ಬೆಂಗಳೂರು: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ (Thawar Chand Gehlot) ಅವರ ಎಡಿಸಿ(ಮಿಲಿಟರಿ) ಆಗಿ ಭಾರತೀಯ ವಾಯುಪಡೆಯ ಸ್ಕ್ವಾಡ್ರನ್ ಲೀಡರ್ ಸಂದೀಪ್ ಶರ್ಮಾ(Sandeep Sharma) ಅಧಿಕಾರ ವಹಿಸಿಕೊಂಡಿದ್ದಾರೆ. ಆಗಸ್ಟ್ 18 ರಂದು ಸಂದೀಪ್ ಶರ್ಮಾ ಎಡಿಸಿ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ರಾಜಭವನದಲ್ಲಿ ಸ್ಕ್ವಾಡ್ರನ್ ಲೀಡರ್ ಸಂದೀಪ್ ಶರ್ಮಾ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಐಗುಲೆಟ್ ಅನ್ನು ತೊಡಿಸಿ ಶುಭ ಹಾರೈಸಿದರು.
ರಾಜ್ಯಪಾಲರ ಭದ್ರತೆ, ಎಲ್ಲ ಚಲನವಲನ ಮತ್ತು ಕಾರ್ಯಕ್ರಮಗಳನ್ನು ರೂಪಿಸುವ ಹೊಣೆಗಾರಿಕೆ ಸಂದೀಪ್ ಅವರದ್ದಾಗಿದೆ. ಸಂದೀಪ್ ಅವರು ರಾಜ್ಯಪಾಲರ ಎಡಿಸಿ(ಮಿಲಿಟರಿ) ಯಾಗಿ ಕಾರ್ಯಭಾರ ನಿರ್ವಹಿಸಲಿದ್ದಾರೆ. ಈ ಮೊದಲು ಆರ್ಮಿಯ ರಾಕಿ ತನ್ಮಯ್ ರಾಜ್ಯಪಾಲರ ಎಡಿಸಿ ಆಗಿದ್ದರು. ಈಗ ವಾಯುಪಡೆಯ ಸಂದೀಪ್ ಶರ್ಮಾ ಎಡಿಸಿ ಆಗಿದ್ದಾರೆ.
Published On - 2:44 pm, Sun, 28 August 22