ರಮೇಶ್ ಜಾರಕಿಹೊಳಿ ಸಾರ್ವಜನಿಕರ 819 ಕೋಟಿ ಹಣ ಲೂಟಿ ಮಾಡಿದ್ದಾರೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಗಂಭೀರ ಆರೋಪ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 26, 2022 | 1:23 PM

ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಇಡಿಗೆ ದೂರು ನೀಡುತ್ತೇನೆ. ರಮೇಶ್ ವಿರುದ್ಧ ನ್ಯಾಯಾಲಯದಲ್ಲೂ ಅರ್ಜಿ ಹಾಕುತ್ತೇನೆ. ಸೌಭಾಗ್ಯಲಕ್ಷ್ಮೀ ಶುಗರ್ ಫ್ಯಾಕ್ಟರಿ ದಿವಾಳಿವೆಂದು ಘೋಷಿಸಲಾಗಿದೆ.

ರಮೇಶ್ ಜಾರಕಿಹೊಳಿ ಸಾರ್ವಜನಿಕರ 819 ಕೋಟಿ ಹಣ ಲೂಟಿ ಮಾಡಿದ್ದಾರೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಗಂಭೀರ ಆರೋಪ
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ವಕ್ತಾರ ಎಂ.ಲಕ್ಷ್ಮಣ
Follow us on

ಬೆಂಗಳೂರು: ರಮೇಶ್ ಜಾರಕಿಹೊಳಿ 819 ಕೋಟಿ ಸಾರ್ವಜನಿಕ ಹಣ ಲೂಟಿ ಮಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ದೇವೇಂದ್ರ ಫಡ್ನವೀಸ್, ಸಿಎಂ ಬೊಮ್ಮಾಯಿ ಅಮಿತ್ ಶಾ ಇದರಲ್ಲಿ ಭಾಗಿಯಾಗಿದ್ದಾರೆ. ಇದುವರೆಗೆ 819 ಕೋಟಿ ಸಾಲಕ್ಕೆ ಇದುವರೆಗೆ ಒಂದೇ ಒಂದು ನೊಟೀಸ್ ಕೊಟ್ಟಿಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ವಕ್ತಾರ ಎಂ.ಲಕ್ಷ್ಮಣ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆ ಬೆಳಗಾವಿಯಲ್ಲಿದೆ. ಸೌಭಾಗ್ಯ ಲಕ್ಷ್ಮಿ ಶುಗರ್ ಕಂಪನಿ ಎಷ್ಟು ಜನರಿಗೆ ಸಾಲ ವಾಪಸ್ ಕೊಡಬೇಕು ಅಂತ ಅವರೇ ದಾಖಲೆ‌ ನೀಡಿದ್ದಾರೆ. ವಿವಿಧ ಬ್ಯಾಂಕ್​​ಗಳಿಂದ 510 ಕೋಟಿ ಸಾಲವನ್ನು ಪಡೆದಿದ್ದಾರೆ. ರೈತರಿಗೆ 50 ಕೋಟಿ ಹಣ ಬಾಕಿ ಉಳಿಸಿಕೊಂಡಿದ್ದಾರೆ. ಇವರು ಮೋಸ ಮಾಡಕ್ಕೆ ಹೊರಟಿರುವುದು ಒಟ್ಟು 819  ಕೋಟಿ. ಅಪೆಕ್ಸ್ ಬ್ಯಾಂಕ್​ನವರು 2019ರಲ್ಲಿ ರಮೇಶ್ ಜಾರಕಿಹೊಳಿಗೆ ನೊಟೀಸ್ ನೀಡಲಾಗಿದೆ. 2021ರಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಬೆಳಗಾವಿ ಡಿ.ಸಿಗೆ ನೊಟೀಸ್ ನೀಡಿದರು ಎಂದು ಹೇಳಿದರು.

ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಗಂಭೀರ ಆರೋಪ

ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಇಡಿಗೆ ದೂರು ನೀಡುತ್ತೇನೆ. ರಮೇಶ್ ವಿರುದ್ಧ ನ್ಯಾಯಾಲಯದಲ್ಲೂ ಅರ್ಜಿ ಹಾಕುತ್ತೇನೆ. ಸೌಭಾಗ್ಯಲಕ್ಷ್ಮೀ ಶುಗರ್ ಫ್ಯಾಕ್ಟರಿ ದಿವಾಳಿವೆಂದು ಘೋಷಿಸಲಾಗಿದೆ. ದಿವಾಳಿ ಅಂತಾ ಘೋಷಿಸಿ ಫ್ಯಾಕ್ಟರಿಯಲ್ಲಿ ಕಬ್ಬು ಅರೆಯಲಾಗುತ್ತಿದೆ. 60 ಕೋಟಿ ಲಾಭವನ್ನು ಅನಧಿಕೃತವಾಗಿ ಹಂಚಿಕೆ ಮಾಡಲಾಗುತ್ತಿದೆ. ಅಕ್ರಮದಲ್ಲಿ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್, ಕೇಂದ್ರ ಸಚಿವ ಅಮಿತ್ ಶಾ, ಸಚಿವೆ ನಿರ್ಮಲಾ ಸೀತಾರಾಮನ್​ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಪಾಲಿದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಗಂಭೀರ ಆರೋಪ ಮಾಡಿದರು.

ಇದನ್ನೂ ಓದಿ: TV9 Education Summit 2022, Day 3 Live: ಮೂರನೇ ದಿನಕ್ಕೆ ಕಾಲಿಟ್ಟ ಟಿವಿ9 ಎಜ್ಯುಕೇಷನ್​​​ ಎಕ್ಸ್​​ಪೋ, ಜನರಿಂದ ಅದ್ಭುತ ರೆಸ್ಪಾನ್ಸ್