AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರದ ಶ್ರೀ ಭೋಗನಂದೀಶ್ವರ ಸ್ವಾಮಿ ಕ್ಷೇತ್ರದಲ್ಲಿ ಕಳ್ಳತನ; ನಂದಿ ವಿಗ್ರಹದ ಬಲಗಾಲು ಮುರಿದು ಪರಾರಿಯಾದ ಕಳ್ಳರು

ಎರಡು ಮೂರು ಬಾರಿ ದೇವಸ್ಥಾನದ ಹುಂಡಿಗಳನ್ನು ಕದ್ದು ಕಳ್ಳರು ಸೆರೆ ಸಿಕ್ಕಿದ್ದಾರೆ. ಸದ್ಯ ಈಗ ನಡೆದ ಕಳ್ಳತನ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಂದಿಗಿರಿಧಾಮದ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಚಿಕ್ಕಬಳ್ಳಾಪುರದ ಶ್ರೀ ಭೋಗನಂದೀಶ್ವರ ಸ್ವಾಮಿ ಕ್ಷೇತ್ರದಲ್ಲಿ ಕಳ್ಳತನ; ನಂದಿ ವಿಗ್ರಹದ ಬಲಗಾಲು ಮುರಿದು ಪರಾರಿಯಾದ ಕಳ್ಳರು
ಶ್ರೀಭೋಗನಂದೀಶ್ವರ ದೇವಸ್ಥಾನದ ಚಿತ್ರಣ
Follow us
preethi shettigar
| Updated By: guruganesh bhat

Updated on: Mar 29, 2021 | 2:13 PM

ಚಿಕ್ಕಬಳ್ಳಾಪುರ: ದಕ್ಷಿಣ ಕಾಶಿ ಎಂದೆ ಖ್ಯಾತಿಯಾಗಿರುವ ಇತಿಹಾಸ ಪ್ರಸಿದ್ಧ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗ್ರಾಮದಲ್ಲಿರುವ ಶ್ರೀ ಭೋಗನಂದೀಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರೀ ಭೋಗನಂದೀಶ್ವರ ದೇವಸ್ಥಾನದ ನಂದಿ ವಿಗ್ರಹದ ಬಲಗಾಲನ್ನು ದುಷ್ಕರ್ಮಿಗಳು ಮುರಿದಿದ್ದು, ದೇವರ ಕಲ್ಲಿನ ಕಾಲಿನ ಸಮೇತ ಪರಾರಿಯಾಗಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ನಂದಿಗ್ರಾಮದಲ್ಲಿರುವ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯ ಪುರಾಣ ಪ್ರಸಿದ್ಧವಾದದ್ದು. ಆದರೆ ಈ ದೇವಾಲಯದ ಆವರಣದಲ್ಲಿರುವ ಕಮಟೇಶ್ವರ ಶಿವಲಿಂಗದ ಮುಂದೆ ಇರುವ ನಂದಿಯ ಬಲಗಾಲನ್ನು ಕಡಿದು, ವಿಕೃತಿ ಮರೆದಿದ್ದಾರೆ. ಭಾರತೀಯ ಪುರಾತತ್ವ ಹಾಗೂ ಸರ್ವೇಕ್ಷಣ ಇಲಾಖೆಯ ಅದೀನದಲ್ಲಿರುವ ಈ ದೇವಾಲಯದಲ್ಲಿ, ಹೆಜ್ಜೆ ಹೆಜ್ಜೆಗೂ ತಪಾಸಣಾ ಸಿಬ್ಬಂದಿ, ಸಿಸಿಟಿವಿ ಕ್ಯಾಮೆರಾಗಳು ಇವೆ. ಆದರೂ ವಿಗ್ರಹದ ಕಾಲನ್ನು ಯಾರು, ಏಕೆ, ಹೇಗೆ ತುಂಡರಿಸಿ ಕಳ್ಳತನ ಮಾಡಿದರು ಎನ್ನುವುದು ಮಾತ್ರ ಇನ್ನು ತಿಳಿದಿಲ್ಲ ಹೀಗಾಗಿ ಅಧಿಕಾರಿಗಳ ವಿರುದ್ಧ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಪುರಾತನ ಕಾಲದ ಕಲ್ಲಿನ ನಂದಿಯ ವಿಗ್ರಹದ ಬಲಗಾಲನ್ನೇ ತುಂಡರಿಸಿ, ಕದ್ದಿರುವ ಬಗ್ಗೆ ಹಲವು ಅನುಮಾನ ಸಂಶಯಗಳು ಮೂಡಿವೆ. ಅಥರ್ವಣ ವೇದದಲ್ಲಿ ಹೇಳಿರುವಂತೆ ನಖ ಪ್ರಯೋಗ, ನಿಧಿ ನಿಕ್ಷೇಪ, ಹೆಣ್ಣು ವಶೀಕರಣ, ವಾಮಾಚಾರ ಬಳಕೆಗೆ, ಶತ್ರು ಶಕ್ತಿ ಕುಂದಿಸಲು, ಶತ್ರು ಪ್ರತಿಬಂಧಕ ಮಾಡಲು ಪುರಾತನ ಕಾಲದ ವಿಗ್ರಹಗಳ ತುಣುಕುಗಳನ್ನು ಬಳಸುತ್ತಾರೆ ಎನ್ನುವ ಉಲ್ಲೇಖವಿದೆ. ಹೀಗಾಗಿ ದುಷ್ಕರ್ಮಿಗಳು ಅಂತಹ ದುಷ್ಕ್ರತ್ಯಕ್ಕೆ ಬಳಸಲು ಇಂತಹ ಕೃತ್ಯ ಎಸಗಿರಬಹುದು ಎಂದು ದೇವಾಲಯದ ಪುರೋಹಿತರಾದ ಶಶಿಧರ್ ಶರ್ಮಾ ಹೇಳಿದ್ದಾರೆ.

god leg theft

ಕಮಟೇಶ್ವರ ಶಿವಲಿಂಗದ ಮುಂದೆ ಇರುವ ನಂದಿಯ ಬಲಗಾಲು ಕಳ್ಳತನ

ಕಳ್ಳರಿಗೂ ಶ್ರೀ ಭೋಗನಂದೀಶ್ವರ ದೇವಸ್ಥಾನಕ್ಕೂ ಅದೇನು ನಂಟೋ ಗೊತ್ತಿಲ್ಲ. ಏಕೆಂದರೆ ಕೆಲವು ವರ್ಷಗಳ ಹಿಂದೆ ದೇವಸ್ಥಾನದ ಗೋಪುರದ ಮೇಲಿದ್ದ ಕಲ್ಲಿನ ಕಳಸ ಕದ್ದಿದ್ದರು ಅದು ಕೂಡ ಇನ್ನು ಸಿಕ್ಕಿಲ್ಲ. ಎರಡು ಮೂರು ಬಾರಿ ದೇವಸ್ಥಾನದ ಹುಂಡಿಗಳನ್ನು ಕದ್ದು ಕಳ್ಳರು ಸೆರೆ ಸಿಕ್ಕಿದ್ದಾರೆ. ಸದ್ಯ ಈಗ ನಡೆದ ಕಳ್ಳತನ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಂದಿಗಿರಿಧಾಮದ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

god leg theft

ಕಮಟೇಶ್ವರ ಶಿವಲಿಂಗದ ಚಿತ್ರಣ

ಇದನ್ನೂ ಓದಿ:

ವಿಜಯಪುರ ಸರಣಿ ಮನೆ, ದೇವಸ್ಥಾನಗಳ ಕಳ್ಳತನ ಮುಂದುವರಿಕೆ: ಫಿನಾಯಿಲ್ ಮಾರಾಟ ನೆಪದಲ್ಲಿ ಬಂದವರಿಂದ ಕುಕೃತ್ಯ

Belagavi Buffalo | 1,500 ಕೆಜಿ ತೂಗುವ ಬೆಳಗಾವಿಯ ಕೋಣ ‘ಕರ್ನಾಟಕ ಕಿಂಗ್’ ಬಿರುದಾಂಕಿತ! ಪಾಲನೆಗಾಗಿ ಪ್ರತಿದಿನ 1,200 ರೂ ಖರ್ಚು ಮಾಡುವ ರೈತ