ಕೋರ್ಟ್‌ಗೆ ಯುವತಿಯ ಕರೆತರುವುದಕ್ಕೆ ಅನುಮತಿ ಕೋರಿ ಕೋರ್ಟ್ ರಿಜಿಸ್ಟ್ರಾರ್‌ಗೆ ವಕೀಲ ಜಗದೀಶ್ ಮನವಿ

|

Updated on: Mar 29, 2021 | 12:43 PM

ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಕೋರ್ಟ್‌ಗೆ ಭದ್ರತೆ ವದಗಿಸಲಾಗಿದೆ. ಸಿಡಿ ಲೇಡಿ ಕೋರ್ಟ್‌ಗೆ ಹಾಜರಾಗಲಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ನೇತೃತ್ವದಲ್ಲಿ ಕೋರ್ಟ್ ಬಳಿ ಹೆಚ್ಚುವರಿ ಪೊಲೀಸರು ಮತ್ತು ಟ್ರಾಫಿಕ್ ಪೊಲೀಸರ ನಿಯೋಜನೆ ಮಾಡಲಾಗಿದೆ.

ಕೋರ್ಟ್‌ಗೆ ಯುವತಿಯ ಕರೆತರುವುದಕ್ಕೆ ಅನುಮತಿ ಕೋರಿ ಕೋರ್ಟ್ ರಿಜಿಸ್ಟ್ರಾರ್‌ಗೆ ವಕೀಲ ಜಗದೀಶ್ ಮನವಿ
ವಕೀಲ ಕೆ.ಎನ್.ಜಗದೀಶ್ ಕುಮಾರ್
Follow us on

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್‌ಗೆ ಯುವತಿಯನ್ನು ಕರೆತರುವುದಕ್ಕೆ ಅನುಮತಿ ನೀಡಿ ಎಂದು ಡೆಪ್ಯುಟಿ ರಿಜಿಸ್ಟ್ರಾರ್‌ಗೆ ಯುವತಿ ಪರ ವಕೀಲ ಕೆ.ಎನ್.ಜಗದೀಶ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಮ್ಯಾಜಿಸ್ಟ್ರೇಟ್ ಕೋರ್ಟ್‌ನ ಡೆಪ್ಯುಟಿ ರಿಜಿಸ್ಟ್ರಾರ್ ಬಳಿ ಅನುಮತಿ ನೀಡಲು ಮನವಿ ಮಾಡಿಕೊಂಡಿದ್ದಾರೆ.

ಇನ್ನು ಇಂದು ಬೆಳಗ್ಗೆ ಸಿಡಿಯಲ್ಲಿದ್ದ ಯುವತಿಯಿಂದ ಹೈಕೋರ್ಟ್ ಸಿಜೆಗೆ ಇ ಮೇಲ್ ಮೂಲಕ ಪತ್ರ ಬಂದಿದೆ ಎಂಬ ಮಾಹಿತಿ ಹೊರ ಬಿದ್ದಿತ್ತು. ಇದೇ ಬೆನ್ನಲ್ಲೆ ದೂರುದಾರೆಯನ್ನು ಕೋರ್ಟ್‌ ಮುಂದೆ ಹಾಜರುಪಡಿಸುತ್ತೇವೆ ಎಂದು ವಕೀಲ ಕೆ.ಎನ್.ಜಗದೀಶ್ ಕುಮಾರ್ ತಿಳಿಸಿದ್ದರು. ಅದರಂತೆಯೆ ಈಗ ಯುವತಿಯನ್ನು ಕರೆತರುವುದಕ್ಕೆ ಅನುಮತಿ ಕೇಳಿದ್ದಾರೆ. ಈ ವೇಳೆ ಅವರು ಯುವತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸ್ತೇವೆ. ಜಡ್ಜ್ ಮುಂದೆಯೇ ಯುವತಿ ಹೇಳಿಕೆಯನ್ನು ನೀಡುತ್ತಾರೆ. ರಾಷ್ಟ್ರೀಯ ಪಕ್ಷದ ಅಧ್ಯಕ್ಷರ ಮೇಲೆ ಚಪ್ಪಲಿ ಎಸೆಯುತ್ತಾರೆ. ಹೀಗಾದಾಗ ಯುವತಿಗೆ ಹೇಗೆ ರಕ್ಷಣೆ ಸಿಗುತ್ತೆ ಎಂದು ಪ್ರಶ್ನೆ ಮಾಡಿದ್ದರು. ಆರೋಪಿ ಅರೆಸ್ಟ್ ಆಗದೇ ಒಳ್ಳೆ ವಾತಾವರಣ ನಿರ್ಮಾಣ ಇಲ್ಲ. ಸುಪ್ರೀಂಕೋರ್ಟ್‌ಗೂ ಒಂದು ಅರ್ಜಿಯನ್ನು ಹಾಕುತ್ತೇವೆ ಎಂದು ಟಿವಿ9ಗೆ ಜಗದೀಶ್ ಕುಮಾರ್ ತಿಳಿಸಿದ್ದರು.

ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹೆಚ್ಚುವರಿ ಭದ್ರತೆ
ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಕೋರ್ಟ್‌ಗೆ ಭದ್ರತೆ ವದಗಿಸಲಾಗಿದೆ. ಸಿಡಿ ಲೇಡಿ ಕೋರ್ಟ್‌ಗೆ ಹಾಜರಾಗಲಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ನೇತೃತ್ವದಲ್ಲಿ ಕೋರ್ಟ್ ಬಳಿ ಹೆಚ್ಚುವರಿ ಪೊಲೀಸರು ಮತ್ತು ಟ್ರಾಫಿಕ್ ಪೊಲೀಸರ ನಿಯೋಜನೆ ಮಾಡಲಾಗಿದೆ. ಭದ್ರತೆಗಾಗಿ ಒಬ್ಬರು ಡಿಸಿಪಿ, ಇಬ್ಬರು ಎಸಿಪಿ, 5 ಜನ ಇನ್ಸ್ ಪೆಕ್ಟರ್, 10 ಜನ ಸಬ್ ಇನ್ಸ್ ಪೆಕ್ಟರ್, 100 ಜನ ಪೊಲೀಸ್ ಸಿಬ್ಬಂದಿ ಸೇರಿದಂತೆ 3 ಕೆಎಸ್ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ಜಾರಕಿಹೊಳಿ ಸಿಡಿ ಪ್ರಕರಣವನ್ನು ಕೋರ್ಟ್ ನಿಗಾದಲ್ಲಿ ವಿಚಾರಣೆ ನಡೆಸಬೇಕೆಂದು ಕೋರಿ ಹೈಕೋರ್ಟ್ ಗೆ ಮೊರೆ ಹೊಗುತ್ತೇವೆ – ವಕೀಲ ಜಗದೀಶ್