ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸ್ಥಿತಿ ಕುಂಠಿತವಾಗಿಲ್ಲಾ; ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ
ಈಗ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸೋದಿಲ್ಲ, ಮುಂದುವರಿಸುತ್ತೇವೆ. ನಾವು ಗ್ಯಾರಂಟಿ ಬಂದ್ ಮಾಡಿದ್ರೆ ಜನ ಸುಮ್ಮನಿರುತ್ತಾರಾ?. ಕೊಟ್ಟಿದ್ದನ್ನು ನಿಲ್ಲಿಸಲು ಆಗಲ್ಲ, ತಗೆಯಬಾರದು ಕೂಡ. ಲೋಕಸಭಾ ಚುನಾವಣೆ ಹಾಗೂ ಮುಂದಿನ ಚುನಾವಣೆಗೂ ನಮ್ಮ ಗ್ಯಾರಂಟಿ ಯೋಜನೆಗಳು ಇರುತ್ತವೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಹೇಳಿದರು.
ಕೊಪ್ಪಳ, ಜ.26: ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸ್ಥಿತಿ ಕುಂಠಿತವಾಗಿಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ(Basavaraj Rayareddy) ಹೇಳಿದ್ದಾರೆ. ಕೊಪ್ಪಳ(Koppala) ನಗರದಲ್ಲಿ ಮಾತನಾಡಿದ ಅವರು ‘ಆರು ಕೋಟಿ ತೊಂಬತ್ತು ಲಕ್ಷ ಜನರಿಗೆ ಬರೊಬ್ಬರಿ ಒಂದು ಲಕ್ಷ ಕೋಟಿ ಹಣ ನೀಡುತ್ತಿದ್ದೇವೆ. 7.10 ಲಕ್ಷ ನೌಕರರಿಗೆ ಸರಿಸುಮಾರು 96 ಲಕ್ಷ ಕೋಟಿ ಹಣ ನೀಡಲಾಗುತ್ತದೆ. ಹೀಗಿರುವಾಗ ಜನರಿಗೆ ಗ್ಯಾರಂಟಿ ಯೋಜನೆ ನೀಡುವುದು ತಪ್ಪಲ್ಲ ಎಂದರು.
ನಾವು ಗ್ಯಾರಂಟಿ ಬಂದ್ ಮಾಡಿದ್ರೆ ಜನ ಸುಮ್ಮನಿರುತ್ತಾರಾ?
ಇನ್ನು ಈಗ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸೋದಿಲ್ಲ, ಮುಂದುವರಿಸುತ್ತೇವೆ. ನಾವು ಗ್ಯಾರಂಟಿ ಬಂದ್ ಮಾಡಿದ್ರೆ ಜನ ಸುಮ್ಮನಿರುತ್ತಾರಾ?. ಕೊಟ್ಟಿದ್ದನ್ನು ನಿಲ್ಲಿಸಲು ಆಗಲ್ಲ, ತಗೆಯಬಾರದು ಕೂಡ. ಲೋಕಸಭಾ ಚುನಾವಣೆ ಹಾಗೂ ಮುಂದಿನ ಚುನಾವಣೆಗೂ ನಮ್ಮ ಗ್ಯಾರಂಟಿ ಯೋಜನೆಗಳು ಇರುತ್ತವೆ. ಗ್ಯಾರಂಟಿಯಿಂದ ಹಣದ ಬಾರವಿದೆ. ಆದ್ರೆ, ಅದಕ್ಕೆ ಪರಿಹಾರ ಹುಡುಕಿಕೊಂಡಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ:ಜುಲೈನಲ್ಲಿ ಸಚಿವ ಸಂಪುಟ ಪುನರ್ ರಚನೆ: ಮಂತ್ರಿ ಸ್ಥಾನ ಸಿಗುವ ಬಗ್ಗೆ ಸುಳಿವು ನೀಡಿದ ಬಸವರಾಜ್ ರಾಯರೆಡ್ಡಿ
ಬಿಜೆಪಿಯಲ್ಲಿ ನೈತಿಕತೆ ಮೌಲ್ಯ ಇಲ್ಲವೇ ಇಲ್ಲ
ಜಗದೀಶ್ ಶೆಟ್ಟರ್ ಬಿಜೆಪಿ ಟಿಕೆಟ್ ನೀಡದೆ ಇದ್ದಾಗ ನಮ್ಮ ಪಕ್ಷಕ್ಕೆ ಬರಬಾರದಿತ್ತು, ಬಂದ ಮೇಲೆ ಮರಳಿ ಹೋಗಬಾರದಿತ್ತು. ಕಾಂಗ್ರೆಸ್ಗೆ ಅವರು ಬಂದಿದ್ದು ಆತುರದ ನಿರ್ಧಾರ, ಈಗ ಹೋಗಿದ್ದು ಕೂಡ ಆತುರದ ನಿರ್ಧಾರವಾಗಿದೆ. ಇನ್ನು ರಾಜಕಾರಣ ಕೆಳಮಟ್ಟದಲಿದೆ. ಎಲ್ಲಾ ಪಕ್ಷದಲ್ಲಿ ಕೂಡ ನೈತಿಕತೆ ಮೌಲ್ಯ ತಗ್ಗಿದೆ. ಆದರೆ, ಬಿಜೆಪಿಯಲ್ಲಿ ಇಲ್ಲವೇ ಇಲ್ಲ. ಇವತ್ತೀನ ನಮ್ಮ ಸಂಖ್ಯಾಬಲದಲ್ಲಿ ನಮ್ಮನ್ನು ಯಾರು ಅಳುಗಾಡಿಸಲು ಆಗಲ್ಲ. ಇನ್ಮೇಲೆ ಕಾಂಗ್ರೆಸ್ ಬಿಟ್ಟು ಯಾರು ಹೋಗಲ್ಲ. ಇದೇ ವೇಳೆ ಕಾಂಗ್ರೆಸ್ನಲ್ಲಿ ಹೊಂದಾಣಿಕೆ ಕೊರತೆ ವಿಚಾರ ‘ ಕೆಲವರು ನಮಗೆ ನಿಗಮ ಮಂಡಳಿ ಹುದ್ದೆ ವಿಚಾರದಲ್ಲಿ ಕೇಳಿಲ್ಲ ಅಂದಿದ್ದಾರೆ. ಅವರ ಹೇಳಿಕೆೆಯಲ್ಲಿ ತಪ್ಪೇನಿದೆ? ಅವರ ವಿಚಾರ ಅವರು ಹೇಳಿದ್ದಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ