ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ವೆಂಟಿಲೇಟರ್ಗಳು ಇಲ್ಲವೇ?
ಬೆಂಗಳೂರು: ನಗರದ ಬಡವರಿಗೆ ಕೊರೊನಾ ಬಂದ್ರೆ ಚಿಕಿತ್ಸೆ ಪಡೆಯೋಕೆ ಎಲ್ಲಿಗೆ ಹೋಗೋದು ಅನ್ನೋ ಚಿಂತೆ ಶುರುವಾಗಿದೆ. ಯಾಕಂದ್ರೆ ಇಷ್ಟು ದಿನ ಕೋವಿಡ್ ರೋಗಿಗಳಿಗೆ ಮುಖ್ಯ ಆಸ್ಪತ್ರೆಯಾಗಿದ್ದ ವಿಕ್ಟೋರಿಯಾದಲ್ಲಿ ವೆಂಟಿಲೇಟರ್ಗಳ ಕೊರತೆ ಇದ್ಯಾ ಅನ್ನೋ ಪ್ರಶ್ನೆ ಎಲ್ಲರ ಮನಸ್ಸಲ್ಲಿ ಹುಟ್ಟಿದೆ. ಇದಕ್ಕೆ ಸಾಕ್ಷಿಯೆಂಬಂತೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲ ಅನ್ನೋ ಕಾರಣದಿಂದ ಕೋವಿಡ್ ಸೋಂಕಿತ ಬಡರೋಗಿಯೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ಮೊತ್ತವನ್ನು ಭರಿಸಿ ಚಿಕಿತ್ಸೆ ಪಡೆಯುವ ಪ್ರಸಂಗ ಎದುರಾಗಿದೆ. ಹೌದು, ನಾಲ್ಕು ದಿನಗಳ ಹಿಂದೆ ತೀವ್ರ ಜ್ವರದಿಂದ ಬಳಲುತ್ತಿದ್ದ […]
ಬೆಂಗಳೂರು: ನಗರದ ಬಡವರಿಗೆ ಕೊರೊನಾ ಬಂದ್ರೆ ಚಿಕಿತ್ಸೆ ಪಡೆಯೋಕೆ ಎಲ್ಲಿಗೆ ಹೋಗೋದು ಅನ್ನೋ ಚಿಂತೆ ಶುರುವಾಗಿದೆ. ಯಾಕಂದ್ರೆ ಇಷ್ಟು ದಿನ ಕೋವಿಡ್ ರೋಗಿಗಳಿಗೆ ಮುಖ್ಯ ಆಸ್ಪತ್ರೆಯಾಗಿದ್ದ ವಿಕ್ಟೋರಿಯಾದಲ್ಲಿ ವೆಂಟಿಲೇಟರ್ಗಳ ಕೊರತೆ ಇದ್ಯಾ ಅನ್ನೋ ಪ್ರಶ್ನೆ ಎಲ್ಲರ ಮನಸ್ಸಲ್ಲಿ ಹುಟ್ಟಿದೆ.
ಇದಕ್ಕೆ ಸಾಕ್ಷಿಯೆಂಬಂತೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲ ಅನ್ನೋ ಕಾರಣದಿಂದ ಕೋವಿಡ್ ಸೋಂಕಿತ ಬಡರೋಗಿಯೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ಮೊತ್ತವನ್ನು ಭರಿಸಿ ಚಿಕಿತ್ಸೆ ಪಡೆಯುವ ಪ್ರಸಂಗ ಎದುರಾಗಿದೆ. ಹೌದು, ನಾಲ್ಕು ದಿನಗಳ ಹಿಂದೆ ತೀವ್ರ ಜ್ವರದಿಂದ ಬಳಲುತ್ತಿದ್ದ 57 ವರ್ಷದ ವ್ಯಕ್ತಿಯೊಬ್ಬರನ್ನು ನಗರದ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಸ್ವ್ಯಾಬ್ ಟೆಸ್ಟ್ನಲ್ಲಿ ಪಾಸಿಟಿವ್ ಬಂದಿತ್ತು.
ಹಾಗಾಗಿ ಸೋಂಕಿತರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲು ನಿರ್ಧರಿಸಲಾಯಿತು. ಆದರೆ, ವಿಕ್ಟೋರಿಯಾದ ಕೋವಿಡ್ ವಾರ್ಡ್ನಲ್ಲಿ ವೆಂಟಿಲೇಟರ್ ಫುಲ್ ಆಗಿದೆ ಅನ್ನೋ ಸಬೂಬು ನೀಡಿ ರೋಗಿಯನ್ನೇ ಶಿಫ್ಟ್ ಮಾಡೋಕೆ ಒಪ್ಪುತ್ತಿಲ್ಲವಂತೆ. ಇತ್ತ ಖಾಸಗಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಲು ಕಷ್ಟವಾಗ್ತಿದೆ ಅಂತಾ ಸೋಂಕಿತರ ಸಂಬಂಧಿಕರು ಪರದಾಡುತ್ತಿದ್ದಾರೆ. ಇದರ ಮಧ್ಯೆ ಆರೋಗ್ಯ ಅಧಿಕಾರಿಗಳು ತಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದೂ ಸಹ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದರಿಂದ ಇದೀಗ ಎಲ್ಲರ ಮನಸ್ಸಲ್ಲಿ ಕಾಡುತ್ತಿರುವ ಪ್ರಶ್ನೆ.. ವಿಕ್ಟೋರಿಯಾದಲ್ಲಿ ನಿಜಕ್ಕೂ ವೆಂಟಿಲೇಟರ್ಗಳ ಕೊರತೆ ಇದೆಯೇ? ಎಂಬುದು.