ಬೆಂಗಳೂರಿನಲ್ಲಿ ನಡೆಯುತ್ತಿರುವ ಓಎಸ್ಕೆ ಫೆಡೆರೇಷನ್ ಆಫ್ ಇಂಡಿಯಾದ (OSK Federation of India) ಪ್ರತಿಷ್ಠಿತ ರಿಪಬ್ಲಿಕ್ ಕರಾಟೆ ಅಂತಾರಾಷ್ಟ್ರೀಯ ಚಾಂಪಿಯನ್ಶಿಪ್ (Republic Day 2024 International Karate and Kobudo Championship) 2ನೇ ದಿನವೂ ಭಾರಿ ಸ್ಪರ್ಧೆಗಳಿಂದ ನಡೆಯುತ್ತಿದೆ.
ಮೊದಲ ದಿನ 6 ರಿಂದ 10 ವರ್ಷಗಳ ವಯೋಮಿತಿಯ ಕರಾಟೆ ವಿದ್ಯಾರ್ಥಿಗಳು ಕಾದಾಡಿದ್ರೆ, 2ನೇ ದಿನ 10ವರ್ಷದ ಮೇಲ್ಪಟ್ಟಿನ ಸ್ಪರ್ಧಾಳುಗಳ ಮಧ್ಯೆ ಫೈಟ್ ನಡೆಯುತ್ತಿದೆ. ದಿನದ ಆರಂಭದಿಂದಲೂ ಕುಮುಟೆ ಸ್ಪರ್ಧೆಗಳು ಏರ್ಪಟ್ಟಿದ್ದು, ನಂತರ ಕಟಾ ಸ್ಪರ್ಧೆ ಕೂಡ ನಡೆಯುತ್ತಿದೆ.
Also Read: ಗಣರಾಜ್ಯೋತ್ಸವ ದಿನ ಬೆಂಗಳೂರಿನಲ್ಲಿ ರೋಚಕ ಕರಾಟೆ ಕದನಗಳು; ಜಪಾನ್ ವಿಶ್ವ ಕರಾಟೆ ಸ್ಪರ್ಧೆ ಆರಂಭ
ಇನ್ನು ಈ ಕರಾಟೆ ಚಾಂಪಿಯನ್ಶಿಪ್ಗೆ ಶ್ರೀಲಂಕಾದ ಕರಾಟೆ ಸ್ಪರ್ಧಾಳುಗಳು ಕೂಡ ಆಗಮಿಸಿದ್ದು, ಎಲ್ಲರ ಆಕರ್ಷಣೆಗೆ ಒಳಗಾಗಿದ್ದಾರೆ. ಇದರಿಂದ ಕರಾಟೆ ಟೂರ್ನಮೆಂಟ್ ಮತ್ತಷ್ಟು ರಂಗು ಪಡೆದುಕೊಂಡಿದೆ. ಈ ಚಾಂಪಿಯನ್ಶಿಪ್ನಲ್ಲಿ ಈ ವರೆಗೆ ಗೆದ್ದ ಸ್ಪರ್ಧಾಳುಗಳಿಗೆ ಓಎಸ್ಕೆ ಫೆಡೆರೇಷನ್ ಆಫ್ ಇಂಡಿಯಾದ ಅಧ್ಯಕ್ಷರಾದ ಶೆನ್ಷಾಯ್ ಸುರೇಶ್ ಕೆನಿಚಿರಾ ಮೆಡಲ್ ನೀಡಿ ಗೌರವಿಸಿದ್ರು. ನಾಳೆ ಭಾನುವಾರದ ಶ್ರೀಲಂಕಾ ಸೇರಿದಂತೆ ಹಲವು ದೇಶಗಳ ಸ್ಪರ್ಧಾಳುಗಳ ಮಧ್ಯೆ ಪಂದ್ಯಗಳು ನಡೆಯಲಿವೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ