ಸಿಡಿ ಪ್ರಕರಣ; ತನಿಖಾ ವರದಿ ಸಲ್ಲಿಸಲು ಎಸ್ಐಟಿಗೆ ಹೈಕೋರ್ಟ್ ಅನುಮತಿ, ರಮೇಶ್ ಜಾರಕಿಹೊಳಿಗೆ ಪೀಕಲಾಟ ಶುರು

ಲೈಂಗಿಕ ದೌರ್ಜನ್ಯ ಆರೋಪದಿಂದ ರಮೇಶ್ ಜಾರಕಿಹೊಳಿ‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸದ್ಯದಲ್ಲೇ ಅವರ ಭವಿಷ್ಯ ತೀರ್ಮಾನವಾಗಲಿದೆ. ಇದೀಗ ತನಿಖೆ ಮುಕ್ತಾಯವಾಗಿದ್ದು, ವರದಿ ಸಲ್ಲಿಕೆಯಾಗಲಿದೆ.

ಸಿಡಿ ಪ್ರಕರಣ; ತನಿಖಾ ವರದಿ ಸಲ್ಲಿಸಲು ಎಸ್ಐಟಿಗೆ ಹೈಕೋರ್ಟ್ ಅನುಮತಿ, ರಮೇಶ್ ಜಾರಕಿಹೊಳಿಗೆ ಪೀಕಲಾಟ ಶುರು
ಹೈಕೋರ್ಟ್​, ರಮೇಶ್ ಜಾರಕಿಹೊಳಿ
Follow us
| Updated By: sandhya thejappa

Updated on:Feb 03, 2022 | 4:20 PM

ಬೆಂಗಳೂರು: ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಸಿ.ಡಿ. ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ, ಅಂತಿಮ ತನಿಖಾ ವರದಿ ಸಲ್ಲಿಸಲು ತನಿಖಾ ತಂಡ ಎಸ್ಐಟಿಗೆ ಹೈಕೋರ್ಟ್ (High Court) ಅನುಮತಿ ನೀಡಿದೆ. ಸಕ್ಷಮ ಮ್ಯಾಜಿಸ್ಟ್ರೇಟ್ ಮುಂದೆ ತನಿಖಾ ವರದಿ ಸಲ್ಲಿಸಲು ಹೈಕೋರ್ಟ್ ವಿಭಾಗೀಯ ಪೀಠವು ಅನುಮತಿ ನೀಡಿದ್ದು, ಅರ್ಜಿದಾರರು ಎತ್ತಿರುವ ಪ್ರಶ್ನೆಗಳನ್ನು ಮುಕ್ತವಾಗಿರಿಸಿದೆ. ಅಂತಿಮ‌ ವರದಿ ಸಲ್ಲಿಕೆಗೆ ಎಸ್ಐಟಿ ಅವಕಾಶ ಕೋರಿತ್ತು. ಸದ್ಯ ಎಸ್​ಐಟಿ ತನಿಖೆ ಪ್ರಶ್ನಿಸಿರುವ ಯುವತಿಯ ಅರ್ಜಿ ಬಗ್ಗೆ ಇಂದು ವಿಚಾರಣೆ ನಡಿಸಿದ ಕೋರ್ಟ್​ ತನಿಖಾ ವರದಿ ಸಲ್ಲಿಸಲು ಆಕ್ಷೇಪಣೆ ಏನೂ ಇಲ್ಲ ಎಂದು ತಿಳಿಸಿದೆ. 

ಸದ್ಯದಲ್ಲೇ ರಮೇಶ್ ಜಾರಕಿಹೊಳಿ‌ ಭವಿಷ್ಯ: ಲೈಂಗಿಕ ದೌರ್ಜನ್ಯ ಆರೋಪದಿಂದ ರಮೇಶ್ ಜಾರಕಿಹೊಳಿ‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸದ್ಯದಲ್ಲೇ ಅವರ ಭವಿಷ್ಯ ತೀರ್ಮಾನವಾಗಲಿದೆ. ಇದೀಗ ತನಿಖೆ ಮುಕ್ತಾಯವಾಗಿದ್ದು, ವರದಿ ಸಲ್ಲಿಕೆಯಾಗಲಿದೆ. ಪೊಲೀಸರ ಅಂತಿಮ ವರದಿಯಲ್ಲಿ ರಮೇಶ್ ಜಾರಕಿಹೊಳಿ ಭವಿಷ್ಯ ಇದೆ. ಯುವತಿಯ ಆರೋಪ ಸಾಬೀತಾಗದಿದ್ದರೆ ಬಿ ರಿಪೋರ್ಟ್ ಸಲ್ಲಿಕೆಯಾಗುತ್ತದೆ. ಸಿ ರಿಪೋರ್ಟ್ ಸಲ್ಲಿಸಿದರೆ ರಮೇಶ್ ಜಾರಕಿಹೊಳಿ ಆರೋಪ ಮುಕ್ತರಾಗುತ್ತಾರೆ. ಚಾರ್ಜ್‌ಶೀಟ್ ಸಲ್ಲಿಸಿದರೆ ರಮೇಶ್ ಜಾರಕಿಹೊಳಿಗೆ ಸಂಕಷ್ಟ ಎದುರಾಗಲಿದೆ. ಹೀಗಾಗಿ ಸದ್ಯಕ್ಕೆ ಅಂತಿಮ ವರದಿಯು ರಮೇಶ್ ಭವಿಷ್ಯವನ್ನು ತೀರ್ಮಾನಿಸುತ್ತದೆ.

ಎಸ್ಐಟಿ ಪರ ವಾದ: ಬಾಧಿತ ಯುವತಿಯ ದೂರಿನಂತೆಯೇ ಎಫ್ಐಆರ್ ದಾಖಲಾಗಿದೆ. ಕ್ರೈಮ್ ನಂ. 30/21ಗೆ ಪ್ರತ್ಯೇಕ ತನಿಖಾಧಿಕಾರಿ ನೇಮಕವಾಗಿದೆ. ಯುವತಿ ದೂರಿಗೆ ಸಂಬಂಧಿಸಿದ ತನಿಖೆ ಮುಕ್ತಾಯವಾಗಿದೆ. ಹೀಗಾಗಿ ಅಂತಿಮ ವರದಿ ಸಲ್ಲಿಕೆಗೆ ಅನುಮತಿ ಕೋಡುತ್ತಿದ್ದೇವೆ ಅಂತಾ ಎಸ್ಐಟಿ ಪರ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದರು.

ಅಂತಿಮ ವರದಿ ಸಲ್ಲಿಸಬಾರದು: ಆರೋಪಿ ಮಾಜಿ ಸಚಿವರಿಗೆ ನೆರವು ನೀಡಲು ಸರ್ಕಾರದ ಬದಲು ಪೊಲೀಸ್ ಆಯುಕ್ತರು ಎಸ್ಐಟಿ ರಚಿಸಿದ್ದಾರೆ. ಪೊಲೀಸ್ ಆಯುಕ್ತರಿಗೆ ಎಸ್ಐಟಿ ರಚಿಸುವ ಅಧಿಕಾರವಿಲ್ಲ. ಹೀಗಾಗಿ ಈ ಎಸ್ಐಟಿ ಅಂತಿಮ ವರದಿ ಸಲ್ಲಿಸಬಾರದು ಅಂತ ಯುವತಿ ಪರ ಹಿರಿಯ ವಕೀಲರು ವಾದ ಮಂಡಿಸಿದ್ದಾರೆ.

ಇದನ್ನೂ ಓದಿ

ತಾಯಿಯಾದ ನಂತರ ಮೊದಲ ಬಾರಿಗೆ ಫೋಟೋ ಹಂಚಿಕೊಂಡ ಪ್ರಿಯಾಂಕಾ; ಫ್ಯಾನ್ಸ್​ಗೆ ಮತ್ತೊಂದು ಖುಷಿ ಸುದ್ದಿ ನೀಡಿದ ನಟಿ

ಹಾವು ತಪ್ಪಿಸಲು ಹೋಗಿ ತುಂಗಾ ನಾಲೆಗೆ ಬಿದ್ದ ಕಾರು; ಪತ್ನಿ ಸ್ಥಳದಲ್ಲೇ ಜಲಸಮಾಧಿ -ಪತಿ ಪಾರು

Published On - 12:22 pm, Thu, 3 February 22