India vs China ಚೀನಾಕ್ಕೆ ಬಿತ್ತು ಮೊದಲ ಪೆಟ್ಟು! 471 ಕೋ ರೂ ರೈಲ್ವೆ ಯೋಜನೆಗಳು ರದ್ದು
ನವದೆಹಲಿ: ಚೀನಾ ಸಹಭಾಗಿತ್ವದ ರೈಲ್ವೆ ಯೋಜನೆಗಳು ಒಂದೊಂದಾಗಿ ರದ್ದಾಗತೊಡಗಿವೆ. ಮಹತ್ವದ ನಿರ್ಧಾರ ಕೈಗೊಂಡಿರುವ ರೈಲ್ವೆ ಸಚಿವಾಲಯ ಸರಿಸುಮಾರು 471 ಕೋಟಿ ರೂಪಾಯಿ ಮೊತ್ತದ ಗುತ್ತಿಗೆ ರದ್ದು ಮಾಡಿದೆ. ರೈಲ್ವೆ ಸಿಗ್ನಲ್ ಹಾಗೂ ಟೆಲಿಕಾಂಗೆ ಸಂಬಂಧಿತ ಗುತ್ತಿಗೆ ರದ್ದಾಗಿದೆ. ಕಳಪೆ ಸಾಧನೆ ಎಂದು ಕಾರಣ ತಿಳಿಸಿ ಗುತ್ತಿಗೆ ರದ್ದು ಮಾಡಲಾಗಿದೆ. ಡೆಡಿಕೇಟೆಡ್ ಫ್ರೀಟ್ ಕಾರಿಡಾರ್ ಕಾರ್ಪೊರೇಶನ್ ಇಂಡಿಯಾ (DFCCIL) ಸಂಸ್ಥೆಯು ಬೀಜಿಂಗ್ ನ್ಯಾಷನಲ್ ರೈಲ್ವೆ ರೀಸರ್ಚ್ ಅಂಡ್ ಡಿಸೈನ್ (BNRRDDI) ಸಂಸ್ಥೆ ಜೊತೆಗಿನ ಒಪ್ಪಂದವನ್ನು ನಿಧಾನಗತಿ ಕಾರಣ ನೀಡಿ […]

ನವದೆಹಲಿ: ಚೀನಾ ಸಹಭಾಗಿತ್ವದ ರೈಲ್ವೆ ಯೋಜನೆಗಳು ಒಂದೊಂದಾಗಿ ರದ್ದಾಗತೊಡಗಿವೆ. ಮಹತ್ವದ ನಿರ್ಧಾರ ಕೈಗೊಂಡಿರುವ ರೈಲ್ವೆ ಸಚಿವಾಲಯ ಸರಿಸುಮಾರು 471 ಕೋಟಿ ರೂಪಾಯಿ ಮೊತ್ತದ ಗುತ್ತಿಗೆ ರದ್ದು ಮಾಡಿದೆ. ರೈಲ್ವೆ ಸಿಗ್ನಲ್ ಹಾಗೂ ಟೆಲಿಕಾಂಗೆ ಸಂಬಂಧಿತ ಗುತ್ತಿಗೆ ರದ್ದಾಗಿದೆ. ಕಳಪೆ ಸಾಧನೆ ಎಂದು ಕಾರಣ ತಿಳಿಸಿ ಗುತ್ತಿಗೆ ರದ್ದು ಮಾಡಲಾಗಿದೆ.
ಡೆಡಿಕೇಟೆಡ್ ಫ್ರೀಟ್ ಕಾರಿಡಾರ್ ಕಾರ್ಪೊರೇಶನ್ ಇಂಡಿಯಾ (DFCCIL) ಸಂಸ್ಥೆಯು ಬೀಜಿಂಗ್ ನ್ಯಾಷನಲ್ ರೈಲ್ವೆ ರೀಸರ್ಚ್ ಅಂಡ್ ಡಿಸೈನ್ (BNRRDDI) ಸಂಸ್ಥೆ ಜೊತೆಗಿನ ಒಪ್ಪಂದವನ್ನು ನಿಧಾನಗತಿ ಕಾರಣ ನೀಡಿ ರದ್ದುಗೊಳಿಸಿದೆ.
2016ರಲ್ಲಿ ಚೀನಾ ರೈಲ್ವೆ ಸಿಗ್ನಲ್ ಕಮ್ಯುನಿಕೇಷನ್ ನಿಗಮವು 400 ಕಿಮೀ ಮಾರ್ಗದಲ್ಲಿ ರೈಲ್ವೆ ಹಳಿಗಳನ್ನು ಹಾಕುವ ಗುತ್ತಿಗೆ ಪಡೆದಿತ್ತು. ಟೆಲಿಕಾಂ ಸಚಿವಾಲಯದಿಂದಲೂ ಕಡಿವಾಣಕ್ಕೆ ಮುಂದಾಗಿದ್ದು, ಚೀನಾ ಉತ್ಪನ್ನಗಳ ಬಳಕೆಗೆ ಕಡಿವಾಣ ಹಾಕಲು ಚಿಂತನೆ ನಡೆದಿದೆ.
Published On - 4:26 pm, Thu, 18 June 20