ಆದಾಯ ಹೆಚ್ಚಳಕ್ಕೆ ಬಿಬಿಎಂಪಿಯಿಂದ ಹೊಸ ಪ್ಲಾನ್; ತನ್ನ ವ್ಯಾಪ್ತಿಯ ಗುತ್ತಿಗೆ, ಲೀಜ್ ಆಸ್ತಿಗಳ ಮಾರಾಟಕ್ಕೆ ಪ್ಲಾನ್
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿ ನಿರ್ವಹಣಾ ನಿಯಮ 2023 ರ ಜಾರಿಗೆ ಸರ್ಕಾರ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸದ್ಯ ಗುತ್ತಿಗೆಗೆ ನೀಡಿರೋ ಯೂನಿಟಿ ಬಿಲ್ಡಿಂಗ್, ಕಂಠೀರವ ಸ್ಟೇಡಿಯಂ ಸೇರಿದಂತೆ ವಿವಿಧ ಕಡೆ ಇರುವ ಪಾಲಿಕೆ ಆಸ್ತಿಗಳನ್ನ ಹರಾಜಿನ ಮೂಲಕ ಮಾರಾಟ ಮಾಡೋಕೆ ಪಾಲಿಕೆ ಪ್ಲಾನ್ ಮಾಡಿದೆ.
ಬೆಂಗಳೂರು, ಜ.09: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತನ್ನ ಆದಾಯ ಹೆಚ್ಚಳಕ್ಕೆ ಈಗಾಗಲೇ ಬಾಕಿ ತೆರಿಗೆ ವಸೂಲಿಗೆ ಮುಂದಾಗಿತ್ತು. ಇದೀಗ ತನ್ನ ವ್ಯಾಪ್ತಿಯಲ್ಲಿರೋ ಲೀಜ್ ಆಸ್ತಿಗಳನ್ನ ಮಾರಾಟ ಮಾಡೋಕೆ ಪ್ಲಾನ್ ಮಾಡಿದೆ. ಸರ್ಕಾರದ ಮುಂದೆ ಈಗಾಗಲೇ ಪ್ರಸ್ತಾವನೆ ಇಟ್ಟಿರೋ ಪಾಲಿಕೆ, ಈ ಪ್ಲಾನ್ ಸಕ್ಸಸ್ ಆದ್ರೆ 600 ಕೋಟಿ ಆದಾಯ ಹರಿದುಬರುವ ನಿರೀಕ್ಷೆಯಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ತನ್ನ ಬೊಕ್ಕಸದ ಆದಾಯ ಹೆಚ್ಚು ಮಾಡಿಕೊಳ್ಳುವುದಕ್ಕೆ ಹಲವು ಪ್ಲಾನ್ ಮಾಡಿದೆ. ಈಗಾಗಲೇ ಬಾಕಿ ಆಸ್ತಿ ತೆರಿಗೆ ವಸೂಲಿಗೆ ವೇಗ ನೀಡಿರೋ ಪಾಲಿಕೆ, ಇದೀಗ ತನ್ನ ಗುತ್ತಿಗೆ ಹಾಗೂ ಲೀಜ್ ಆಸ್ತಿಗಳನ್ನ ಹರಾಜಿನ ಮೂಲಕ ಮಾರಾಟ ಮಾಡೋಕೆ ಪ್ಲಾನ್ ಮಾಡಿದೆ. ಸದ್ಯ ಈ ಬಗ್ಗೆ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಿರುವ ಪಾಲಿಕೆ, ಶೀಘ್ರದಲ್ಲೇ ಆಸ್ತಿಗಳನ್ನ ಮಾರಾಟ ಮಾಡಿ ಆದಾಯ ಹೆಚ್ಚಿಸೋಕೆ ಸಜ್ಜಾಗಿದೆ.
ಇದನ್ನೂ ಓದಿ: ಬಿಬಿಎಂಪಿ ಮಾಡಿದ್ದ ರಸ್ತೆ ಬಂದ್ ಮಾಡಿರುವ ಆರೋಪ: ಡಿಕೆ ಶಿವಕುಮಾರ್ಗೆ ಮನವಿ ಸಲ್ಲಿಸಿದ ಲೇಔಟ್ ಜನರು
ಇನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿ ನಿರ್ವಹಣಾ ನಿಯಮ 2023 ರ ಜಾರಿಗೆ ಸರ್ಕಾರ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸದ್ಯ ಗುತ್ತಿಗೆಗೆ ನೀಡಿರೋ ಯೂನಿಟಿ ಬಿಲ್ಡಿಂಗ್, ಕಂಠೀರವ ಸ್ಟೇಡಿಯಂ ಸೇರಿದಂತೆ ವಿವಿಧ ಕಡೆ ಇರುವ ಪಾಲಿಕೆ ಆಸ್ತಿಗಳನ್ನ ಹರಾಜಿನ ಮೂಲಕ ಮಾರಾಟ ಮಾಡೋಕೆ ಪಾಲಿಕೆ ಪ್ಲಾನ್ ಮಾಡಿದೆ. ಇನ್ನು ಈ ಹರಾಜಿನಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದ ಸಂಸ್ಥೆಗಳು ಮಾತ್ರ ಆಸ್ತಿಯನ್ನ ಖರೀದಿಸುವ ಅವಕಾಶ ಇದ್ದು, ಪಾಲಿಕೆ ಪ್ಲಾನ್ ಸಕ್ಸಸ್ ಆದ್ರೆ ಬೊಕ್ಕಸಕ್ಕೆ 600 ಕೋಟಿ ಆದಾಯ ಬರುವ ನಿರೀಕ್ಷೆಯಿದೆ.
ಒಟ್ಟಿನಲ್ಲಿ ಪಾಲಿಕೆ ಚುನಾವಣೆಗೂ ಮೊದಲೇ ತನ್ನ ಆದಾಯದ ಮೂಲಗಳ ಬೇಟೆಗೆ ಸಜ್ಜಾಗಿರೋ ಪಾಲಿಕೆ, ಹಲವು ಮಾರ್ಗಗಳು, ಹೊಸ ಪ್ಲಾನ್ಗಳ ಮೂಲಕ ಆದಾಯ ಕ್ರೋಢಿಕರಣಕ್ಕೆ ರೆಡಿಯಾಗಿದೆ. ಸದ್ಯ ಪಾಲಿಕೆಯ ಈ ಐಡಿಯಾ ಎಷ್ಟರಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ