ಹುಟ್ಟೂರು ತಲುಪಿದ ವೀರ ಸೇನಾನಿಗಳ ಪಾರ್ಥಿವ ಶರೀರ, ಇಂದು ಹುತಾತ್ಮ ಯೋಧರ ಅಂತ್ಯಕ್ರಿಯೆ
ದೆಹಲಿ: ಕೆಚ್ಚೆದೆಯಿಂದ ಚೀನಿಯರ ವಿರುದ್ಧ ಹೋರಾಡಿದ ನಮ್ಮ ಯೋಧರು ವೀರ ಮರಣವನ್ನ ಹೊಂದಿದ್ದಾರೆ. ಡ್ರ್ಯಾಗನ್ ರಾಷ್ಟ್ರದ ಅಟ್ಟಹಾಸಕ್ಕೆ ನಮ್ಮ ಹೆಮ್ಮೆಯ ಸೈನಿಕರು ಪ್ರಾಣ ತೆತ್ತಿದ್ದಾರೆ. ನರಿ ಬುದ್ಧಿ ಚೀನಿಯರ ನೀಚ ಕೃತ್ಯಕ್ಕೆ ನಮ್ಮ ನಾಡಿನ 20 ಯೋಧರು ಉಸಿರು ನಿಲ್ಲಿಸಿ ಚಿರ ನಿದ್ರೆಗೆ ಜಾರಿದ್ದಾರೆ. ಇಂದು ಹುತಾತ್ಮ ಯೋಧರ ಅಂತ್ಯಕ್ರಿಯೆ ನಡೆಯಲಿದೆ. ಇಂದು ಹುತಾತ್ಮ ವೀರ ಸೇನಾನಿಗಳ ಅಂತ್ಯಕ್ರಿಯೆ! ಚೀನಿಯರ ಅಟ್ಟಹಾಸಕ್ಕೆ ನಾವು 20ವೀರ ಯೋಧರನ್ನ ಕಳೆದುಕೊಂಡಿದ್ದೇವೆ. ಚೀನಿಯರ ಜೊತೆ ಕೆಚ್ಚೆದೆಯಿಂದ ಹೋರಾಡಿದ ಸೇನಾನಿಗಳು ಈಗ ಚಿರನಿದ್ರೆಗೆ […]
ದೆಹಲಿ: ಕೆಚ್ಚೆದೆಯಿಂದ ಚೀನಿಯರ ವಿರುದ್ಧ ಹೋರಾಡಿದ ನಮ್ಮ ಯೋಧರು ವೀರ ಮರಣವನ್ನ ಹೊಂದಿದ್ದಾರೆ. ಡ್ರ್ಯಾಗನ್ ರಾಷ್ಟ್ರದ ಅಟ್ಟಹಾಸಕ್ಕೆ ನಮ್ಮ ಹೆಮ್ಮೆಯ ಸೈನಿಕರು ಪ್ರಾಣ ತೆತ್ತಿದ್ದಾರೆ. ನರಿ ಬುದ್ಧಿ ಚೀನಿಯರ ನೀಚ ಕೃತ್ಯಕ್ಕೆ ನಮ್ಮ ನಾಡಿನ 20 ಯೋಧರು ಉಸಿರು ನಿಲ್ಲಿಸಿ ಚಿರ ನಿದ್ರೆಗೆ ಜಾರಿದ್ದಾರೆ. ಇಂದು ಹುತಾತ್ಮ ಯೋಧರ ಅಂತ್ಯಕ್ರಿಯೆ ನಡೆಯಲಿದೆ.
ಇಂದು ಹುತಾತ್ಮ ವೀರ ಸೇನಾನಿಗಳ ಅಂತ್ಯಕ್ರಿಯೆ! ಚೀನಿಯರ ಅಟ್ಟಹಾಸಕ್ಕೆ ನಾವು 20ವೀರ ಯೋಧರನ್ನ ಕಳೆದುಕೊಂಡಿದ್ದೇವೆ. ಚೀನಿಯರ ಜೊತೆ ಕೆಚ್ಚೆದೆಯಿಂದ ಹೋರಾಡಿದ ಸೇನಾನಿಗಳು ಈಗ ಚಿರನಿದ್ರೆಗೆ ಜಾರಿದ್ದಾರೆ. ಇಂದು ಈ ಹುತಾತ್ಮ ಯೋಧರ ಅಂತ್ಯಕ್ರಿಯೆ ನಡೆಯಲಿದೆ. ಈಗಾಗಲೇ ಹುತಾತ್ಮ ಯೋಧರ ಪಾರ್ಥಿವ ಶರೀರ ಅವರವರ ಮನೆ ಸೇರಿದ್ದು, ಸಾವಿರಾರು ಜನ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಹೈದರಾಬಾದ್‌ನ ಸೂರ್ಯಪೇಟ್‌ನ ಕರ್ನಲ್ ಸಂತೋಷ್ ಬಾಬು ಅವರ ಪಾರ್ಥಿವ ಶರೀರ ತಡ ರಾತ್ರಿ ಅವರ ಮನೆ ತಲುಪಿತು. ಇದಕ್ಕೂ ಮೊದಲು ಏರ್‌ಪೋರ್ಟ್‌ನಲ್ಲಿ ಸಂತೋಷ್ ಬಾಬು ಅವರ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರ ಗೌರವ ನೀಡಲಾಯ್ತು. ಹಾಗೇ ರಾತ್ರಿಯಿಡಿ ನೂರಾರು ಜನ ಸಂತೋಷ್ ಅವರ ಅಂತಿಮ ದರ್ಶನ ಪಡೆದ್ರು. ಇನ್ನು ಇಂದು ಸಕಲ ಸರ್ಕಾರಿ ಗೌರವದೊಂದಿದೆ ಸಂತೋಷ್ ಬಾಬು ಅಂತ್ಯಕ್ರಿಯೆ ನಡೆಯಲಿದೆ.
ಹಾಗೇ ತಮಿಳುನಾಡಿನ ಹವಾಲ್ದಾರ್ ಕೆ. ಪಳನಿ ಅವರ ಅಂತಿಮ ದರ್ಶನಕ್ಕೆ ಅವರ ಮನೆ ಬಳಿ ರಾತ್ರಿಯೇ ಸಲಕ ವ್ಯವಸ್ಥೆ ಮಾಡಲಾಗಿತ್ತು. ಊರಿನ ಜನ, ಕುಟುಂಬಸ್ಥರು ದೇಶಕ್ಕಾಗಿ ಪ್ರಾಣ ತೆತ್ತ ಯೋಧನ ಅಂತಿಮ ದರ್ಶನ ಪಡೆದ್ರು. ಕೆ. ಪಳನಿ ಅವರ ಪಾರ್ಥಿವ ಶರೀರ ಮನೆ ಬಳಿ ಬರುತ್ತಿದ್ದಂತೆ ಪೊಲೀಸ್ ಇಲಾಖೆಯಿಂದ ಗೌರವವನ್ನ ನೀಡಲಾಯ್ತು.
ಇನ್ನು ಛತ್ತೀಸ್ಗಢದ ಸಿಪಾಯಿ ಗಣೇಶ್ ರಾಮ್, ಒಡಿಶಾದ ಸಿಪಾಯಿ ಚಂದ್ರಕಾಂತ ಪ್ರಧಾನ್, ಪಶ್ಚಿಮ ಬಂಗಾಳದ ಸಿಪಾಯಿ ರಾಜೇಶ್ ಓರಂಗ್ , ಜಾರ್ಖಂಡ್ ಸಿಪಾಯಿ ಕುಂದನ್ ಕುಮಾರ್ ಓಝಾ, ಹಿಮಾಚಲಪ್ರದೇಶದ ಸಿಪಾಯಿ ಅಂಕುಶ್, ಪಂಜಾಬ್‌ನ ಸುಬೇದಾರ್ ಸತ್ನಮ್ ಸಿಂಗ್, ಪಶ್ಚಿಮಬಂಗಾಳದ ಹವಾಲ್ದಾರ್ ಬಿಪುಲ್ ರಾಯ್,
ಜಾರ್ಖಂಡ್‌ನ ಸಿಪಾಯಿ ಗಣೇಶ್ ಹನ್ಸ್ದಾ, ಒಡಿಶಾದ ಸುಬೇದಾರ್ ನುದುರಾಮ್ ಸೊರೇನ್, ಪಂಜಾಬ್‌ನ ಸಿಪಾಯಿ ಗುರ್ಬಿಂದರ್, ಬಿಹಾರದ ಸಿಪಾಯಿ ಕುಂದನ್ ಕುಮಾರ್, ಬಿಹಾರದ ಸಿಪಾಯಿ ಕಿಶೋರ್ ಸಿಂಗ್, ಪಂಜಾಬ್‌ನ ಸಿಪಾಯಿ ಗುರುತೇಜ್, ಬಿಹಾರ ಸಿಪಾಯಿ ಚಂದನ್ ಕುಮಾರ್, ಮಧ್ಯಪ್ರದೇಶದ ನಾಯ್ಕ್ ದೀಪಕ್ ಸಿಂಗ್, ಪಂಜಾಬ್‌ನ ಸುಬೇದಾರ್ ಮಂದೀಪ್ ಸಿಂಗ್, ಬಿಹಾರದ ಸಿಪಾಯಿ ಅಮನ್ ಕುಮಾರ್ ಚೀನಿಯ ವಿರುದ್ಧ ಹೋರಾಡಿ ಪ್ರಾಣ ತೆತ್ತಿದ್ದು ಈಗಾಗಲೇ ಬಹುತೇಕರ ಪ್ರಾರ್ಥಿವ ಶರೀರ ಅವರವರ ಮನೆ ಸೇರಿದೆ. ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಇವರ ಅಂತ್ಯಕ್ರಿಯೆ ನಡೆಯಲಿದೆ.
ಒಟ್ನಲ್ಲಿ ಚೀನಿಯರ ಅಟ್ಟಹಾಸಕ್ಕೆ ನಾವು ಇಂದು 20 ಯೋಧರನ್ನ ಕಳೆದುಕೊಂಡಿದ್ದೇವೆ. ಇವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೇ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಆ ದೇವರು ನೀಡಲಿ ಎಂದು ಪ್ರಾರ್ಥಿಸೋಣ.
Published On - 7:24 am, Thu, 18 June 20