ಸಕಲ ಸರ್ಕಾರಿ ಗೌರವದೊಂದಿಗೆ ಹುತಾತ್ಮ ಯೋಧರ ಅಂತ್ಯಕ್ರಿಯೆ
ಹೈದರಾಬಾದ್: ಲಡಾಖ್ನಲ್ಲಿ ಚೀನಾ ಮತ್ತು ಭಾರತ ನಡುವೆ ನಡೆದ ಘರ್ಷಣೆಯಲ್ಲಿ ನಮ್ಮ ದೇಶದ 20 ಯೋಧರು ಹುತಾತ್ಮರಾಗಿದ್ದರು. ಇಂದು ಸೂರ್ಯಪೇಟ್ನಲ್ಲಿ ಕರ್ನಲ್ ಸಂತೋಷ್ ಬಾಬು ಅವರ ಅಂತ್ಯಕ್ರಿಯೆ ಸಕಲ ಗೌರವದೊಂದಿಗೆ ನೆರವೇರಿದೆ. ಕರ್ನಲ್ ಸಂತೋಷ್ ಬಾಬುರ ಅಂತಿಮ ಯಾತ್ರೆಯಲ್ಲಿ ಭಾರಿ ಪ್ರಮಾಣದಲ್ಲಿ ಜನ ಸೇರಿದ್ದರು. ಅವರ ತ್ಯಾಗ, ಬಲಿದಾನ ಬಗ್ಗೆ ಹೆಮ್ಮೆಯಿಂದ ಜಯಘೋಷ ಹಾಕುತ್ತಿದ್ದರು. ಅಂತಿಮ ಯಾತ್ರೆಯಲ್ಲಿ ತೆಲಂಗಾಣದ ಸಚಿವರು, ಸೇನಾ ಅಧಿಕಾರಿಗಳು ಭಾಗಿಯಾಗಿದ್ದರು. ಸೂರ್ಯಪೇಟ್ನಿಂದ 6ಕಿ.ಮೀ ದೂರದಲ್ಲಿನ ಸಂತೋಷ್ ಬಾಬು ಕುಟುಂಬದ ಕೃಷಿ ಭೂಮಿಯ ವೆರೆಗೂ […]
ಹೈದರಾಬಾದ್: ಲಡಾಖ್ನಲ್ಲಿ ಚೀನಾ ಮತ್ತು ಭಾರತ ನಡುವೆ ನಡೆದ ಘರ್ಷಣೆಯಲ್ಲಿ ನಮ್ಮ ದೇಶದ 20 ಯೋಧರು ಹುತಾತ್ಮರಾಗಿದ್ದರು. ಇಂದು ಸೂರ್ಯಪೇಟ್ನಲ್ಲಿ ಕರ್ನಲ್ ಸಂತೋಷ್ ಬಾಬು ಅವರ ಅಂತ್ಯಕ್ರಿಯೆ ಸಕಲ ಗೌರವದೊಂದಿಗೆ ನೆರವೇರಿದೆ.
ಕರ್ನಲ್ ಸಂತೋಷ್ ಬಾಬುರ ಅಂತಿಮ ಯಾತ್ರೆಯಲ್ಲಿ ಭಾರಿ ಪ್ರಮಾಣದಲ್ಲಿ ಜನ ಸೇರಿದ್ದರು. ಅವರ ತ್ಯಾಗ, ಬಲಿದಾನ ಬಗ್ಗೆ ಹೆಮ್ಮೆಯಿಂದ ಜಯಘೋಷ ಹಾಕುತ್ತಿದ್ದರು. ಅಂತಿಮ ಯಾತ್ರೆಯಲ್ಲಿ ತೆಲಂಗಾಣದ ಸಚಿವರು, ಸೇನಾ ಅಧಿಕಾರಿಗಳು ಭಾಗಿಯಾಗಿದ್ದರು.
ಸೂರ್ಯಪೇಟ್ನಿಂದ 6ಕಿ.ಮೀ ದೂರದಲ್ಲಿನ ಸಂತೋಷ್ ಬಾಬು ಕುಟುಂಬದ ಕೃಷಿ ಭೂಮಿಯ ವೆರೆಗೂ ಪಾರ್ಥಿವ ಶರೀರದ ಮೆರವಣಿಗೆ ನಂತರ ಸಕಲ ಸರ್ಕಾರಿ ಗೌರವ ಮತ್ತು ಸೇನಾ ಗೌರವದೊಂದಿಗೆ ಹುತಾತ್ಮ ಕರ್ನಲ್ ಸಂತೋಷ್ ಬಾಬುರ ಅಂತ್ಯಕ್ರಿಯೆ ನೆರವೇರಿದೆ.
ಕಡುಕಲೂರಿನಲ್ಲಿ ಹವಾಲ್ದಾರ್ ಕೆ.ಪಳನಿ ಅಂತ್ಯಸಂಸ್ಕಾರ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಮತ್ತು ಭಾರತ ಸೈನಿಕರ ಘರ್ಷಣೆಯಲ್ಲಿ ಹುತಾತ್ಮರಾಗಿದ ಹವಾಲ್ದಾರ್ ಕೆ.ಪಳನಿ ಅವರ ಅಂತ್ಯಸಂಸ್ಕಾರವನ್ನು ಕಡುಕಲೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಹುತಾತ್ಮರಾದ 20 ಯೋಧರ ಅಂತ್ಯಕ್ರಿಯೆ ನೆರವೇರಿದ್ದು, ಯೋಧರ ಕುಟುಂಬದಲ್ಲಿ ಮೌನ ಆವರಿಸಿದೆ.
Published On - 11:48 am, Thu, 18 June 20