
ಬೆಂಗಳೂರು: ನಗರದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಮಹಾಮಾರಿಯ ಆರ್ಭಟ ಖಾಕಿಯ ಮೇಲೆ ಮುಂದುವರಿದಿದೆ. ವಿ.ವಿ.ಪುರಂ ಮತ್ತು ಕಲಾಸಿಪಾಳ್ಯ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 7 ಸಿಬ್ಬಂದಿಗೆ ಇಂದು ಸೋಂಕು ದೃಢವಾಗಿದೆ.
ಇತ್ತೀಚೆಗೆ ಸೋಂಕಿನಿಂದ ವಿ.ವಿ. ಪುರಂ ಸಂಚಾರಿ ಠಾಣೆಯ ಟ್ರಾಫಿಕ್ ASI ಒಬ್ಬರು ಮೃತಪಟ್ಟಿದ್ದರು. ಜೊತೆಗೆ ಕಲಾಸಿಪಾಳ್ಯ ಠಾಣೆಯ ಸಿಬ್ಬಂದಿಗೂ ಕೊರೊನಾ ಪಾಸಿಟಿವ್ ಎಂದು ವರದಿಯಾಗಿತ್ತು. ಇದೀಗ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೂ ಸಹ ಸೋಂಕು ತಗುಲಿದ್ದು ಮುಂದಿನ ದಿನಗಳಲ್ಲಿ ಇದರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ.