AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ತಡೆಗೆ ಮಾರುಕಟ್ಟೆಗಳಿಗೆ ಹೊಸ ಮಾರ್ಗಸೂಚಿ: ನಿಯಮ ಪಾಲಿಸದಿದ್ದರೆ ಬೀಳುತ್ತೆ ದಂಡ

ಹೋಲ್​ಸೇಲ್​, ರಿಟೇಲ್​, ಮಾಲ್​ಗಳಿಗೆ ನಿಯಮ ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ. ಎಲ್ಲಾ ಮಾರುಕಟ್ಟೆಗಳಲ್ಲಿ 6 ಅಡಿ ದೈಹಿಕ ಅಂತರ ಕಡ್ಡಾಯವಾಗಿ ಪಾಲಿಸೋದು ಕಡ್ಡಾಯವಾಗಿದೆ. ಮಾಸ್ಕ್ ಹಾಗೂ ಗ್ಲೌಸ್​ ಕಡ್ಡಾಯವಾಗಿ ಬಳಸಬೇಕು.

ಕೊರೊನಾ ತಡೆಗೆ ಮಾರುಕಟ್ಟೆಗಳಿಗೆ ಹೊಸ ಮಾರ್ಗಸೂಚಿ: ನಿಯಮ ಪಾಲಿಸದಿದ್ದರೆ ಬೀಳುತ್ತೆ ದಂಡ
ಪ್ರಾತಿನಿಧಿಕ ಚಿತ್ರ
ರಾಜೇಶ್ ದುಗ್ಗುಮನೆ
|

Updated on:Dec 22, 2020 | 9:45 PM

Share

ಬೆಂಗಳೂರು: ಇಂಗ್ಲೆಂಡ್​ನಲ್ಲಿ ಕೊರೊನಾ ವೈರಸ್​ ಮಾರ್ಪಾಡಾಗಿದೆ ಎನ್ನುವ ವಿಚಾರ ಭಾರತದಲ್ಲೂ ಆತಂಕ ಸೃಷ್ಟಿಸಿದೆ. ಈಗಿರುವ ವೈರಸ್​ಗಿಂತ ಶೇ. 70ರಷ್ಟು ವೇಗವಾಗಿ ಈ ವೈರಸ್​ ಹರಡಲಿದೆ ಎಂದು ಕೂಡ ಹೇಳಾಗುತ್ತಿದೆ. ಈ ಮಧ್ಯೆ ಭಾರತದಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಇದರ ಭಾಗವಾಗಿ ಮಾರುಕಟ್ಟೆಗಳಿಗೆ ಸರ್ಕಾರ ಹೊಸ ಮಾರ್ಗಸೂಚಿ ನೀಡಿದೆ.

ಹೋಲ್​ಸೇಲ್​, ರಿಟೇಲ್​, ಮಾಲ್​ಗಳಲ್ಲಿ ನಿಯಮ ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ. ಎಲ್ಲಾ ಮಾರುಕಟ್ಟೆಗಳಲ್ಲಿ 6 ಅಡಿ ದೈಹಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್ ಹಾಗೂ ಗ್ಲೌಸ್​ ಕಡ್ಡಾಯವಾಗಿ ಬಳಸಬೇಕು. ಕೆಮ್ಮುವಾಗ, ಸೀನುವಾಗ ತೀವ್ರ ನಿಗಾವಹಿಸಬೇಕು ಎಂದು ಸರ್ಕಾರ ಹೇಳಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರ ಮೇಲೆ ನಿಷೇಧ ಹೇರಲಾಗಿದೆ. ಪ್ರತಿದಿನ ಎಲ್ಲಾ ಶಾಪ್​ಗಳ ಮುಂದೆ ಸ್ವಚ್ಛ ಮಾಡುವುದು ಕಡ್ಡಾಯವಾಗಿದೆ. ಮಳಿಗೆಗಳ ಎಂಟ್ರಿ ಪಡೆಯುವ ಸ್ಥಳಗಳಲ್ಲಿ ಸ್ಯಾನಿಟೈಸರ್​ ಇಡೋದು ಕಡ್ಡಾಯವಾಗಿದೆ.

ದೈಹಿಕ ಅಂತರ ಉಲ್ಲಂಘಿಸಿದ್ರೆ ದಂಡ ರೂಪಾಂತರ ಹೊಂದಿದ ವೈರಸ್​ ಭಾರತದಲ್ಲಿ ಹರಡದಂತೆ ತಡೆಯಬೇಕು ಎಂದು ಸರ್ಕಾರ ನಿರ್ಧರಿಸಿದೆ. ಹೀಗಾಗಿ, ದೈಹಿಕ ಅಂತರ ಉಲ್ಲಂಘಿಸಿದರೆ ದಂಡ ವಿಧಿಸಲು ನಿರ್ಧಾರಿಸಿದೆ. ದಿನಬಿಟ್ಟು ದಿನ ಮಾರ್ಕೆಟ್, ಶಾಪ್​ ತೆರೆಯುವ ಬಗ್ಗೆ ಚಿಂತನೆ ನಡೆಯುತ್ತಿದೆ. ಒಂದೊಮ್ಮೆ ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಮಾರ್ಕೆಟ್​ ಬಂದ್​ ಮಾಡಲೂ ಚಿಂತನೆ ನಡೆದಿದೆ. ಮಾರುಕಟ್ಟೆಯ ಪ್ರತಿ ಮಳಿಗೆ ಮುಂದೆ ಕ್ಯೂ ವ್ಯವಸ್ಥೆ ಜಾರಿ ಇರಲೇಬೇಕು ಎಂದು ಮಾರುಕಟ್ಟೆ, ಮಾಲ್​ ಮುಖ್ಯಸ್ಥರಿಗೆ ಸರ್ಕಾರ ಸೂಚನೆ ನೀಡಿದೆ.

ಜನರ ನಿಯಂತ್ರಣಕ್ಕೆ ಮಾರ್ಷೆಲ್ಸ್, ಸ್ವಯಂಸೇವಕರು

ಪಾರ್ಕಿಂಗ್ ಲಾಟ್ ಗಳಲ್ಲಿ ನಿಯಮಿತ ವಾಹನ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ. ಗ್ರಾಹಕರ ವಾಹನಗಳಿಗೆ ಪ್ರತ್ಯೇಕ ಆಗಮನ, ನಿರ್ಗಮನ ಮಾಡಬೇಕು ಎಂದು ತಿಳಿಸಿದೆ. ಜನರ ನಿಯಂತ್ರಣಕ್ಕೆ ಮಾರ್ಷೆಲ್ಸ್, ಸ್ವಯಂಸೇವಕರನ್ನುನಿಯೋಜನೆ ಮಾಡಲು ಕೂಡ ನಿರ್ಧರಿಸಲಾಗಿದೆ.

ಕೊರೊನಾ ರೂಪಾಂತರ: ಬ್ರಿಟನ್​ನಿಂದ ಆಗಮಿಸುವವರ ತಪಾಸಣೆಗಾಗಿ ಕೇಂದ್ರದಿಂದ ನಿಯಮಾವಳಿ ಬಿಡುಗಡೆ

Published On - 9:42 pm, Tue, 22 December 20