ಬೆಂಗಳೂರು, ಅ.20:‘ಪೊಲೀಸರು ನನ್ನನ್ನು ಬಂಧಿಸಲು ಸಾಧ್ಯವಿಲ್ಲ’ ಎಂದು ವಿಡಿಯೋ ಮಾಡಿ ಹುಡುಗರಿಗೆ ಸ್ಟಾರ್ ಆಗಿದ್ದ ಸಿದ್ದಾಪುರ ರೌಡಿಶೀಟರ್ ರಾಹುಲ್ ಅಲಿಯಾಸ್ ಸ್ಟಾರ್ ರಾಹುಲ್ (Rowdy Sheeter Rahul) ಈಗ ಮತ್ತೊಂದು ರೀಲ್ಸ್ ಮಾಡಿ ಸುದ್ದಿಯಾಗಿದ್ದಾನೆ. ಪೊಲೀಸರ ಎದುರಲ್ಲೆ ಕೈಗೆ ಕೋಳ ಹಾಕಿದ್ದಾಗಲೇ ಸಿಗರೇಟ್ ಸೇದಿ ರೀಲ್ಸ್ ಮಾಡಿದ್ದಾನೆ. ಇದನ್ನು ಕಂಡ ಸಹಚರರು ಹೆಂಗೆ ನಮ್ಮಣ್ಣ ಎಂದು ಮೆರೆಯುತ್ತಿದ್ದಾರೆ.
ಈ ಹಿಂದೆ ಕೊಲೆಯತ್ನ ಕೇಸ್ನಲ್ಲಿ ತಾಕತ್ ಇದ್ರೆ ಹಿಡಿಯಿರಿ ಎಂದು ಅವಾಜ್ ವಾಕಿ ವಿಡಿಯೋ ಮಾಡಿದ್ದ ಸ್ಟಾರ್ ರಾಹುಲ್ ಮತ್ತೊಂದು ರೀಲ್ಸ್ ಮಾಡಿದ್ದಾನೆ. ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡೆಸಿ ಹೊರ ಕರೆತರುವಾಗಲೂ ಸಹ Instagram ರೀಲ್ಸ್ ಮಾಡಿದ್ದಾನೆ. ಪೊಲೀಸರ ಎದುರಲ್ಲೇ ಸಿಗರೇಟ್ ಸೇದಿ ವಿಡಿಯೋ ಮಾಡಿಸಿ ನಾನ್ ಕಸ್ಟಡಿಯಲ್ಲಿದ್ದರೂ ರಾಜನೇ, ಪೊಲೀಸರು ನನಗೇನು ಮಾಡಲಾರರು ಎಂಬ ಸಂದೇಶ ರವಾನಿಸಿದ್ದಾನೆ. ಸದ್ಯ ನಗರದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡಿದವರಿಗೆ ಕೇಸ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಮಂಡ್ಯ: ಪಿತೃಪಕ್ಷ ಹಬ್ಬ ಮಾಡಲು ಊರಿಗೆ ಬಂದಿದ್ದ ಹೆಂಡತಿ, ಮಗನಿಂದಲೇ ಹತ್ಯೆಗೀಡಾದ ವ್ಯಕ್ತಿ; ಇಲ್ಲಿದೆ ವಿವರ
ಕುಳ್ಳು ರಿಜ್ವಾನ್ ಅತ್ಯಾಪ್ತ ಸಹಚರರಲ್ಲಿ ಒಬ್ಬನಾಗಿದ್ದ ಸ್ಟಾರ್ ರಾಹುಲ್ ಮೇಲೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 960 ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಇನ್ಸ್ಟಾಗ್ರಾಂ ವಿಡಿಯೋ ಮಾಡಿದ್ದ ಸ್ಟಾರ್ ರಾಹುಲ್ ಸಿಸಿಬಿ ಹಾಗೂ ಬೆಂಗಳೂರು ಸೌತ್ ಪೊಲೀಸ್ರು ಪೂರ್ತಿ ಹುಡುಕುತ್ತಿದ್ದಾರೆ ಆದ್ರೂ ನಾನು ಸಿಗಲ್ಲ ಎಂದಿದ್ದ.
ಜೊತೆಗೆ ಇನ್ನೊಬ್ಬ ರೌಡಿಶೀಟರ್ ಸೈಕಲ್ ರವಿ ಅಪ್ತ ಬೇಕರಿ ರಘು ಹತ್ಯೆಗೆ ಯತ್ನಿಸಿರುವುದಾಗಿಯೂ ವಿಡಿಯೋದಲ್ಲಿ ಹೇಳಿ ಪೊಲೀಸ್ರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಈ ಹಿನ್ನಲೆ ಪೊಲೀಸರು ಆರೋಪಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು. ಈತನ ಮೇಲೆ ಕೊಲೆಯತ್ನ, ಸುಲಿಗೆ, ಡಕಾಯಿತಿ ಸೇರಿದಂತೆ ಅನೇಕ ಪ್ರಕರಣಗಳಿವೆ. ಇನ್ನು ಕಳೆದ ವರ್ಷ ಗಾಂಜಾ ಕೇಸ್ ಸಂಬಂಧ ರೌಡಿಶೀಟರ್ ರಾಹುಲ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:05 am, Fri, 20 October 23