ನಿಗಮ ಮಂಡಳಿ ನೇಮಕ ವಿಚಾರದಲ್ಲಿ ಎಡವಟ್ಟು: ನಿಯಮದಲ್ಲಿ ಅವಕಾಶ ಇಲ್ಲದಿದ್ದರೂ ಕ್ರೀಡಾ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನು ನೇಮಿಸಿದ ಸರ್ಕಾರ

ನಿಗಮ ಮಂಡಳಿ ನೇಮಕ ವಿಚಾರದಲ್ಲಿ ಸರ್ಕಾರದ ಎಡವಟ್ಟು ಮಾಡಿದೆ. ಸರ್ಕಾರ ಶಾಸಕ ವಿಜಯಾನಂದ ಕಾಶಪ್ಪನವರ್‌ ಅವರಿಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಿದೆ. ಆದರೆ ಕ್ರೀಡಾ ಪ್ರಾಧಿಕಾರದ ಬೈಲಾದಲ್ಲಿ ಇದಕ್ಕೆ ಅವಕಾಶವಿಲ್ಲ.

ನಿಗಮ ಮಂಡಳಿ ನೇಮಕ ವಿಚಾರದಲ್ಲಿ ಎಡವಟ್ಟು: ನಿಯಮದಲ್ಲಿ ಅವಕಾಶ ಇಲ್ಲದಿದ್ದರೂ ಕ್ರೀಡಾ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನು ನೇಮಿಸಿದ ಸರ್ಕಾರ
ಸಿಎಂ ಸಿದ್ದರಾಮಯ್ಯ
Follow us
ಪ್ರಸನ್ನ ಗಾಂವ್ಕರ್​
| Updated By: ವಿವೇಕ ಬಿರಾದಾರ

Updated on:Jan 27, 2024 | 2:05 PM

ಬೆಂಗಳೂರು, ಜನವರಿ 27: ಕರ್ನಾಟಕ ಸರ್ಕಾರವು ನಿಗಮ ಮಂಡಳಿ (Corporation Board) ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಎನ್.ಎ.ಹ್ಯಾರಿಸ್, ಕೆಎಂ ಶಿವಲಿಂಗೇಗೌಡ, ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 34 ಶಾಸಕರಿಗೆ (MLA) ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಆದರೆ ನಿಗಮ ಮಂಡಳಿ ನೇಮಕ ವಿಚಾರದಲ್ಲಿ ಸರ್ಕಾರದ (Karnataka Government) ಎಡವಟ್ಟು ಮಾಡಿದೆ. ಸರ್ಕಾರ ಶಾಸಕ ವಿಜಯಾನಂದ ಕಾಶಪ್ಪನವರ್‌ (Vijayanand Kashappanavar) ಅವರಿಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಿದೆ. ಆದರೆ ಕ್ರೀಡಾ ಪ್ರಾಧಿಕಾರದ ಬೈಲಾದಲ್ಲಿ ಇದಕ್ಕೆ ಅವಕಾಶವಿಲ್ಲ.

ಕರ್ನಾಟಕ ಕ್ರೀಡಾ ಪ್ರಾಧಿಕಾರದ ಬೈಲಾದ ನಿಯಮದ ಪ್ರಕಾರ ಸಚಿವರೇ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರಾಗುತ್ತಾರೆ. ಅಂದರೆ ಕ್ರೀಡಾ ಸಚಿವ ನಾಗೇಂದ್ರ ಅವರೇ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಕೇವಲ ಉಪಾಧ್ಯಕ್ಷ ಸ್ಥಾನಕ್ಕೆ ನೇಮಿಸಲು ಸರ್ಕಾರಕ್ಕೆ ಅವಕಾಶವಿರುತ್ತದೆ. ಆದರೆ ಸರ್ಕಾರ ಶುಕ್ರವಾರ (ಜ.26) ರಂದು ರೊಡಿಸಿರುವ ಆದೇಶದಲ್ಲಿ ವಿಜಯಾನಂದ ಕಾಶಪ್ಪನವರ್ ಅವರಿಗೆ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಇದರಿಂದ ಶಾಸಕ ವಿಜಯಾನಂದ ಕಾಶಪ್ಪನವರ್ ಅಸಮಾಧಾನಗೊಂಡಿದ್ದಾರೆ.

  1. ಹಂಪನಗೌಡ ಬಾದರ್ಲಿ:  (ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ)
  2. ಅಪ್ಪಾಜಿ ಸಿ ಎಸ್ ನಾಡಗೌಡ: (ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜಂಟ್ಸ್)
  3. ಭರಮಗೌಡ (ರಾಜು) ಅಲಗೌಡ ಕಾಗೆ: (ಹುಬ್ಬಳ್ಳಿ ಸಾರಿಗೆ ನಿಗಮ, ವಾಯುವ್ಯ ಸಾರಿಗೆ)
  4. ಹೆಚ್​​. ವೈ ಮೇಟಿ (ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ)
  5. ಎಸ್ ಆರ್ ಶ್ರೀನಿವಾಸ: (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ)
  6. ಬಸವರಾಜ್ ನೀಲಪ್ಪ ಶಿವಣ್ಣನವರ: (ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ)
  7. ಬಿ ಜಿ ಗೋವಿಂದಪ್ಪ: (ಆಹಾರ ಮತ್ತು ನಾಗರಿಕ ಸರಬರಾಜು ನಿಗಮ)
  8. ಹೆಚ್ ಸಿ ಬಾಲಕೃಷ್ಣ: (ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ)
  9. ಜಿ. ಎಸ್ ಪಾಟೀಲ್: (ಕರ್ನಾಟಕ ಖನಿಜ ನಿಗಮ ಅಭಿವೃದ್ಧಿ ನಿಗಮ ನಿಯಮಿತ)
  10. ಎನ್ ಎ ಹ್ಯಾರಿಸ್: (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ)
  11. ಕೌಜಲಗಿ ಮಹಾಂತೇಶ್ ಶಿವಾನಂದ: (ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ)
  12. ಸಿ. ಪುಟ್ಟರಂಗಶೆಟ್ಟಿ: (ಮೈಸೂರ್ ಸೇಲ್ಸ್ ಲಿಮಿಟೆಡ್ ಇಂಟರ್ ನ್ಯಾಶನಲ್)
  13. ಜೆ ಟಿ ಪಾಟೀಲ್: (ಹಟ್ಟಿ ಚಿನ್ನದ ಗಣಿ)
  14. ರಾಜಾ ವೆಂಕಟಪ್ಪ ನಾಯಕ್: (ಕರ್ನಾಟಕ ರಾಜ್ಯ ಉಗ್ರಾಣ ನಿಗಮ)
  15. ಬಿ ಕೆ ಸಂಗಮೇಶ್ವರ್: (ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ/ಲ್ಯಾಂಡ್ ಆರ್ಮಿ)
  16. ಕೆ. ಎಂ ಶಿವಲಿಂಗೇಗೌಡ: (ಕರ್ನಾಟಕ ಗೃಹ ಮಂಡಳಿ) ಅಬ್ಬಯ್ಯ ಪ್ರಸಾದ್ (ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ)
  17. ಅಬ್ಬಯ್ಯ ಪ್ರಸಾದ್​​: (ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ)
  18. ಬಿ.ಕೆ.ಗೋಪಾಲಕೃಷ್ಣ ಬೇಳೂರು: (ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತ)
  19. ಎಸ್.ಎನ್ ನಾರಾಯಣ ಸ್ವಾಮಿ: (ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ)
  20. ಟಿ ರಘುಮೂರ್ತಿ: (ಕರ್ನಾಟಕ ರಾಜ್ಯ ಕೈಗಾರಿಕೆಗಳ ಮಂಡಳಿ)
  21. ಎ. ಬಿ ರಮೇಶ್ ಬಂಡಿ ಸಿದ್ದೇಗೌಡ: (ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ)
  22. ಬಿ. ಶಿವಣ್ಣ: (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ)
  23. ಎಸ್ ಎನ್ ಸುಬ್ಬಾರೆಡ್ಡಿ: (ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ)
  24. ವಿನಯ್ ಕುಲಕರ್ಣಿ: (ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ)
  25. ಅನಿಲ್ ಚಿಕ್ಕಮಾದು: (ಜಂಗಲ್ ಲಾಡ್ಜಸ್ )
  26. ಬಸವನ ಗೌಡ ದದ್ದಲ್: (ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ)
  27. ಕನೀಜ್ ಫಾತಿಮಾ: (ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ)
  28. ವಿಜಯಾನಂದ ಕಾಶಪ್ಪನವರ: (ಕರ್ನಾಟಕ ಕ್ರೀಡಾ ಪ್ರಾಧಿಕಾರ)
  29. ಟಿ ಡಿ ರಾಜೇಗೌಡ: (ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ನಿಯಮಿತ)
  30. ರೂಪಕಲಾ ಎಂ: (ಕರ್ನಾಟಕ ಕರಕುಶಲ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ)
  31. ಸತೀಶ್ ಕೃಷ್ಣ ಸೈಲ್: (ಕರ್ನಾಟಕ ಮಾರ್ಕೆಟಿಂಗ್ ಕನ್ಸಲೆಂಟ್ ಆಂಡ್ ಏಜೆನ್ಸಿಸ್)
  32. ಶರತ್ ಕುಮಾರ್ ಬಚ್ಚೇಗೌಡ: (ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ)
  33. ಜೆ ಎನ್ ಗಣೇಶ್ ಕಂಪ್ಲಿ: (ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ)
  34. ಬಸವನಗೌಡ ತುರುವಿಹಾಳ: (ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ)

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 2:04 pm, Sat, 27 January 24