ಬೆಂಗಳೂರು, ಜನವರಿ 08: ನಗರದಲ್ಲಿ ರೋಡ್ ರೇಜ್ ಪ್ರಕರಣಗಳು (Road rage case) ಹೆಚ್ಚಾಗುತ್ತಿವೆ. ಕಾರಿನಲ್ಲಿ ತೆರಳುತಿದ್ದ ಯುವತಿಯನ್ನ ಅಡ್ಡಗಟ್ಟಿ ಯುವಕರ ಗುಂಪೊಂದು ಪುಂಡಾಟ ಮೆರೆದಿರುವಂತಹ ಘಟನೆ ನಗರದ ಅತ್ತಿಬೆಲೆಯ ಸರ್ಜಾಪುರ ರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಯುವಕರ ಭಯಕ್ಕೆ ಬೈಕ್ ಮೇಲೆ ಕಾರು ಚಲಾಯಿಸಿಕೊಂಡು ಚಾಲಕಿ ಹೋಗಿದ್ದಾಳೆ. ಕಾರಿನ ಡ್ಯಾಶ್ ಕ್ಯಾಮ್ನಲ್ಲಿ ಗಲಾಟೆಯ ದೃಶ್ಯಾವಳಿ ಸೆರೆ ಆಗಿದೆ.
ಓವರ್ ಟೇಕ್ ಮಾಡುವ ವಿಚಾರವಾಗಿ ಗಲಾಟೆ ಶುರುವಾಗಿದೆ. ಯುವಕರಿಂದ ತಪ್ಪಿಸಿಕೊಳ್ಳಲು ಕಾರನ್ನು ಜೋರಾಗಿ ಓಡಿಸಿದ್ದಾಳೆ. ನಂತರ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದ ಕಿಡಿಗೇಡಿಗಳು, ಕಾರನ್ನು ಯುವಕರು ಅಡ್ಡಗಟ್ಟಿದ್ದಾರೆ. ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲ ಘಟನೆ ಕಂಡುಬಂದಿದೆ.
ಟ್ಯಾಲೆಂಟ್‌ರಾಕರ್ ಟೆಕ್ನಾಲಜೀಸ್‌ನ ಸಿಇಒ ಮತ್ತು ಸಂಸ್ಥಾಪಕ ಚರಣ್ ಪಾಲ್ ಸಿಂಗ್ ಎಂಬುವವರು ಘಟನೆಯ ವಿಡಿಯೋವನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದು, ‘ಯಾವುದೇ ಅಪಘಾತ ಸಂಭವಿಸಿಲ್ಲ, ಇದು ಕೇವಲ ಸುಲಿಗೆ ಮತ್ತು ಕಿರುಕುಳ ಪ್ರಕರಣವಾಗಿದ್ದು, ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಈ ಯುವಕರು ತಾವು ಕುಡಿದಿರುವುದಾಗಿ ಮತ್ತು ಸಂಚಾರ ನಿಯಮ ಉಲ್ಲಂಘಿಸಿದ್ದಾರೆಂದು ಒಪ್ಪಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಾವು ಸುರಕ್ಷಿತವಾಗಿಲ್ಲ’ ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕಮಿಷನರ್ ವಾರ್ನ್ ಮಾಡಿದರೂ ಬುದ್ಧಿ ಕಲಿಯದ ಕೆಲ ಕಿಡಿಗೇಡಿಗಳು: ಬೆಂಗಳೂರಲ್ಲಿ ಮತ್ತೆ ಮರುಕಳಿಸಿದ ರೋಡ್ ರೇಜ್ ಪ್ರಕರಣ
ಇತ್ತೀಚಿಗೆ ಮಧ್ಯರಾತ್ರಿ ಕಾರ್ಗೆ ಬೈಕ್ ಅಡ್ಡ ತಂದು ನಿಲ್ಲಿಸಿ ದಾದಾಗಿರಿ ಆರೋಪ ಮಾಡಲಾಗಿತ್ತು. ಅಗರ ಕೆರೆಯಿಂದ ಕೋರಮಂಗಲದವರೆಗೂ ಕಾರನ್ನ ಅಡ್ಡಗಟ್ಟುತ್ತಾ ಬಂದಿದ್ದು, ಕೊನೆಗೆ ಇಳಿದು ಬಂದು ದಾದಾಗಿರಿ ಹಾಕಿರುವುದಾಗಿ ಆರೋಪ ಮಾಡಲಾಗಿತ್ತು. ಮಧ್ಯರಾತ್ರಿ ಈ ರೀತಿಯ ಘಟನೆಯನ್ನ ನಿರೀಕ್ಷಿಸಿರಲಿಲ್ಲ ಎಂದು ಬೆಂಗಳೂರು ಪೊಲೀಸರಿಗೆ ವಿಡಿಯೋ ಟ್ಯಾಗ್ ಮಾಡಿ ಟ್ವೀಟ್ ಮಾಡಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.