
ಬೆಂಗಳೂರು, ಡಿ.13: ಗ್ರ್ಯಾಮಿ ಪ್ರಶಸ್ತಿ ವಿಜೇತ, ಸಂಗೀತಗಾರ ರಿಕಿ ಕೇಜ್ (Grammy Winner Ricky Kej) ಅವರ ಬೆಂಗಳೂರಿನಲ್ಲಿರುವ ಮನೆಯಲ್ಲಿ ಕಳ್ಳತನ ನಡೆದಿದೆ. ಝಮಾಟೊ ಡೆಲಿವರಿ ಬಾಯ್ ಈ ಕೃತ್ಯವನ್ನು ಎಸಗಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ರಿಕಿ ಕೇಜ್ ತಮ್ಮ ಮನೆಯ ಸಿಸಿಟಿವಿಯಲ್ಲಿ ಸೆರೆಯಾದ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಈ ಪೋಸ್ಟ್ನ್ನು @zomato @zomatocareಗೆ ಟ್ಯಾಗ್ ಮಾಡಿದ್ದಾರೆ. ಮನೆಯ ಹೊರಗಡೆ ಇರುವ ಸಂಪ್ ಕವರ್ ಕಳ್ಳತನ ಮಾಡಲಾಗಿದೆ ಎಂದು ಎಕ್ಸ್ನಲ್ಲಿ ಪೋಸ್ಟ್ನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಸಿಟಿ ಪೊಲೀಸರಿಗೂ ದೂರು ನೀಡಿದ್ದಾರೆ. ರಿಕಿ ಕೇಜ್ ಅವರು ಈ ಪೋಸ್ಟ್ನಲ್ಲಿ ತಮ್ಮ ನಿವಾಸದ ಸಿಸಿಟಿವಿ ದೃಶ್ಯಾವಳಿ ಜತೆಗೆ ಬೆಂಗಳೂರಿನಲ್ಲಿ ನಡೆಯುವ ಕಳ್ಳತನದ ಬಗ್ಗೆಯೂ ಹೇಳಿದ್ದಾರೆ.
ಅವರು ಎಕ್ಸ್ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ನಮ್ಮ ಮನೆಯಲ್ಲಿ ದೊಡ್ಡ ಕಳ್ಳತನವಾಗಿದೆ. ನಿಮ್ಮ @zomato @zomatocare ಹುಡುಗ, ನಮ್ಮ ಸಂಪ್-ಕವರ್ ಅನ್ನು ಕದ್ದಿದ್ದಾರೆ ಎಂದು ಮೆಲ್ನೋಟಕ್ಕೆ ಈ ದೃಶ್ಯದಲ್ಲಿ ಕಾಣುತ್ತಿದೆ. ಸಂಜೆ 6 ಗಂಟೆಗೆ ಈ ಘಟನೆ ನಡೆದಿದೆ. 15 ನಿಮಿಷಕ್ಕೊಮ್ಮೆ ಮನೆಯ ಬಳಿ ಬಂದು ನೋಡುತ್ತಿದ್ದರು. ನಂತರ ಇಬ್ಬರು ಬೈಕ್ನಲ್ಲಿ ಬಂದು ಸಂಪ್ ಕವರ್ ಕದ್ದಿದ್ದಾರೆ” ಎಂದು ಹೇಳಿದ್ದಾರೆ. ರಿಕಿ ಕೇಜ್ ತಮ್ಮ ಎಕ್ಸ್ ಖಾತೆಯಲ್ಲಿ ಎರಡು ವಿಡಿಯೋಗಳನ್ನು ಹಾಗೂ ಸ್ಕ್ರೀನ್ಶಾಟ್ನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ನಂಬರ್ ಪ್ಲೇಟ್ ಸಹ ಇದೆ. ಕೆಂಪು ಹೋಂಡಾ ಆಕ್ಟಿವಾ ಎಂದು ಹೇಳಲಾಗಿದೆ.
I was robbed! Dear @zomato @zomatocare, looks like one of your drivers entered my home on Thursday and stole our sump-cover. This was at 6 o’clock in the evening.. Quite bold of them! This is probably not their first time. They came in just 15 min earlier for a recce, and then… pic.twitter.com/ZpCe9NERYH
— Ricky Kej (@rickykej) December 13, 2025
ಇನ್ನು ರಿಕಿ ಕೇಜ್ ಹಂಚಿಕೊಂಡಿರುವ ಪೋಸ್ಟ್ನಲ್ಲಿ ಕಳ್ಳರನ್ನು ಮತ್ತೆ ಮಾಡಲು ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ. ಇದರ ಜತೆಗೆ ಜನರಿಗೂ ಎಚ್ಚರದಿಂದ ಇರುವಂತೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂತಹ ಘಟನೆಗಳು ಹೆಚ್ಚು ನಡೆಯುತ್ತಿದೆ, ಜಾಗರೂಕರಾಗಿರಿ ಎಂದು ಹೇಳಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ನೆಟ್ಟಿಗರು ಕೂಡ ಈ ಕೃತ್ಯ ಮಾಡಿದವರನ್ನು ತಕ್ಷಣವೇ ಪತ್ತೆ ಮಾಡುವಂತೆ ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ: ಆಳಂದ ಮತಗಳ್ಳತನ ಪ್ರಕರಣ: ಪ್ರಭಾವಿ ನಾಯಕ ಸೇರಿ 7 ಮಂದಿ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ ಸಿಐಡಿ
ರಿಕಿ ಕೇಜ್ ಹಂಚಿಕೊಂಡಿರುವ ಪೋಸ್ಟ್ಗೆ ಝಮಾಟೊ ಕೂಡ ಪ್ರತಿಕ್ರಿಯೆ ನೀಡಿದೆ. ಝಮಾಟೊ ಹೀಗೆ ಹೇಳಿದೆ. “ಹಾಯ್ ರಿಕಿ, ಇದು ನಿಜಕ್ಕೂ ಕಳವಳಕಾರಿಯಾಗಿದೆ, ಮತ್ತು ನಮ್ಮ ವಿತರಣಾ ಪಾಲುದಾರರಿಂದ ಅಂತಹ ನಡವಳಿಕೆಯನ್ನು ನಾವು ಖಂಡಿತವಾಗಿಯೂ ಪ್ರೋತ್ಸಾಹಿಸುವುದಿಲ್ಲ. ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ನಾವು ಕೂಡ ಈ ಬಗ್ಗೆ ತನಿಖೆಯನ್ನು ಮಾಡುತ್ತೇವೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು ಡಿಎಂ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಲು ನಾವು ವಿನಂತಿಸುತ್ತೇವೆ ಇದರಿಂದ ನಾವು ನಿಮ್ಮೊಂದಿಗೆ ಮತ್ತಷ್ಟು ಸಂಪರ್ಕ ಸಾಧಿಸಬಹುದು” ಎಂದು ಹೇಳಿದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ