ರಾಜ್ಯದಲ್ಲಿ ಈ ವರ್ಷ ಯಾರೂ ಸಹ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಲ್ಲ -ಸಚಿವ ಕೆ.ಎಸ್.ಈಶ್ವರಪ್ಪ
ಈ ಬೇಸಿಗೆಯಲ್ಲಿ ಯಾರಿಗೂ ಕುಡಿಯುವ ನೀರಿನ ಕೊರತೆ ಆಗಲ್ಲ ಎಂದು ಕೆ.ಎಸ್.ಈಶ್ವರಪ್ಪ ಅಭಯ ನೀಡಿದ್ದಾರೆ. ಸತತ 3 ವರ್ಷ ಬರ ಇರುವ ಜಿಲ್ಲೆಗೆ 50 ಲಕ್ಷ ರೂ., 2 ವರ್ಷ ಬರ ಇದ್ದ ಜಿಲ್ಲೆಗೆ 35 ಲಕ್ಷ ರೂ. 1 ವರ್ಷ ಬರ ಇದ್ದ ಜಿಲ್ಲೆಗೆ ₹25 ಲಕ್ಷ ಮೀಸಲಿಟ್ಟಿದ್ದೇವೆ ಎಂದರು...
ಬೆಂಗಳೂರು: ರಾಜ್ಯದ ಕೆರೆ, ಕಟ್ಟೆ ಮತ್ತು ಕಲ್ಯಾಣಿಗಳ ಪುನಶ್ಚೇತನ ಮತ್ತು ಅಭಿವೃದ್ಧಿಗೆ ಜಲಶಕ್ತಿ ಅಭಿಯಾನವನ್ನು ಮಾಡಲಾಗುತ್ತಿದ್ದು ಈ ಬಗ್ಗೆ ವಿಕಾಸಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿ ನಡೆಸಿದ್ದಾರೆ. ಹೂಳು ತೆಗೆಯುವುದು, ಬದು ನಿರ್ಮಾಣ, ಗೋ ಕಟ್ಟೆ ಸಂರಕ್ಷಣೆಗೂ ಈ ಅಭಿಯಾನದಡಿ ಕೆಲಸ ಕೈಗೊಳ್ಳಲಾಗುತ್ತೆ. ಏಪ್ರಿಲ್ 9ರಂದು ಹುಬ್ಬಳ್ಳಿಯಲ್ಲಿ ಅಭಿಯಾನಕ್ಕೆ ಚಾಲನೆ ಸಿಗುತ್ತೆ. ನರೇಗಾ ಅಡಿ ಯೋಜನೆಗೆ 100 ದಿನ ಮೀಸಲಿಟ್ಟಿದ್ದೇವೆ. ಕೆರೆ, ಕಟ್ಟೆಗಳು ಒತ್ತುವರಿ ಆಗಿದ್ರೆ ಅದನ್ನು ತೆರವುಗೊಳಿಸಿ ಅಭಿಯಾನ ಮಾಡಲಾಗುತ್ತೆ. ನರೇಗಾ ಯೋಜನೆ ಅಡಿ ಈಗ ನಿತ್ಯ ₹299 ಕೂಲಿ ನೀಡಲಾಗ್ತಿದೆ ಇದು ಪ್ರಧಾನಿ ಅವರ ಕನಸಿನ ಯೋಜನೆ ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಈ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಆಗಲ್ಲ ಈ ಬೇಸಿಗೆಯಲ್ಲಿ ಯಾರಿಗೂ ಕುಡಿಯುವ ನೀರಿನ ಕೊರತೆ ಆಗಲ್ಲ ಎಂದು ಕೆ.ಎಸ್.ಈಶ್ವರಪ್ಪ ಅಭಯ ನೀಡಿದ್ದಾರೆ. ಸತತ 3 ವರ್ಷ ಬರ ಇರುವ ಜಿಲ್ಲೆಗೆ 50 ಲಕ್ಷ ರೂ., 2 ವರ್ಷ ಬರ ಇದ್ದ ಜಿಲ್ಲೆಗೆ 35 ಲಕ್ಷ ರೂ. 1 ವರ್ಷ ಬರ ಇದ್ದ ಜಿಲ್ಲೆಗೆ ₹25 ಲಕ್ಷ ಮೀಸಲಿಟ್ಟಿದ್ದೇವೆ. ಡಿಸಿ ಖಾತೆಯಿಂದ ಕುಡಿಯುವ ನೀರಿಗೆ ಹಣ ಎತ್ತಿಟ್ಟಿದ್ದೇವೆ. ಜತೆಗೆ ಅಗತ್ಯ ಇರುವ ಕಡೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಡಿಸಿಗೆ ಸೂಚನೆ ನೀಡಿದ್ದೇವೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ರು.
ಇನ್ನು ಪ್ರಧಾನಿ ನರೇಂದ್ರ ಮೋದಿ ‘ಮನ್ ಕೀ ಬಾತ್’ನ 74ನೇ ಆವೃತ್ತಿಯಲ್ಲಿ ಜಲ ಸಂರಕ್ಷಣೆಯ ಕುರಿತು ಅರಿವು ಮೂಡಿಸಿದ್ದರು. ಜಲ ಸಂರಕ್ಷಣೆಯ ಕುರಿತು ನಮ್ಮ ಜವಾಬ್ದಾರಿಗಳನ್ನು ಅರಿಯಬೇಕಿದ್ದು, ಕೆಲವೇ ದಿನಗಳಲ್ಲಿ ಜಲಶಕ್ತಿ ಮಂತ್ರಾಲಯ ‘ಕ್ಯಾಚ್ ದಿ ರೇನ್’ (Catch the Rain) ಎಂಬ ಅಭಿಯಾನ ಆರಂಭಿಸಲಿದೆ. ಮಳೆ ಎಲ್ಲಿ ಯಾವಾಗ ಬೀಳುವುದೋ ಅಲ್ಲೇ ಹಿಡಿದಿಟ್ಟುಕೊಳ್ಳಿ ಎಂಬ ಘೋಷಣೆಯೊಂದಿಗೆ ಆರಂಭವಾಗಲಿರುವ ಈ ಅಭಿಯಾನದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನೂ ಪಾಲ್ಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
‘ಮನ್ ಕೀ ಬಾತ್’ನ 74ನೇ ಆವೃತ್ತಿಯಲ್ಲಿ ಈ ಕುರಿತು ವಿವರಿಸಿದ ಅವರು, ‘ನೀರು ಸಂರಕ್ಷಣೆ ಇಂದಿನ ಅನಿವಾರ್ಯವಾಗಿದ್ದು, ಜಲ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಬೇಕು. ಮಾರ್ಚ್ 22ರಂದು ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ. ಈ ತಿಂಗಳ ಬಳಿಕ ಬೇಸಿಗೆ ಕಾಲ ಆರಂಭವಾಗಲಿದ್ದು ನೀರಿನ ಅಭಾವ ಆಗದಂತೆ ತಡೆಯಲು ದಿನನಿತ್ಯದ ಜೀವನದಲ್ಲಿ ನೀರಿನ ಸಂರಕ್ಷಣೆಯನ್ನು ಅನುಸರಿಸಬೇಕು ಎಂದು ವಿವರಿಸಿದ್ದರು.
ಇದನ್ನೂ ಓದಿ: ನೀರೆಚ್ಚರದ ಬದುಕು | ನಾಡಿನ ಜಲಸುರಕ್ಷೆಗೆ ವರದಾನವಾಗಬಲ್ಲ ಇಂಗುಬಾವಿಗಳು