Free Electricity: ರಾಜ್ಯಾದ್ಯಂತ ಎಲ್ಲ ಬಾಡಿಗೆದಾರರಿಗೂ ಗೃಹ ಬಳಕೆ ವಿದ್ಯುತ್​ ಉಚಿತ -ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಸ್ಪಷ್ಟನೆ

|

Updated on: Jun 06, 2023 | 11:52 AM

Karnataka CM Siddaramaiah: ಬಾಡಿಗೆದಾರರು ಸೇರಿದಂತೆ ಎಲ್ಲರಿಗೂ ಉಚಿತ ವಿದ್ಯುತ್​ ನೀಡ್ತೇವೆ. ವಾಣಿಜ್ಯ ಉದ್ದೇಶಕ್ಕೆ ವಿದ್ಯುತ್​ ಬಳಸುವವರಿಗೆ ಮಾತ್ರ ಈ ನಿಯಮ ಅನ್ವಯ ಆಗಲ್ಲ- ಮುಖ್ಯಮಂತ್ರಿ ಸಿದ್ದರಾಮಯ್ಯ

Free Electricity: ರಾಜ್ಯಾದ್ಯಂತ ಎಲ್ಲ ಬಾಡಿಗೆದಾರರಿಗೂ ಗೃಹ ಬಳಕೆ ವಿದ್ಯುತ್​ ಉಚಿತ -ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಸ್ಪಷ್ಟನೆ
ಎಲ್ಲ ಬಾಡಿಗೆದಾರರಿಗೂ ವಿದ್ಯುತ್​ ಉಚಿತ - ಸಿದ್ದರಾಮಯ್ಯ
Follow us on

ಬೆಂಗಳೂರು: ನೂತನ ಕಾಂಗ್ರೆಸ್​​ ಸರ್ಕಾರ ಚುನಾವಣೆ ಪೂರ್ವ ನೀಡಿದ್ದ ಗ್ಯಾರಂಟಿ ವಾಗ್ದಾನಗಳ ಜಾರಿಗೊಳಿಸಲು ಪ್ರಕ್ರಿಯೆಗಳು ವಿಳಂಬವಾಗುತ್ತಿದ್ದು, ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ನಿರ್ದಿಷ್ಟವಾಗಿ 200 ಯುನಿಟ್​​ ಉಚಿತ ವಿದ್ಯುತ್ (Free Electricity) ಎಂಬ ಗ್ಯಾರಂಟಿ ವಾಗ್ದಾನದ (Guarantee Scheme) ಬಗ್ಗೆ ಅಪಸ್ವರ ಎದ್ದಿದೆ. ಒಂದೆಡೆ ಸಿಎಂ ಸಿದ್ದರಾಮಯ್ಯ ಸಂಪುಟದ ಸಹೋದ್ಯೋಗಿಗಳು ಒಕ್ಕೊರಲಿಂದ ‘ಎಲ್ಲರಿಗೂ ಉಚಿತ ವಿದ್ಯುತ್​ ನೀಡ್ತೇವೆ’ ಎಂದು ಹೇಳುತ್ತಿದ್ದಾರೆ.

ಆದರೆ ಪ್ರಕ್ರಿಯೆ ಬಗ್ಗೆ ಗೊಂದಲಗಳು ಎದ್ದಿರುವುದು ಜನಕ್ಕೆ ಸಮಾಧಾನ ತಂದಿಲ್ಲ. ಈ ಹಿನ್ನೆಲೆಯಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ (Karnataka CM Siddaramaiah) ಅವರೇ ವಿಧಾನಸೌಧದಲ್ಲಿ (Vidhana Soudha) ಮಾತನಾಡಿದ್ದು, ರಾಜ್ಯಾದ್ಯಂತ ಬಾಡಿಗೆದಾರರು ಸೇರಿದಂತೆ ಎಲ್ಲರಿಗೂ ಉಚಿತ ವಿದ್ಯುತ್ (Gruha Jyothi Scheme)​ ನೀಡ್ತೇವೆ. 200 ಯೂನಿಟ್​ ಒಳಗೆ ವಿದ್ಯುತ್​​ ಉಪಯೋಗಿಸುವ ಎಲ್ಲರಿಗೂ ಉಚಿತವಾಗಿರುತ್ತದೆ. ವಾಣಿಜ್ಯ ಉದ್ದೇಶಕ್ಕೆ ವಿದ್ಯುತ್​ ಬಳಸುವವರಿಗೆ ಮಾತ್ರ ಈ ನಿಯಮ ಅನ್ವಯ ಆಗಲ್ಲ ಎಂದು ಪುನರುಚ್ಚರಿಸಿದ್ದಾರೆ.

ಇದನ್ನೂ ಓದಿ: Gruha Jyothi Scheme: ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಇರುವವರಿಗೆ ವಿದ್ಯುತ್​​ ಫ್ರೀ ಇದೆಯೇ?

ಈ ಮಧ್ಯೆ ವಿದ್ಯುತ್​ ಉಚಿತ ವಾಗ್ದಾನ ಪೂರೈಕೆ ಶಾಕ್​ಗೆ ಒಳಗಾಗಿರುವ ಆಡಳಿತಾರೂಢ ಕಾಂಗ್ರೆಸ್​​ ​ಸರ್ಕಾರ ಉಚಿತ ವಿದ್ಯುತ್ ಗ್ಯಾರಂಟಿ ಬಗ್ಗೆ ವಾಸ್ತವದ ನೆಲೆಗಟ್ಟಿನಲ್ಲಿ ಸ್ಪಷ್ಟ ಕಾರ್ಯಸೂಚಿ, ನೀತಿನಿಯಮಗಳನ್ನು ಹೊಂದಿಲ್ಲ. ಒಂದೇ ಮಾಲೀಕರ ಹೆಸರಿನಲ್ಲಿ ನಾಲ್ಕಾರು ವಿದ್ಯುತ್ ಮೀಟರುಗಳಿದ್ದರೆ ಎಲ್ಲ ನಾಲಕ್ಕೂ ಮೀಟರುಗಳಿಗೆ ಉಚಿತ ವಿದ್ಯುತ್​ ಅನ್ವಯ ಆಗುತ್ತದೋ, ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟತೆ ಹೊಂದಿಲ್ಲ. ಹಾಗಾಗಿ ಈ ಕನ್ಫೂಷನ್​ ಇನ್ನೂ ಹೆಚ್ಚಾಗಿದೆ ಎಂದು ಬಾಡಿಗೆದಾರರು ತಮ್ಮ ಅನುಮಾನವನ್ನು ಹೊರಹಾಕಿದ್ದಾರೆ.

ಬಾಡಿಗೆದಾರರಿಗೆ ಸದ್ಯಕ್ಕೆ ಈ ನಿಯತಮ ಜಾರಿಯಲ್ಲಿದೆ

ವಾಸವಿರುವ ಮನೆಯ ಆರ್‌.ಆರ್. ಸಂಖ್ಯೆಯೊಂದಿಗೆ ಆಧಾರ್ ನಂ. ಲಿಂಕ್ ಮಾಡಿರಬೇಕು. ಇದಕ್ಕೆ ಬಾಡಿಗೆ ಮನೆಯ ಕರಾರು ಪತ್ರವನ್ನು ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಬೇಕು. ಒಂದು ದಾಖಲೆಯನ್ನು ಒಂದು ಮೀಟರ್‌ನಲ್ಲಿ ಮಾತ್ರ ಲಿಂಕ್ ಮಾಡಲು ಅವಕಾಶ. ಮನೆ ಬದಲಾಯಿಸಿದ್ರೆ, ಹಿಂದಿನ ಮನೆಯ ಮೀಟರ್‌ನೊಂದಿಗೆ ಲಿಂಕ್ ತೆಗೆಯಬೇಕು. ಹೊಸ ಮನೆಯ ಆರ್‌ಆರ್ ನಂಬರ್ ಮತ್ತು ಆಧಾರ್ ಕಾರ್ಡ್ ಪುನಃ ಲಿಂಕ್ ಮಾಡಬೇಕು.

ಗದಗ: 200 ಯುನಿಟ್ ಫ್ರೀ ಘೋಷಣೆಯಾದ್ರೂ ನಿಲ್ಲದ ‘ಕರೆಂಟ್’ ಕಿರಿಕ್..!

200 ಯುನಿಟ್ ಫ್ರೀ ಘೋಷಣೆಯಾದ್ರೂ ನಿಲ್ಲದ ‘ಕರೆಂಟ್’ ಕಿರಿಕ್ ನಿಂದ ಜನ ಕಂಗಾಲಾಗಿದ್ದಾರೆ. ಈ ಮಧ್ಯೆ ಹೆಚ್ಚುವರಿ ಬಿಲ್ ನೋಡಿ ಮತ್ತೆ ಗ್ರಾಮಾಂತರ ಜನರು ಆತಂಕದಲ್ಲಿದ್ದಾರೆ. ಫ್ರೀ ಅಂತಾ ಹೇಳಿ ಬಿಲ್ ಕಟ್ಟಿಸಿಕೊಳ್ಳುತ್ತಿದ್ದೀರಿ ಅಂತಾ ತಗಾದೆ ತೆಗದಿರುವ ಜನರನ್ನ ಸಮಾಧಾನ ಪಡಿಸಲು ಗ್ರಾಮ ವಿದ್ಯುತ್ ಪ್ರತಿನಿಧಿಗಳು ಪರದಾಡುತ್ತಿದ್ದಾರೆ. ಗದಗ ತಾಲೂಕಿನ ನರಸಾಪುರ ಗ್ರಾಮದಲ್ಲಿ ಬಿಲ್ ಕಲೆಕ್ಟರ್ ಎದುರು ಅಸಮಾಧಾನ ಹೊರಹಾಕಿರುವ ಗ್ರಾಮಸ್ಥರು ಮಿನಿಮಂ ದರ 85 ರೂಪಾಯಿಂದ 110 ರೂಪಾಯಿಗೆ ದಿಢೀರನೆ ಏರಿಕೆ ಮಾಡಿದ್ದಾರೆ. ಏಪ್ರಿಲ್ ತಿಂಗಳಿಂದ ಅನ್ವಯವಾಗುವಂತೆ ಗ್ರಾಮಾಂತರ ಮತ್ತು ನಗರ ಪ್ರದೇಶಗಳಿಗೆ ಏಕ ರೂಪದದರ ನಿಗದಿ ಮಾಡಿ ಹೆಸ್ಕಾಂ ಬಿಲ್ ಹೆಚ್ಚಿಸಿದೆ.

ಆದರೆ ಬಿಲ್ ಕಲೆಕ್ಟರುಗಳು ಏಪ್ರಿಲ್, ಮೇ ಬಾಕಿ ಸೇರಿ ಬಿಲ್ ಕೊಡುತ್ತಿದ್ದಾರೆ. 100 ಯುನಿಟ್ ವರೆಗೆ 4.75 ರೂಪಾಯಿ‌ ಇದ್ದ ದರ, ಈಗ 5.30 ರೂಪಾಯಿಗೆ ಹೆಚ್ಚಳಗೊಂಡಿದೆ. 100 ಯುನಿಟ್ ಗೆ 5.30 ರೂಪಾಯಿ ಯಿಂದ 7 ರೂಪಾಯಿಗೆ ಹೆಚ್ಚಳ ಕಂಡಿದೆ. 0-50, 50-100, 100ರಿಂದ200, 200 ಮೇಲ್ಪಟ್ಟು ನಾಲ್ಕು ಸ್ಲ್ಯಾಬ್ ಬದಲು ಎರಡು ಸ್ಲ್ಯಾಬ್ ನಿಗದಿಗೊಳಿಸಲಾಗಿದೆ. 0 ರಿಂದ 100, 100 ಮೇಲ್ಟಟ್ಟ ಬಳಕೆದಾರರಿಗೆ ಪ್ರತ್ಯೇಕ ದರವೂ ನಿಗದಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Published On - 11:32 am, Tue, 6 June 23