಎಷ್ಟು ಪ್ರದೇಶಗಳು ಮುಳುಗಡೆಯಾಗಬಹುದು ಎಂಬುದನ್ನು ಅಂದಾಜಿಸಿದೆ. ಕೆಎಸ್‌ಎನ್‌ಡಿಎಂಸಿ ಪ್ರಕಾರ, ದಿನಕ್ಕೆ 70 ಮಿಮೀ ಮಳೆಯಯಾದರೆ ಸುಮಾರು 226 ಪ್ರದೇಶಗಳಲ್ಲಿ ಮುಳುಗಡೆ ಉಂಟಾಗಲಿದೆ. ಬೆಂಗಳೂರು ದಕ್ಷಿಣ ವಲಯ ಇಂತಹ ಅತಿ ಹೆಚ್ಚು ಸಂಭಾವ್ಯ ಮುಳುಗಡೆ ಪ್ರದೇಶಗಳನ್ನು (61) ಹೊಂದಿದೆ. ನಂತರ ಬೆಂಗಳೂರು ಪಶ್ಚಿಮ 40, ದಕ್ಷಿಣದಲ್ಲಿ 40 ಮತ್ತು ಯಲಹಂಕದಲ್ಲಿ 11 ಸಂಭಾವ್ಯ ಮುಳುಗಡೆ ಪ್ರದೇಶಗಳಿವೆ.

ಸಂಭಾವ್ಯ ಮುಳುಗಡೆ ಪ್ರದೇಶ ಎಲ್ಲೆಲ್ಲಿ ಎಷ್ಟು?

ಬೆಂಗಳೂರು ಪೂರ್ವ – 61 ಬೆಂಗಳೂರು ಪಶ್ಚಿಮ – 40 ಬೆಂಗಳೂರು ದಕ್ಷಿಣ – 40 ಯಲಹಂಕ – 11 ಮಹದೇವಪುರ – 24 ಬೊಮ್ಮನಹಳ್ಳಿ – 24 ಆರ್​ಆರ್​​ ನಗರ – 23 ದಾಸರಹಳ್ಳಿ – 3

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:45 pm, Fri, 26 May 23

ಸ್ಲಿಪ್​ನಲ್ಲಿ ನಿಂತ ವಿಕೆಟ್ ಕೀಪರ್: ಎದುರಾಳಿ ತಂಡಕ್ಕೆ ಸಿಕ್ತು 5 ರನ್​
ಸ್ಲಿಪ್​ನಲ್ಲಿ ನಿಂತ ವಿಕೆಟ್ ಕೀಪರ್: ಎದುರಾಳಿ ತಂಡಕ್ಕೆ ಸಿಕ್ತು 5 ರನ್​
ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಎದೆ ಹಿಡಿದುಕೊಳ್ಳುತ್ತಿದ್ದ ರಾಕೇಶ್ ಪೂಜಾರಿ
ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಎದೆ ಹಿಡಿದುಕೊಳ್ಳುತ್ತಿದ್ದ ರಾಕೇಶ್ ಪೂಜಾರಿ
ಲಷ್ಕರ್ ಉಗ್ರನನ್ನು ಮುಗ್ದ ವ್ಯಕ್ತಿ, ಧರ್ಮ ಪ್ರಚಾರಕ ಎಂದು ಕರೆದ ಪಾಕ್
ಲಷ್ಕರ್ ಉಗ್ರನನ್ನು ಮುಗ್ದ ವ್ಯಕ್ತಿ, ಧರ್ಮ ಪ್ರಚಾರಕ ಎಂದು ಕರೆದ ಪಾಕ್
ಭಾರತ-ಪಾಕ್​ ಮಧ್ಯೆ ಉದ್ವಿಗ್ನ: ಸೈಬರ್ ದಾಳಿ ಬಗ್ಗೆ​ ದಯಾನಂದ್ ಎಚ್ಚರಿಕೆ!​​
ಭಾರತ-ಪಾಕ್​ ಮಧ್ಯೆ ಉದ್ವಿಗ್ನ: ಸೈಬರ್ ದಾಳಿ ಬಗ್ಗೆ​ ದಯಾನಂದ್ ಎಚ್ಚರಿಕೆ!​​
ರಾಕೇಶ್ ಪೂಜಾರಿ ಸಾಯುವುದಕ್ಕೂ ಮೊದಲು ಏನೆಲ್ಲ ಆಯ್ತು? ವಿವರಿಸಿದ ಜಿಜಿ
ರಾಕೇಶ್ ಪೂಜಾರಿ ಸಾಯುವುದಕ್ಕೂ ಮೊದಲು ಏನೆಲ್ಲ ಆಯ್ತು? ವಿವರಿಸಿದ ಜಿಜಿ
Daily Devotional: ಹನುಮಂತನಿಗೆ ಯಾವ ರೀತಿಯ ಹಾರ ಹಾಕಿದರೆ ಏನು ಫಲ?
Daily Devotional: ಹನುಮಂತನಿಗೆ ಯಾವ ರೀತಿಯ ಹಾರ ಹಾಕಿದರೆ ಏನು ಫಲ?
ಮೀನ ರಾಶಿಯವರಿಗೆ ಸ್ಥಾನ ಪಲ್ಲಟ, ಅವಿವಾಹಿತರಿಗೆ ವಿವಾಹ ಯೋಗ ಸಾಧ್ಯತೆ
ಮೀನ ರಾಶಿಯವರಿಗೆ ಸ್ಥಾನ ಪಲ್ಲಟ, ಅವಿವಾಹಿತರಿಗೆ ವಿವಾಹ ಯೋಗ ಸಾಧ್ಯತೆ
ತುಮಕೂರು ರೈಲು ನಿಲ್ದಾಣದಲ್ಲಿ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ
ತುಮಕೂರು ರೈಲು ನಿಲ್ದಾಣದಲ್ಲಿ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ
ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಮಾಡಿದ ಉಪ್ಪಿ ಮತ್ತು ಕುಟುಂಬ
ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಮಾಡಿದ ಉಪ್ಪಿ ಮತ್ತು ಕುಟುಂಬ
ಐಪಿಎಲ್ ಆದಷ್ಟು ಬೇಗ ಆರಂಭವಾಗಲಿದೆ; ರಾಜೀವ್ ಶುಕ್ಲಾ
ಐಪಿಎಲ್ ಆದಷ್ಟು ಬೇಗ ಆರಂಭವಾಗಲಿದೆ; ರಾಜೀವ್ ಶುಕ್ಲಾ