KSRTC ಬಸ್ ಸೀಜ್: ಪ್ರಯಾಣಿಕರ ಸಮೇತ ಠಾಣೆಗೆ ತಂದ ಟ್ರಾಫಿಕ್ ಪೊಲೀಸ್
ರಸ್ತೆಯಲ್ಲಿ ನಿಲ್ಲಿಸಿದ್ದಕ್ಕೆ ಟ್ರಾಫಿಕ್ ಪೇದೆಯೊಬ್ಬರು, ಪ್ರಯಾಣಿಕರ ಸಮೇತ ಬಸ್ ಸೀಜ್ ಮಾಡಿದ ಘಟನೆ ನಡೆದಿದೆ. ಬೆಂಗಳೂರಿನ ಹೆಬ್ಬಾಳದ ಬಳಿ ಈ ಘಟನೆ ನಡೆದಿದೆ. ಹೊಸಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್, ಹೆಬ್ಬಾಳ ಎಸ್ಟೀಮ್ ಮಾಲ್ ಬಳಿ ಸ್ಟಾಪ್ ಕೊಡಲಾಗಿತ್ತು. ಇದರಿಂದ ಟ್ರಾಫಿಕ್ ಪೊಲೀಸ್, ಪ್ರಯಾಣಿಕರಿದ್ದ ಕೆಎಸ್ ಆರ್ ಟಿಸಿ ಬಸ್ ಸೀಜ್ ಮಾಡಿ ಸಂಜಯ ನಗರ ಸಂಚಾರ ಠಾಣೆಗೆ ತಂದಿದ್ದಾರೆ.
ಬೆಂಗಳೂರು, (ಸೆಪ್ಟೆಂಬರ್ 02): ರಸ್ತೆಯಲ್ಲಿ ನಿಲ್ಲಿಸಿದ್ದಕ್ಕೆ ಟ್ರಾಫಿಕ್ ಪೇದೆಯೊಬ್ಬರು, ಪ್ರಯಾಣಿಕರ ಸಮೇತ ಬಸ್ ಸೀಜ್ ಮಾಡಿದ ಘಟನೆ ನಡೆದಿದೆ. ಬೆಂಗಳೂರಿನ ಹೆಬ್ಬಾಳದ ಬಳಿ ಈ ಘಟನೆ ನಡೆದಿದೆ. ಹೊಸಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್, ಹೆಬ್ಬಾಳ ಎಸ್ಟೀಮ್ ಮಾಲ್ ಬಳಿ ಸ್ಟಾಪ್ ಕೊಡಲಾಗಿತ್ತು. ಇದರಿಂದ ಟ್ರಾಫಿಕ್ ಪೊಲೀಸ್, ಪ್ರಯಾಣಿಕರಿದ್ದ ಕೆಎಸ್ ಆರ್ ಟಿಸಿ ಬಸ್ ಸೀಜ್ ಮಾಡಿ ಸಂಜಯ ನಗರ ಸಂಚಾರ ಠಾಣೆಗೆ ತಂದಿದ್ದಾರೆ. ತುರ್ತಾಗಿ ಹೋಗಬೇಕು. ಬಸ್ ನಂಬರ್ ಪಡೆದು ಕೇಸ್ ಹಾಕಿ ಎಂದು ಪ್ರಯಾಣಿಕರು ಮನವಿ ಮಾಡಿದ್ದಾರೆ. ಎಂದರೂ ಕೇಳದ ಪೊಲೀಸಪ್ಪ ಬಸ್ ಅನ್ನು ಪೊಲೀಸ್ ಠಾಣೆಗೆ ಓಡಿಸಿದ್ದಾನೆ. ಇದರಿಂದ ಪ್ರಯಾಣಿಕರು ತೀವ್ರ ಆಕ್ರೋಶಗೊಂಡು ಪೊಲೀಸಪ್ಪನಿಗೆ ತರಾಟಗೆ ತೆಗೆದುಕೊಂಡಿದ್ದಾರೆ.
ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಿ ಎಂದರೂ ಕೇಳದೆ ನಿರ್ಲಕ್ಷ್ಯ. ಕೊನೆಗೆ ಪ್ರಯಾಣಿಕರು ಬೇರೆ ಬಸ್ ಗಳಲ್ಲಿ ತೆರಳಿದರು.
Published on: Sep 02, 2025 06:42 PM
