ಹುಬ್ಬಳ್ಳಿಯ ಜನನಿಬಿಡ ರಸ್ತೆಯಲ್ಲಿ ಜಗಳವಾಡುತ್ತಿದ್ದ ಯುವಕರಿಗೆ ಪೊಲೀಸರ ಭಯವಿರಲಿಲ್ಲ!
ಬದಲಾಗಿರುವ ಕಾಲದಲ್ಲಿ ಪೊಲೀಸರ ವರ್ಚಸ್ಸು ಕಡಿಮೆಯಾಗಿದೆ ಮತ್ತು ಜನರಲ್ಲಿ ಅವರ ಭಯ ಮಾಯವಾಗಿದೆ. ಇಂಥ ಸನ್ನಿವೇಶ ಸೃಷ್ಟಿಯಾಗಿರೋದಿಕ್ಕೆ ಪೊಲೀಸರೇ ಹೆಚ್ಚಿನ ಭಾಗ ಕಾರಣವೆಂದರೆ ಉತ್ಪ್ರೇಕ್ಷೆ ಅನಿಸದು. ಹುಬ್ಬಳ್ಳಿಯಲ್ಲಿ ಕಳೆದ ರಾತ್ರಿ ನಡೆದ ಘಟನೆಯ ವಿಡಿಯೋ ನೋಡಿದರೆ, ಯಾಕೆ ನಾವು ಇದನ್ನೆಲ್ಲ ಹೇಳಿದ್ದೇವೆ ಅನ್ನೋದು ಗೊತ್ತಾಗುತ್ತದೆ.
ಹುಬ್ಬಳ್ಳಿ: ಅದೊಂದು ಕಾಲವಿತ್ತು. ಪೊಲೀಸರನ್ನು (police) ಕಂಡರೆ ಜನ ಹೆದರುತ್ತಿದ್ದರು, ಅವರು ಎದುರು ಬಂದರೆ ರಸ್ತೆ ಪಕ್ಕ ಸರಿದುಬಿಡುತ್ತಿದ್ದರು. ಪೊಲೀಸ್ ಠಾಣೆಯಿಲ್ಲದ (police station) ಗ್ರಾಮೀಣ ಭಾಗಗಳಲ್ಲಿ (rural areas) ಗಲಾಟೆಗಳಾದಾಗ ಪೊಲೀಸ್ ವ್ಯಾನ್ ಪ್ರವೇಶಿಸಿದರೆ, ಜನ ಹೆದರಿ ಮನೆಗಳಿಂದ ಹೊರಬರುತ್ತಿರಲಿಲ್ಲ. ಪೊಲೀಸರ ಖದರು ಹಾಗಿತ್ತು. ಆದರೆ, ಬದಲಾಗಿರುವ ಕಾಲದಲ್ಲಿ ಪೊಲೀಸರ ವರ್ಚಸ್ಸು ಕಡಿಮೆಯಾಗಿದೆ ಮತ್ತು ಜನರಲ್ಲಿ ಅವರ ಭಯ ಮಾಯವಾಗಿದೆ. ಇಂಥ ಸನ್ನಿವೇಶ ಸೃಷ್ಟಿಯಾಗಿರೋದಿಕ್ಕೆ ಪೊಲೀಸರೇ ಹೆಚ್ಚಿನ ಭಾಗ ಕಾರಣವೆಂದರೆ ಉತ್ಪ್ರೇಕ್ಷೆ ಅನಿಸದು. ಯಾಕೆ ಅನ್ನೋದನ್ನು ಮತ್ತೊಂದು ಸಂದರ್ಭದಲ್ಲಿ ಚರ್ಚಿಸೋಣ. ಹುಬ್ಬಳ್ಳಿಯಲ್ಲಿ ಕಳೆದ ರಾತ್ರಿ ನಡೆದ ಘಟನೆಯ ವಿಡಿಯೋ ನೋಡಿದರೆ, ಯಾಕೆ ನಾವು ಇದನ್ನೆಲ್ಲ ಹೇಳಿದ್ದೇವೆ ಅನ್ನೋದು ಗೊತ್ತಾಗುತ್ತದೆ. ನಗರದ ದೇಶಪಾಂಡೆ ನಗರದಲ್ಲಿ ಯುವಕ ನಡುವೆ ಬೈಕ್ ವಿಚಾರಕ್ಕೆ ಜಗಳ ಶುರುವಾಗಿ ಮಾರಾಮಾರಿ ಕೂಡ ನಡೆದಿದೆ, ಹೊಡೆದಾಡುವ ದೃಶ್ಯಗಳು ವಿಡಿಯೋದಲ್ಲಿಲ್ಲ.
ವಿಷಯ ಅದಲ್ಲ, ಸ್ಥಳಕ್ಕೆ ಒಬ್ಬ ಟ್ರಾಫಿಕ್ ಇನ್ಸ್ ಪೆಕ್ಟರ್ ಧಾವಿಸುತ್ತಾರೆ. ಅವರನ್ನು ನೋಡಿದ ಮೇಲೆ ಯುವಕರು ತಮ್ಮ ತಮ್ಮ ದಿಕ್ಕುಗಳಿಗೆ ಪಲಾಯನ ಮಾಡಬೇಕಿತ್ತು. ಆದರೆ, ಅವರು ಪೊಲೀಸ್ ಸಮ್ಮುಖದಲ್ಲೂ ವಾಕ್ಸಮರ ಮುಂದುವರಿಸುತ್ತಾರೆ. ಅವರ ಜಗಳದಿಂದ ಜನ ಗುಂಪುಗೂಡುವುದರಿಂದ ಟ್ರಾಫಿಕ್ ಸಂಚಾರಕ್ಕೆ ಅಡಚಣೆಯಾದರೂ ಪೊಲೀಸ್ ಇನ್ಸ್ ಪೆಕ್ಟರ್ ಯುವಕರನ್ನು ತದುಕುವ ಮಾತು ಹಾಗಿರಲಿ, ಜೋರಾಗಿ ಗದರವುದೂ ಇಲ್ಲ. ಯುವಕರು ಒದರಿ ಒದರಿ ಸಾಕಾಗಿ ಜಗಳ ನಿಲ್ಲಿಸುತ್ತಾರೆಯೇ ಹೊರತು ಅದರಲ್ಲಿ ಪೊಲೀಸಪ್ಪನ ಪಾತ್ರವೇನೂ ಕಾಣಿಸದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ