ಸೋಂಕಿನ ಭೀತಿಯ ಮಧ್ಯೆಯೂ ಮಾಜಿ ರೌಡಿಶೀಟರ್‌ ಭರ್ಜರಿ ಬರ್ತ್​ ಡೇ

ಬೆಂಗಳೂರು: ಕೊರೊನಾ ಸೋಂಕಿನ ಭೀತಿ ಬೆಂಗಳೂರಿಗರನ್ನ ಇನ್ನೂ ಕಾಡುತ್ತಲೇ ಇದೆ. ಜನ ಗುಂಪಿನಲ್ಲಿ ಸೇರಿ ಮಾತನಾಡಲು ಸಹ ಹಿಂಜರಿಯುತ್ತಿದ್ದಾರೆ. ಅಷ್ಟರ ಮಟ್ಟಿಗೆ ಕೊರೊನಾ ಹಾವಳಿ ಮಿತಿ ಮೀರಿದೆ.  ಆದರೆ, ಈ ಮಧ್ಯೆ ಜನರನ್ನು ಸೇರಿಸಿ ಮಾಜಿ ರೌಡಿಶೀಟರ್‌ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರುವ ಘಟನೆ ಬಾಗಲಗುಂಟೆ ಬಳಿಯಿರುವ ಮಲ್ಲಸಂದ್ರದಲ್ಲಿ ನಡೆದಿದೆ. ಭರ್ಜರಿಯಾಗಿ ಬರ್ತ್​ ಡೇ ಆಚರಿಸಿಕೊಂಡ ಮಾಜಿ ರೌಡಿಶೀಟರ್ ಕಿಟ್ಟಿ ಅಲಿಯಾಸ್ ರೋನಿಗೆ ಆತನ ಪಟಾಲಂ ಮೊದಲು ಕ್ರೇನ್​ ಮೂಲಕ ದೊಡ್ಡ ಹಾರವನ್ನು ಹಾಕಿ ಬಳಿಕ ಅವರ […]

ಸೋಂಕಿನ ಭೀತಿಯ ಮಧ್ಯೆಯೂ ಮಾಜಿ ರೌಡಿಶೀಟರ್‌ ಭರ್ಜರಿ ಬರ್ತ್​ ಡೇ
Edited By:

Updated on: Jun 25, 2020 | 12:02 PM

ಬೆಂಗಳೂರು: ಕೊರೊನಾ ಸೋಂಕಿನ ಭೀತಿ ಬೆಂಗಳೂರಿಗರನ್ನ ಇನ್ನೂ ಕಾಡುತ್ತಲೇ ಇದೆ. ಜನ ಗುಂಪಿನಲ್ಲಿ ಸೇರಿ ಮಾತನಾಡಲು ಸಹ ಹಿಂಜರಿಯುತ್ತಿದ್ದಾರೆ. ಅಷ್ಟರ ಮಟ್ಟಿಗೆ ಕೊರೊನಾ ಹಾವಳಿ ಮಿತಿ ಮೀರಿದೆ.  ಆದರೆ, ಈ ಮಧ್ಯೆ ಜನರನ್ನು ಸೇರಿಸಿ ಮಾಜಿ ರೌಡಿಶೀಟರ್‌ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರುವ ಘಟನೆ ಬಾಗಲಗುಂಟೆ ಬಳಿಯಿರುವ ಮಲ್ಲಸಂದ್ರದಲ್ಲಿ ನಡೆದಿದೆ.

ಭರ್ಜರಿಯಾಗಿ ಬರ್ತ್​ ಡೇ ಆಚರಿಸಿಕೊಂಡ ಮಾಜಿ ರೌಡಿಶೀಟರ್ ಕಿಟ್ಟಿ ಅಲಿಯಾಸ್ ರೋನಿಗೆ ಆತನ ಪಟಾಲಂ ಮೊದಲು ಕ್ರೇನ್​ ಮೂಲಕ ದೊಡ್ಡ ಹಾರವನ್ನು ಹಾಕಿ ಬಳಿಕ ಅವರ ಕೈಯಲ್ಲಿ ಕೇಕ್​ ಕೂಡ ಕತ್ತರಿಸಿದ್ಧಾರೆ.

‘ದಕ್ಷಿಣ ಧ್ರುವದ ಧ್ರುವತಾರೆಯೂ ನೀನೆ!’
ನಮಗೆಂದೆಂದೂ ನಾಯಕ ನೀನೇ. ದಕ್ಷಿಣ ಧ್ರುವದ ಧ್ರುವತಾರೆಯೂ ನೀನೆ. ಅಭಿಮಾನಿ ಬಳಗದ ಹೃದಯವು ನೀನೆ, ಅಂತ್ಯ ಕಾಣದ ಆಗಸ ನೀನೆ ಎಂದು ಕಿಟ್ಟಿಯನ್ನ ಹಾರೈಸಿದ ನೂರಾರು ಅಭಿಮಾನಿಗಳಿಗೆ ಸ್ಥಳೀಯ ರಾಜಕಾರಣಿಗಳು ಕೂಡ ಸಾಥ್​ ನೀಡಿದರು ಎಂದು ತಿಳಿದುಬಂದಿದೆ.

ಮಲ್ಲಸಂದ್ರ ವಾರ್ಡ್​ನಲ್ಲಿ ಎರಡು ಕೊರೊನಾ ಕೇಸ್​ ಪತ್ತೆಯಾಗಿದೆ. ಆದರೂ ಸಾಮಾಜಿಕ ಅಂತರವನ್ನು ಮರೆತು ಜನ ಸೇರಿದ್ದು ನಿಜಕ್ಕೂ ವಿಪರ್ಯಾಸ. ಜೊತೆಗೆ ಕೂಗಳತೆ ದೂರದಲ್ಲಿ ಬಾಗಲಗುಂಟೆ ಠಾಣೆ ಇದ್ರೂ ಪೋಲಿಸರು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರು ತಿಂಗಳ ಹಿಂದೆಯಷ್ಟೇ ಕಿಟ್ಟಿಯನ್ನ ರೌಡಿಶೀಟರ್​ ಪಟ್ಟಿಯಿಂದ ಕೈಬಿಡಲಾಗಿತ್ತು ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.

Published On - 12:01 pm, Thu, 25 June 20