ಬೆಂಗಳೂರು, ಫೆ.09: ಬೆಂಗಳೂರು ಹೊರವಲಯದ ಆನೇಕಲ್(Anekal) ತಾಲ್ಲೂಕಿನಲ್ಲಿ ಸರಗಳ್ಳತನ ಮುಂದುವರೆದಿದ್ದು, ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಚನಾಯಕನಹಳ್ಳಿ ಬಳಿ ನಿನ್ನೆ(ಫೆ.09) ರಾತ್ರಿ ಸರಗಳ್ಳರು ಮಾಂಗಲ್ಯ ಸರ ಎಗರಿಸಿದ್ದಾರೆ. ಮಾನಸ ಎಂಬುವವರಿಗೆ ಸೇರಿದ ಸುಮಾರು 3 ಲಕ್ಷ ಮೌಲ್ಯದ 50 ಗ್ರಾಂ ಚಿನ್ನದ ಸರ ಇದಾಗಿದ್ದು, ಬೈಕ್ನಲ್ಲಿ ಬಂದಿದ್ದ ಇಬ್ಬರು ಅಸಾಮಿಗಳು ಈ ಕೃತ್ಯ ಎಸಗಿದ್ದಾರೆ. ನಿನ್ನೆ ರಾತ್ರಿ 9:30 ರ ಸುಮಾರಿಗೆ ಅಂಗಡಿಯಲ್ಲಿ ಪೆನ್ ಖರೀದಿಸುವ ನೆಪದಲ್ಲಿ ಹೆಲ್ಮೆಟ್ ಮತ್ತು ಮಾಸ್ಕ್ ಧರಿಸಿ ಬಂದಿದ್ದ ಖದೀಮರು, ಕ್ಷಣಾರ್ಧದಲ್ಲಿ ಬಂದು ಕೈ ಚಳಕ ತೋರಿಸಿದ್ದಾರೆ. ಖದೀಮರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ಆನೇಕಲ್ನ ಬೇಗೂರು-ಕೊಪ್ಪ ರಸ್ತೆಯ ಹುಲ್ಲಹಳ್ಳಿ ಗೇಟ್ ಬಳಿ ಬೈಕ್ ವೀಲ್ಹಿಂಗ್ ಪುಂಡರ ಪುಂಡಾಟ ಮೀತಿಮೀರಿದೆ. ಯಾವುದೇ ಪೊಲೀಸರ ಭಯವಿಲ್ಲದೆ ಪ್ರತಿಷ್ಠಿತ ಶಾಲೆ ಕಾಲೇಜುಗಳಿರುವ ರಸ್ತೆಯಲ್ಲಿಯೇ ಬೈಕ್ ವೀಲ್ಹಿಂಗ್ ಮಾಡುತ್ತಿದ್ದಾರೆ. ಕೊಂಚ ಯಾಮಾರಿದ್ರು ಅಕ್ಕ ಪಕ್ಕದ ಬೈಕ್ ಸವಾರರಿಗೆ ಅಪಘಾತವಾಗುವ ಸಾಧ್ಯತೆ ಹೆಚ್ಚಿದೆ. ಇವರುಗಳ ಶೋಕಿಗೆ ಇತರ ವಾಹನ ಸವಾರರು ಪ್ರತಿನಿತ್ಯ ಭಯದಲ್ಲೇ ಸಂಚರಿಸುವಂತಾಗಿದೆ.
ಇದನ್ನೂ ಓದಿ:ಆನೇಕಲ್ನಲ್ಲಿ ಇರಾನಿ ಗ್ಯಾಂಗ್ ಹಾವಳಿ; ಹಗಲು-ರಾತ್ರಿ ಎನ್ನದೆ ಸಿಕ್ಕ ಸಿಕ್ಕಾಗೆಲ್ಲ ಸರಗಳ್ಳತನ
ಕಾರು ಡ್ರೈವಿಂಗ್ ಕಲಿಸಲು ಹೋಗಿ ಅಪಘಾತವಾದ ಘಟನೆ ಬೆಂಗಳೂರಿನ ಕೆಎಲ್ಇ ಕಾನೂನು ಕಾಲೇಜು ಬಳಿ ನಡೆದಿತ್ತು. ಬೇಕರಿ ಬಳಿ ನಿಂತಿದ್ದ ಬೈಕ್ಗಳಿಗೆ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿ ನಿಲ್ಲಿಸಿದ್ದ ಬೈಕ್ಗಳಿಗೆ ಗುದ್ದಿತ್ತು. ಗುದ್ದಿದ ರಭಸಕ್ಕೆ ಎಂಟು ಬೈಕುಗಳು ಡ್ಯಾಮೇಜ್ ಆಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಘಟನೆ ಕುರಿತು ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ