ನಿರುದ್ಯೋಗಿ ಯುವಕರಿಗೆ ಸಿಹಿಸುದ್ದಿ ನೀಡಿದ ಗೃಹ ಸಚಿವ ಪರಮೇಶ್ವರ್, ಇನ್ನೂ ಸುಮಾರು 1,000 ಪಿಎಸ್ಐಗಳ ನೇಮಕಾತಿ!
ನಿನ್ನೆ ಬೆಂಗಳೂರಲ್ಲಿ ನಡೆದ 545 ಪಿಎಸ್ಐ ನೇಮಕಾತಿ ಮರುಪರೀಕ್ಷೆ ಯಾವುದೇ ಅಕ್ರಮಗಳಿಲ್ಲದೆ, ಸುಗಮವಾಗಿ ನಡೆದಿದೆ, ಸುಮಾರು 54,000 ಯುವ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು ಮತ್ತು ಹಾಜರಾತಿ ಪ್ರಮಾಣ ಸುಮಾರು ಶೇಕಡ 70 ರಷ್ಟಿತ್ತು ಎಂದು ಪರಮೇಶ್ವರ್ ಹೇಳಿದರು.
ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ್ (G Parameshwara), ನಿರುದ್ಯೋಗಿ ಯುವಕರಿಗೆ (unemployed youth) ಖುಷಿಯಾಗುವ ಸಂಗತಿಗಳನ್ನು ಹೇಳಿದರು. ನಿನ್ನೆ ಬೆಂಗಳೂರಲ್ಲಿ ನಡೆದ 545 ಪಿಎಸ್ಐ ನೇಮಕಾತಿ (PSI recruitment) ಮರುಪರೀಕ್ಷೆ ಯಾವುದೇ ಅಕ್ರಮಗಳಿಲ್ಲದೆ, ಸುಗಮವಾಗಿ ನಡೆದಿದೆ, ಸುಮಾರು 54,000 ಯುವ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು ಮತ್ತು ಹಾಜರಾತಿ ಪ್ರಮಾಣ ಸುಮಾರು ಶೇಕಡ 70 ರಷ್ಟಿತ್ತು ಎಂದು ಪರಮೇಶ್ವರ್ ಹೇಳಿದರು. ಆದಷ್ಟು ಬೇಗ ಉತ್ತರಪತ್ರಿಕೆಗಳ ಮೌಲ್ಯಮಾಪನ ನಡೆಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದ ಸಚಿವ ಪರಮೇಶ್ವರ್, ಪರೀಕ್ಷೆಯನ್ನು ಸುಲಲಿತವಾಗಿ ನಡೆಸಿಕೊಟ್ಟ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕಿ ಎಸ್ ರಮ್ಯಾ ಅವರನ್ನು ಅಭಿನಂದಿಸಿದರು. ಈ 545 ಪಿಎಸ್ಐ ಹುದ್ದೆಗಳಲ್ಲದೆ, ಇನ್ನೂ 404 ಪಿಎಸ್ಐಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ, ಅಭ್ಯರ್ಥಿಗಳ ದೈಹಿಕ ಪರೀಕ್ಷೆ ನಡೆಸಲಾಗಿದ್ದು ಇಷ್ಟರಲ್ಲೇ ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ಸಚಿವ ಹೇಳಿದರು. ಹಾಗೆಯೇ, 660 ಪಿಎಸ್ಐಗಳ ನೇಮಕಾತಿಗಾಗಿ ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದುಕೊಳ್ಳಲಾಗಿದೆ ಎಂದು ಗೃಹ ಸಚಿವ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ