ನಿಗಮ ಮಂಡಳಿ ನೇಮಕ ಜಟಾಪಟಿ; ಕೋಳಿಯನ್ನು ಕೇಳಿ ಕೊಯ್ಯುಲು ಆಗುತ್ತಾ ಎಂದು ಪರಮೇಶ್ವರ್ಗೆ ಟಾಂಗ್ ಕೊಟ್ಟ ವೆಂಕಟೇಶ್
ನಿಗಮ ಮಂಡಳಿ ನೇಮಕ ವಿಚಾರವಾಗಿ ನನ್ನನ್ನು ಯಾರು ವಿಚಾರಿಸಿಲ್ಲ, ಯಾರು ಏನು ಕೂಡ ಕೇಳಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್, ಇದನ್ನ ಎಲ್ಲರನ್ನ ಕೇಳಿ ಮಾಡಲು ಆಗುತ್ತಾ? ಬೇಕಾದರೆ ಅವರ ಅಭಿಪ್ರಾಯವನ್ನ ತಿಳಿಸಬಹುದು ಅಷ್ಟೇ ಎಂದರು.
ಚಾಮರಾಜನಗರ, ಜ.26: ನಿಗಮ ಮಂಡಳಿ ನೇಮಕ ಮಾಡುವಾಗ ಎಲ್ಲರನ್ನು ಕೇಳಿ ಮಾಡಲು ಆಗುತ್ತಾ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ (K Venkatesh) ಹೇಳಿದರು. ನಿಗಮ ಮಂಡಳಿ ನೇಮಕ ವಿಚಾರವಾಗಿ ನನ್ನನ್ನು ಯಾರು ವಿಚಾರಿಸಿಲ್ಲ, ಯಾರು ಏನು ಕೂಡ ಕೇಳಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ (Dr.G.Parameshwar) ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ ವೆಂಕಟೇಶ್, ನಾವು ಕೋಳಿ ಕೊಯ್ಯುವಾಗ ಕೇಳಲು ಆಗುತ್ತಾ ಎಂದು ನಗು ನಗುತ್ತಲೇ ಟಾಂಗ್ ಕೊಟ್ಟರು.
ಅಯೋದ್ಯೆಯಲ್ಲಿ ರಾಮಲಲ್ಲ ಪ್ರತಿಷ್ಠಾಪನೆಯು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗಲಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವೆಂಕಟೇಶ್, ನಾವು ರಾಜಕಾರಣಿಗಳು. ಪ್ರತಿ ಸಾವಿಗು ಹೋಗುತ್ತೇವೆ ಮದುವೆಗೂ ಹೋಗುತ್ತೇವೆ. ಅಷ್ಟೇ ಯಾಕೆ ಗುಡ್ಲು ಕೂರಿಸಿದಕ್ಕೂ ಹೋಗುತ್ತೇವೆ, ನಾಮಕರಣಕ್ಕೂ ಹೋಗುತ್ತೇವೆ. ಇವೆಲ್ಲಾ ವರ್ಕೌಟ್ ಆಗುತ್ತಾ? ಇದೆಲ್ಲ ವರ್ಕೌಟ್ ಆಗಲ್ಲ ಎಂದರು.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾಗಿರುವ ವಿಚಾರವಾಗಿ ಮಾತನಾಡಿದ ಕೆ ವೆಂಕಟೇಶ್, ಅವರು ಲೋಕೋಪಯೋಗಿ ಒಲಾಖೆ ಸಚಿವರು. ಹಾಗಾಗಿ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದರಲ್ಲಿ ತಪ್ಪೇನಿದೆ ಎಂದು ಕೇಳಿದರು.
ನಿಗಮ ಮಂಡಳಿ ನೇಮಕಾತಿ ಹೈಕಮಾಂಡ್ ಹಾಗೂ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮಧ್ಯೆ ಹಗ್ಗಜಗ್ಗಾಟ ನಡೆದಿದೆ. ಹೈಕಮಾಂಡ್ಗೆ ಕಳುಹಿಸದ ಹೆಸರುಗಳು ನಿಗಮ ಮಂಡಳಿ ನೇಮಕಾತಿ ಪಟ್ಟಿಯಲ್ಲಿ ಎಂಟ್ರಿಯಾಗಿದ್ದು, ಇದು ಸಿಎಂ, ಡಿಸಿಎಂಗೆ ಶಾಕ್ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಅಂಬಿಗರ ಚೌಡಯ್ಯ ಕಾರ್ಯಕ್ರಮಕ್ಕೆ ಹೋಗದೇ ತಾಜ್ ವೆಸ್ಟ್ ಎಂಡ್ನಲ್ಲಿ ಸೇರಿ ಚರ್ಚಿಸಿದ್ದರು.
ಇದನ್ನೂ ಓದಿ: ನಿರುದ್ಯೋಗಿ ಯುವಕರಿಗೆ ಸಹಿಸುದ್ದಿ ನೀಡಿದ ಗೃಹ ಸಚಿವ ಪರಮೇಶ್ವರ್, ಇನ್ನೂ ಸುಮಾರು 1,000 ಪಿಎಸ್ಐಗಳ ನೇಮಕಾತಿ!
ನಿಗಮ ಮಂಡಳಿ ನೇಮಕ ವಿಚಾರ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಲವು ಸುತ್ತುಗಳ ಸಮಾಲೋಚನೆ, ಸಭೆಗಳ ಬಳಿಕವೂ ಪಟ್ಟಿ ಅಂತಿಮಗೊಳಿಸಲು ಸಾಧ್ಯವಾಗುತ್ತಿಲ್ಲ. ಇದೀಗ ನಿಗಮ ಮಂಡಳಿ ನೇಮಕ ವಿಚಾರ ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಹೈಕಮಾಂಡ್ ನಡುವಣ ಸಂಘರ್ಷವಾಗಿ ಮಾರ್ಪಟ್ಟಿದೆ.
ಹೈಕಮಾಂಡ್ ಕಳುಹಿಸಿರುವ ಪಟ್ಟಿಯಲ್ಲಿ ಕೆಲವು ಅಚ್ಚರಿಯ ಹೆಸರುಗಳು ಕಾಣಿಸಿವೆ ಎನ್ನಲಾಗಿದ್ದು, ಇದನ್ನು ಅಂತಿಮಗೊಳಿಸಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಮ್ಮತಿಸುತ್ತಿಲ್ಲ. ಈ ವಿಚಾರವಾಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಈಗಾಗಲೇ ಮಾತುಕತೆಯನ್ನೂ ನಡೆಸಿದ್ದಾರೆ.
ನಿಗಮ ಮಂಡಳಿ ಕುರಿತು ಮತ್ತೆ ಚರ್ಚಿಸಲು ರಣದೀಪ್ ಸುರ್ಜೇವಾಲ ಬೆಂಗಳೂರಿಗೆ ಬರಲಿದ್ದು, ಜನವರಿ 26ರಂದು ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಅದೇ ದಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಹೀಗಾಗಿ ಖರ್ಗೆ ಉಪಸ್ಥಿತಿಯಲ್ಲೇ ಮತ್ತೊಂದು ಸುತ್ತಿನ ಚರ್ಚೆ ನಡೆಯುವ ಸಾಧ್ಯತೆ ಇದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ