ಬಿಬಿಎಂಪಿ ಮಾಡಿದ್ದ ರಸ್ತೆ ಬಂದ್ ಮಾಡಿರುವ ಆರೋಪ: ಡಿಕೆ ಶಿವಕುಮಾರ್ಗೆ ಮನವಿ ಸಲ್ಲಿಸಿದ ಲೇಔಟ್ ಜನರು
ಯಲಹಂಕ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಬೆಳ್ಳಳ್ಳಿಯಲ್ಲಿರುವ ವಿಧಾನಸೌಧ ಲೇಔಟ್ಗೆ ಬಿಬಿಎಂಪಿ ಮಾಡಿದ್ದ ಹೊಸ ರಸ್ತೆಯನ್ನ ಖಾಸಗಿ ವ್ಯಕ್ತಿ ಬಂದ್ ಮಾಡಿರುವುದಾಗಿ ಆರೋಪ ಮಾಡಿದ್ದಾರೆ. ಹೀಗಾಗಿ ಕೊಳಚೆ ರಸ್ತೆಯಲ್ಲಿ ಓಡಾಡಲು ಆಗಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ವಿವಾದಕ್ಕೆ ಅಂತ್ಯ ಹಾಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಮನವಿ ಸಲ್ಲಿಕೆ ಮಾಡಲಾಗಿದೆ.
ಬೆಂಗಳೂರು, ಜನವರಿ 07: ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಗದರಲ್ಲಿ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ನಿಮ್ಮ ಸಹಕಾರ’ ಕಾರ್ಯಕ್ರಮ ಮಾಡಲಾಗುತ್ತಿದೆ. ಸದ್ಯ ಈ ಕಾರ್ಯಕ್ರಮದಲ್ಲಿ ಲೇಔಟ್ (Layout) ಜನರು ತಮ್ಮ ಸಂಕಷ್ಟ ತೊಡಿಕೊಂಡಿದ್ದಾರೆ. ಯಲಹಂಕ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಬೆಳ್ಳಳ್ಳಿಯಲ್ಲಿರುವ ವಿಧಾನಸೌಧ ಲೇಔಟ್ಗೆ ಬಿಬಿಎಂಪಿ ಮಾಡಿದ್ದ ಹೊಸ ರಸ್ತೆಯನ್ನ ಖಾಸಗಿ ವ್ಯಕ್ತಿ ಬಂದ್ ಮಾಡಿರುವುದಾಗಿ ಆರೋಪ ಮಾಡಿದ್ದಾರೆ. ಹೀಗಾಗಿ ರಸ್ತೆ ವಿವಾದಕ್ಕೆ ಅಂತ್ಯ ಹಾಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಮನವಿ ಸಲ್ಲಿಸಿದ್ದಾರೆ.
ಕೊಳಚೆ ನೀರು ಹರಿಯುವ ರಸ್ತೆಯಲ್ಲೇ ಲೇಔಟ್ ಜನರು ಓಡಾಟುವಂತಾಗಿದೆ. 2014 ರಲ್ಲಿ ಸೈಟ್ಗಳಿಗೆ ಬಿಡಿಎ ಅನುಮತಿ ನೀಡಿತ್ತು. ಇದೀಗ ಬಿಡಿಎ ಮ್ಯಾಪ್ ಪ್ರಕಾರ ಇದ್ದ ರಸ್ತೆಯ ಜಾಗ ನಮ್ಮದು ಎಂದು ಖಾಸಗಿ ವ್ಯಕ್ತಿ ರಫಿಕ್ ಹೇಳುತ್ತಿದ್ದಾರೆ. ಜಾಗದ ಮೇಲೆ ಕೋರ್ಟ್ ಸ್ಟೇ ತಂದಿದ್ದೇನೆ, ಬೇಲಿ ಹಾಕುತ್ತೇನೆ ಎನ್ನುತ್ತಿದ್ದಾರೆ.
ಇದನ್ನೂ ಓದಿ: ಆಸ್ತಿ ತೆರಿಗೆ ಪಾವತಿಗೆ ಹೆಚ್ಚಿನ ಕಾಲಾವಕಾಶ, ಸರಳ ವಿಧಾನಕ್ಕೆ ಕಾನೂನು ತಿದ್ದುಪಡಿ: ಡಿಸಿಎಂ ಡಿಕೆ ಶಿವಕುಮಾರ್
ನಮಗೆ ಓಡಾಡಲು ರಸ್ತೆ ಬೇಕು ಎಂದು ನಿವಾಸಿಗಳು ಹೇಳುತ್ತಿದ್ದಾರೆ. ಆಂಬುಲೆನ್ಸ್, ಸ್ಕೂಲ್ ವ್ಯಾನ್ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ. ಕೊಳಚೆ ರಸ್ತೆಯಲ್ಲಿ ಓಡಾಡಲು ಆಗಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನಿದು ಪ್ರಕರಣ?
2014 ರಲ್ಲಿ ಬಿಡಿಎ ಅನುಮತಿ ಮೂಲಕ ವಿಧಾನಸೌಧದ 4ನೇ ದರ್ಜೆ ನೌಕರರಿಗೆ ಸೈಟ್ ಹಂಚಿಕೆ ಮಾಡಲಾಗಿದೆ. ಬಳಿಕ 2021 ರಲ್ಲಿ ಲೇ ಔಟ್ಗೆ ಬಿಬಿಎಂಪಿ ರಸ್ತೆ ನಿರ್ಮಾಣ ಮಾಡಿ ವಿದ್ಯುತ್ ಕಂಬ ಅಳವಡಿಸಿತ್ತು. ಆದರೆ ರಸ್ತೆ ಮಾಡಿದ್ದ ಜಾಗ ನನ್ನದು ಎಂದು ರಫೀಕ್ ಎಂಬ ವ್ಯಕ್ತಿಯಿಂದ ಕಿರಿಕ್ ಆರೋಪ ಮಾಡಲಾಗಿದೆ.
ಇದನ್ನೂ ಓದಿ: ಜನಸ್ಪಂದನಾ ಕಾರ್ಯಕ್ರಮ: ಅಂಧ ದಂಪತಿಯ ಮನವಿ ಆಲಿಸಿ ಅವರು ಹೊರಡುವಾಗ ನೋಟುಗಳನ್ನು ನೀಡಿದ ಡಿಕೆ ಶಿವಕುಮಾರ್
ರಸ್ತೆ ಬಂದ್ ಮಾಡಿ ವಿದ್ಯುತ್ ಕಂಬ ತೆರವು ಮಾಡಿರುವ ಆರೋಪ ಕೂಡ ಕೇಳಿಬಂದಿತ್ತು. ಅಧಿಕಾರಿಗಳ ಮೊರೆ ಹೋಗಿದ್ದ ಜನರು ಮತ್ತೆ ರಸ್ತೆ ತೆರೆಸಿದ್ದರು. ಇದೀಗ ಮತ್ತೆ ರಸ್ತೆಗೆ ಮಣ್ಣು ಸುರಿದು ಬಂದ್ ಮಾಡಲಾಗಿದೆ. ಹೈಕೋರ್ಟ್ನಿಂದ ಸ್ಟೇ ತಂದಿದ್ದೇನೆ. ಬೇಲಿ ಹಾಕುತ್ತೇನೆ ಎನ್ನುತ್ತಿದ್ದಾನೆ. ರಫಿಕ್ ನಡೆಯಿಂದ ಲೇ ಔಟ್ ಜನರು ಕಂಗಾಲಾಗಿದ್ದಾರೆ. ನಮಗೆ ರಸ್ತೆ ಓಪನ್ ಮಾಡಿಸಿ ಎಂದು ಡಿಕೆ.ಶಿವಕುಮಾರ್ಗೆ ಪತ್ರ ಬರೆಯಲಾಗಿದೆ.
ವರದಿ: ಶಾಂತಮೂರ್ತಿ ಎಂ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:45 pm, Sun, 7 January 24