ವಿಜಯಪುರ ಸರಣಿ ಮನೆ, ದೇವಸ್ಥಾನಗಳ ಕಳ್ಳತನ ಮುಂದುವರಿಕೆ: ಫಿನಾಯಿಲ್ ಮಾರಾಟ ನೆಪದಲ್ಲಿ ಬಂದವರಿಂದ ಕುಕೃತ್ಯ

8 ಮನೆಗಳಲ್ಲಿದ್ದ ಸುಮಾರು 100 ಗ್ರಾಂ ಚಿನ್ನಾಭರಣ, 150 ಗ್ರಾಂ ಬೆಳ್ಳಿ ಆಭರಣಗಳು, 75,000 ನಗದು ಖದೀಮರ ಪಾಲಾಗಿದೆ. ಇಂಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಣಿ ಮನೆಗಳ ಕಳ್ಳತನ ನಡೆದಿದ್ದು, ಠಾಣೆಯ ಆಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶೀಘ್ರವೇ ಕಳ್ಳರ ಬಂಧಿಸುವ ಭರವಸೆ ನೀಡಿದ್ದು, ಬಂಧನ ಯಾವಾಗ ಎಂಬುದೇ ಜನರ ಚಿಂತೆಯಾಗಿದೆ.

ವಿಜಯಪುರ ಸರಣಿ ಮನೆ, ದೇವಸ್ಥಾನಗಳ ಕಳ್ಳತನ ಮುಂದುವರಿಕೆ: ಫಿನಾಯಿಲ್ ಮಾರಾಟ ನೆಪದಲ್ಲಿ ಬಂದವರಿಂದ ಕುಕೃತ್ಯ
ದೇವಸ್ಥಾನದ ಬಾಗಿಲು ಒಡೆದು ಕಳ್ಳತನ ಮಾಡಿರುವ ಖದೀಮರು
Follow us
preethi shettigar
| Updated By: ಸಾಧು ಶ್ರೀನಾಥ್​

Updated on:Dec 23, 2020 | 9:54 AM

ವಿಜಯಪುರ: ರಾಜ್ಯದಲ್ಲಿ ಯಾವುದೇ ಅಪರಾಧ ಚಟುವಟಿಕೆಗಳು ನಡೆದರೂ ಅದಕ್ಕೂ ವಿಜಯಪುರ ಜಿಲ್ಲೆಗೂ ಸಂಬಂಧ ಇದ್ದೇ ಇರುತ್ತದೆ. ಭೀಮಾತೀರದ ರಕ್ತಸಿಕ್ತ ಆಧ್ಯಾಯದ ಜೊತೆಗೆ ಇಲ್ಲಿ ವಿವಿಧ ಆಯಾಮಗಳಲ್ಲಿ ಅಪರಾದಗಳು ನಡೆದುಕೊಂಡು ಬಂದಿದ್ದು, ಇದು ಹಲವಾರು ಪ್ರಕರಣಗಳಿಂದ ಸಾಬೀತಾಗಿದೆ.

ಹಾಗಿದ್ದರೆ ವಿಜಯಪುರ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ನಿರ್ಲಿಪ್ತವಾಗಿದೆಯಾ? ಕೆಳ ಮಟ್ಟದ ಆಧಿಕಾರಿಗಳು, ಕಾನ್ಸ್​ಸ್ಟೇಬಲ್​ಗಳು, ಗುಪ್ತಚರ ಇಲಾಖೆಯ ಸಿಬ್ಬಂದಿ, ಕರ್ತವ್ಯ ನಿರ್ಲಕ್ಷ್ಯ ಮಾಡುತ್ತಿದ್ದಾರಾ? ಎಂಬ ಹಲವಾರು ಪ್ರಶ್ನೆಗಳು ಉಂಟಾಗುವುದು ಸಾಮಾನ್ಯ.

ಮನೆಗೆ ನುಗ್ಗಿ ಕಳ್ಳರು ದೋಚಿರುವ ಚಿತ್ರಣ

ಹೌದು ಕಳೆದ ವಾರದಿಂದ ಜಿಲ್ಲೆಯಲ್ಲಿ ಸರಣಿ ಮನೆಗಳ ಹಾಗೂ ದೇವಸ್ಥಾನಗಳ ಕಳ್ಳತನ ಪ್ರಕರಣಗಳು ನಡೆದಿವೆ. ಡಿಸೆಂಬರ್ 18 ರಂದು ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಕದೀಮರು ಕೈಚಳ ತೋರಿದ್ದು, ಪಟ್ಟಣದ ನಾರಾಯಣಕರ ಗಲ್ಲಿಯಲ್ಲಿ ಎರಡು ದೇವಸ್ಥಾನಗಳು ಹಾಗೂ ಎಂಟುತ್ತು ಮನೆಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದರು.

ಕರಿದೇವರ ದೇವಸ್ಥಾನದಲ್ಲಿ ದೇವರ ಮೂರ್ತಿಗಳಿಗೆ ಹಾಕಿದ್ದ 40 ಗ್ರಾಂ ಚಿನ್ನಾಭರಣ ಹಾಗೂ 2.5 ಕೇಜಿ ತೂಕದ ದೇವರ ಮೂರ್ತಿಗಳನ್ನು ಕದ್ದಿದ್ದರು. ಬಳಿಕ ವೀರನಾಗಮ್ಮ ದೇವಸ್ಥಾನದಲ್ಲಿದ್ದ ದೇವರ 40 ಗ್ರಾಂ ಚಿನ್ನಾಭರಣ ಕದ್ದು ಓಡಿ ಹೋಗಿದ್ದರು. ಇದರ ಜೊತೆಗೆ ಸುತ್ತಮುತ್ತಲಿನ ಮನೆಗಳಲ್ಲಿನ ನಗದು ಮತ್ತು ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದರು.

ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆ

ಈ ಘಟನೆ ಮಾಹಿತಿ ಪಡೆದ ಆಲಮೇಲ ಪೊಲೀಸ್ ಠಾಣೆಯ ಪಿಎಸ್ಐ ನಿಂಗಪ್ಪ ಪೂಜಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಖದೀಮರನ್ನು ಹೆಡೆಮುರಿ ಕಟ್ಟಿ ಬಂಧಿಸುವುದಾಗಿ ಭರವಸೆ ನೀಡಿದ್ದರು. ಆದರೆ ಘಟನೆ ನಡೆದು 5 ದಿನಗಳಾದರೂ ಒಬ್ಬನೇ ಒಬ್ಬ ಖದೀಮನನ್ನು ಸೆರೆ ಹಿಡಿಯುವುದಕ್ಕೆ ಪೊಲೀಸರಿಗೆ ಸಾಧ್ಯವಾಗಿಲ್ಲಾ.

ಇತ್ತ ಕಡೆ ಕಳ್ಳರ ಸುಳಿವೂ ಇಲ್ಲಾ. ಇಂತಹ ಘಟನೆ ನಡೆಯದಂತೆ ಬಿಗಿ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಜಿಲ್ಲಾ ಪೊಲೀಸ್ ಇಲಾಖೆ ಭರವಸೆ ನೀಡಿದ್ದರೂ ಇದು ಕೇವಲ ಭರವಸೆಯಷ್ಟೇ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ದೇವಿಯ ಮೈ ಮೇಲಿನ ಆಭರಣಗಳನ್ನು ದೋಚಿದ್ದಾರೆ.

ಹೌದು ಕಳೆದ ಡಿಸೆಂಬರ್ 18 ರಂದು ಆಲಮೇಲ ಪಟ್ಟಣದಲ್ಲಿ ಸರಣಿ ಕಳ್ಳತನ ನಡೆದ ಮಾದರಿಯಲ್ಲಿಲೇ ಈಗ ಇಂಡಿ ಪಟ್ಟಣದಲ್ಲಿ ನಡೆದಿದೆ. ಪಟ್ಟನದ ವಾರ್ಡ್ ನಂಬರ್ 17 ರ ಮನೆಗಳಲ್ಲಿ ಸರಣಿ ಕಳ್ಳತನವಾಗಿದೆ. 8 ಮನೆಗಳನ್ನು ಹೊಕ್ಕ ಖದೀಮರು ಅಲ್ಮೇರಾಗಳನ್ನು ಒಡೆದು ಹಾಕಿ ಕೈಗೆ ಸಿಕ್ಕ ನಗದು ಹಾಗೂ ಚಿನ್ನಾಭರಣಗಳನ್ನು ಹೊತ್ತುಕೊಂಡು ಪರಾರಿಯಾಗಿದ್ದಾರೆ.

ಮನೆಯ ಕಬೋಡ್​ಗಳನ್ನು ದೋಚಿರುವ ಖದೀಮರು

8 ಮನೆಗಳಲ್ಲಿದ್ದ ಸುಮಾರು 100 ಗ್ರಾಂ ಚಿನ್ನಾಭರಣ, 150 ಗ್ರಾಂ ಬೆಳ್ಳಿ ಆಭರಣಗಳು, 75,000 ನಗದು ಖದೀಮರ ಪಾಲಾಗಿದೆ. ಇಂಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಣಿ ಮನೆಗಳ ಕಳ್ಳತನ ನಡೆದಿದ್ದು, ಠಾಣೆಯ ಆಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶೀಘ್ರವೇ ಕಳ್ಳರ ಬಂಧಿಸುವ ಭರವಸೆ ನೀಡಿದ್ದು, ಬಂಧನ ಯಾವಾಗ ಎಂಬುದೇ ಜನರ ಚಿಂತೆಯಾಗಿದೆ. ನಾಳೆ ಮತ್ಯಾವ ಪಟ್ಟಣದಲ್ಲಿ ಸರಣಿ ಮನೆಗಳ ಕಳ್ಳತನವಾಗುತ್ತದೆ ಎಂಬ ಭಯದಲ್ಲೇ ಜನರು ಜೀವನ ನಡೆಸುವಂತ್ತಾಗಿದೆ.

ಕಳ್ಳರು ಮನೆಗಳನ್ನು ದೋಇರುವ ಚಿತ್ರಣ

ಜಿಲ್ಲೆಯ ಜನರ ಮಾಹಿತಿ ಪ್ರಕಾರ ಫಿನಾಯಿಲ್ ಮಾರಾಟ ಮಾಡುವ ನೆಪದಲ್ಲಿ ಅಪರಿಚಿತರ ತಂಡ ಸಕ್ರೀಯವಾಗಿದ್ದು, ಪೆನಾಯಿಲ್ ಮಾರುವ ವೇಷದಲ್ಲಿ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡುವ ಗ್ಯಾಂಗ್ ಇದರಲ್ಲಿ ಶಾಮೀಲಾಗಿದೆ ಎಂಬ ಮಾಹಿತಿ ಟಿವಿ9 ಗೆ ಸಿಕ್ಕಿದೆ. ಈ ಫಿನಾಯಿಲ್ ಮಾರಾಟ ಮಾಡಲು ಹೋಗುವವರು ಮನೆಗೆ ಬೀಗ ಹಾಕಿರುವುದನ್ನು ಪಾಯಿಂಟ್ ಮಾಡಿಕೊಳ್ಳುತ್ತಿದ್ದಾರೆ.

ಮನೆಯ ಮುಂದೆ ಮೂರ್ನಾಲ್ಕು ದಿನಗಳ ನ್ಯೂಸ್ ಪೇಪರ್ ಬಿದ್ದಿರುವುದನ್ನು ಲಿಸ್ಟ್ ಮಾಡಿಕೊಂಡು, ಬಳಿಕ ರಾತ್ರಿ ಹೊತ್ತು ಯಾವ ಯಾವ ದೇವಸ್ಥಾನಗಳಲ್ಲಿ ಜನರು ಇರುವುದಿಲ್ಲವೋ ಅವುಗಳ ಮಾಹಿತಿ ಮಾಡಿಕೊಳ್ಳುತ್ತಾರೆ. ನಂತರ ಅಂತಹ ಪ್ರದೇಶದಲ್ಲಿ ಸರಣಿ ಕಳ್ಳತನ ಮಾಡಿ ಪರಾರಿಯಾಗುತ್ತಾರೆ.

ಇಂತಹ ಫಿನಾಯಿಲ್ ಅಥವಾ ಇತರೆ ವಸ್ತುಗಳನ್ನು ಮಾರಾಟ ಮಾಡಲು ಆಗಮಿಸುವ ಅಪರಿಚಿತರ ಮೇಲೆ ಸಾರ್ವಜನಿಕರು ನಿಗಾ ವಹಿಸಬೇಕು. ಗಲ್ಲಿ ಗಲ್ಲಿಯಲ್ಲಿ ವಿನಾ ಕಾರಣ ತಿರುಗಾಡಿದರೆ ಸ್ಥಳಿಯ ಪೊಲೀಸರಿಗೆ ಮಾಹಿತಿ ನೀಡಬೇಕು. ಪೊಲೀಸರು ಸಹ ತ್ವರಿತ ಕಾರ್ಯಾಚರಣೆ ನಡೆಸಿ ಇಂತಹ ಖದೀಮರ ಹೆಡೆಮುರಿ ಕಟ್ಟಿದರೆ ಜನರಲ್ಲಿಯೂ ಪೊಲೀಸರ ಬಗ್ಗೆ ವಿಶ್ವಾಸ ಮೂಡುತ್ತದೆ. ಇಲ್ಲವಾದರೆ ಕಳ್ಳರ ಕರಾಮತ್ತು ಮುಂದುವರೆಯುವುದರಲ್ಲಿ ಯಾವುದೇ ಸಂಶಯವಿಲ್ಲಾ.

ದುರ್ಗದಲ್ಲಿ ಮತ್ತೆ ಬಿಜೆಪಿ ಶಾಸಕರ ಮನೆಗೆ ಕನ್ನ ಹಾಕಿದ ಖದೀಮರು

Published On - 7:51 pm, Tue, 22 December 20

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್