AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ರೋಡ್ ರೇಜ್: ಕಾರಿನಲ್ಲಿ ತೆರಳುತಿದ್ದ ಯುವತಿಯನ್ನ ಅಡ್ಡಗಟ್ಟಿ ಯುವಕರ ಪುಂಡಾಟ

ಬೆಂಗಳೂರು ನಗರದಲ್ಲಿ ರೋಡ್ ರೇಜ್ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾರಿನಲ್ಲಿ ತೆರಳುತಿದ್ದ ಯುವತಿಯನ್ನ ಅಡ್ಡಗಟ್ಟಿ ಯುವಕರ ಗುಂಪೊಂದು ಪುಂಡಾಟ ಮೆರೆದಿರುವಂತಹ ಘಟನೆ ನಗರದ ಅತ್ತಿಬೆಲೆಯ ಸರ್ಜಾಪುರ ರಸ್ತೆಯಲ್ಲಿ‌ ನಿನ್ನೆ ರಾತ್ರಿ ನಡೆದಿದೆ. ಯುವಕರ ಭಯಕ್ಕೆ ಬೈಕ್‌ ಮೇಲೆ ಕಾರು ಚಲಾಯಿಸಿಕೊಂಡು ಚಾಲಕಿ ಹೋಗಿದ್ದಾಳೆ. ಕಾರಿನ ಡ್ಯಾಶ್ ಕ್ಯಾಮ್​ನಲ್ಲಿ ಗಲಾಟೆಯ ದೃಶ್ಯಾವಳಿ ಸೆರೆ ಆಗಿದೆ. 

ಬೆಂಗಳೂರಿನಲ್ಲಿ ರೋಡ್ ರೇಜ್: ಕಾರಿನಲ್ಲಿ ತೆರಳುತಿದ್ದ ಯುವತಿಯನ್ನ ಅಡ್ಡಗಟ್ಟಿ ಯುವಕರ ಪುಂಡಾಟ
ರೋಡ್ ರೇಜ್
ರಾಚಪ್ಪಾಜಿ ನಾಯ್ಕ್
| Edited By: |

Updated on: Jan 08, 2024 | 10:40 PM

Share

ಬೆಂಗಳೂರು, ಜನವರಿ 08: ನಗರದಲ್ಲಿ ರೋಡ್ ರೇಜ್ ಪ್ರಕರಣಗಳು (Road rage case) ಹೆಚ್ಚಾಗುತ್ತಿವೆ. ಕಾರಿನಲ್ಲಿ ತೆರಳುತಿದ್ದ ಯುವತಿಯನ್ನ ಅಡ್ಡಗಟ್ಟಿ ಯುವಕರ ಗುಂಪೊಂದು ಪುಂಡಾಟ ಮೆರೆದಿರುವಂತಹ ಘಟನೆ ನಗರದ ಅತ್ತಿಬೆಲೆಯ ಸರ್ಜಾಪುರ ರಸ್ತೆಯಲ್ಲಿ‌ ನಿನ್ನೆ ರಾತ್ರಿ ನಡೆದಿದೆ. ಯುವಕರ ಭಯಕ್ಕೆ ಬೈಕ್‌ ಮೇಲೆ ಕಾರು ಚಲಾಯಿಸಿಕೊಂಡು ಚಾಲಕಿ ಹೋಗಿದ್ದಾಳೆ. ಕಾರಿನ ಡ್ಯಾಶ್ ಕ್ಯಾಮ್​ನಲ್ಲಿ ಗಲಾಟೆಯ ದೃಶ್ಯಾವಳಿ ಸೆರೆ ಆಗಿದೆ.

ಓವರ್ ಟೇಕ್ ಮಾಡುವ ವಿಚಾರವಾಗಿ ಗಲಾಟೆ ಶುರುವಾಗಿದೆ. ಯುವಕರಿಂದ ತಪ್ಪಿಸಿಕೊಳ್ಳಲು ಕಾರನ್ನು ಜೋರಾಗಿ ಓಡಿಸಿದ್ದಾಳೆ. ನಂತರ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದ ಕಿಡಿಗೇಡಿಗಳು, ಕಾರನ್ನು ಯುವಕರು ಅಡ್ಡಗಟ್ಟಿದ್ದಾರೆ. ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲ ಘಟನೆ ಕಂಡುಬಂದಿದೆ.

ಕುಡುಕರಿಂದ ಸುಲಿಗೆ ಯತ್ನ

ಟ್ಯಾಲೆಂಟ್‌ರಾಕರ್ ಟೆಕ್ನಾಲಜೀಸ್‌ನ ಸಿಇಒ ಮತ್ತು ಸಂಸ್ಥಾಪಕ ಚರಣ್ ಪಾಲ್ ಸಿಂಗ್​ ಎಂಬುವವರು ಘಟನೆಯ ವಿಡಿಯೋವನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದು, ‘ಯಾವುದೇ ಅಪಘಾತ ಸಂಭವಿಸಿಲ್ಲ, ಇದು ಕೇವಲ ಸುಲಿಗೆ ಮತ್ತು ಕಿರುಕುಳ ಪ್ರಕರಣವಾಗಿದ್ದು, ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಈ ಯುವಕರು ತಾವು ಕುಡಿದಿರುವುದಾಗಿ ಮತ್ತು ಸಂಚಾರ ನಿಯಮ ಉಲ್ಲಂಘಿಸಿದ್ದಾರೆಂದು ಒಪ್ಪಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಾವು ಸುರಕ್ಷಿತವಾಗಿಲ್ಲ’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕಮಿಷನರ್ ವಾರ್ನ್ ಮಾಡಿದರೂ ಬುದ್ಧಿ ಕಲಿಯದ ಕೆಲ ಕಿಡಿಗೇಡಿಗಳು: ಬೆಂಗಳೂರಲ್ಲಿ ಮತ್ತೆ ಮರುಕಳಿಸಿದ ರೋಡ್ ರೇಜ್ ಪ್ರಕರಣ

ಇತ್ತೀಚಿಗೆ ಮಧ್ಯರಾತ್ರಿ ಕಾರ್​ಗೆ ಬೈಕ್ ಅಡ್ಡ ತಂದು ನಿಲ್ಲಿಸಿ ದಾದಾಗಿರಿ ಆರೋಪ ಮಾಡಲಾಗಿತ್ತು. ಅಗರ ಕೆರೆಯಿಂದ ಕೋರಮಂಗಲದವರೆಗೂ ಕಾರನ್ನ ಅಡ್ಡಗಟ್ಟುತ್ತಾ ಬಂದಿದ್ದು, ಕೊನೆಗೆ ಇಳಿದು ಬಂದು ದಾದಾಗಿರಿ ಹಾಕಿರುವುದಾಗಿ ಆರೋಪ ಮಾಡಲಾಗಿತ್ತು. ಮಧ್ಯರಾತ್ರಿ ಈ ರೀತಿಯ ಘಟನೆಯನ್ನ ನಿರೀಕ್ಷಿಸಿರಲಿಲ್ಲ ಎಂದು ಬೆಂಗಳೂರು ಪೊಲೀಸರಿಗೆ ವಿಡಿಯೋ ಟ್ಯಾಗ್ ಮಾಡಿ ಟ್ವೀಟ್ ಮಾಡಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ