ಶಿವಮೊಗ್ಗ: ಶಿವಮೊಗ್ಗದ ಮಿಳಘಟ್ಪದ ಬಾಡಿಗೆ ಮನೆಯಲ್ಲಿ ವಾಸವಿದ್ದ ಪ್ರತಾಪ (70) ಮತ್ತು ದಾನಮ್ಮ (63) ಎಂಬ ವೃದ್ಧ ದಂಪತಿಗಳು ಕುಟುಂಬ ನಿರ್ವಹಣೆಗಾಗಿ ಪರದಾಡುತ್ತಿದ್ದರು. ಪತ್ನಿಯೇ ಕೊಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದು, ಸಾಲ ಮಾಡಿಕೊಂಡಿದ್ದ ವೃದ್ಧೆ ಕೈ ಸಾಲ ಮಾಡಿಕೊಂಡಿದ್ದರು. ಇತ್ತ ಸಾಕಿದ ಮಗನಿಗೂ ಸ್ಟ್ರೋಕ್ ಹೊಡೆದ ಹಿನ್ನಲೆ ಆತ ಕೂಡಾ ಮನೆಯಲ್ಲಿಯೇ ಹಾಸಿಗೆ ಹಿಡಿದಿದ್ದ. ಮನೆ ಬಾಡಿಗೆ ಕಟ್ಟಲು ಆಗದೇ ಇತ್ತ ಸಾಲಗಾರರ ಕಾಟವು ತಾಳಲಾರದೇ ನೊಂದ ದಂಪತಿಗಳು. ತಾವೂ ವಿಷ ಸೇವಿಸಿ ಮಗನಿಗೂ ವಿಷ ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಸ್ವಸ್ಥ ಮಗ ಮಂಜುನಾಥ್ಗೆ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಜುನಾಥ (25) ಸಾವನ್ನಪ್ಪಿದ್ದಾನೆ. ಈ ಕುರಿತು ದೊಡ್ಡಪೇಟೆ ಪೂಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೆಂಗೇರಿಯಲ್ಲಿ ಬಾಕಿ ಹಣ ಕೇಳಿದ್ದಕ್ಕೆ ಟೀ ಅಂಗಡಿ ಮಾಲೀಕನ ಮೇಲೆ ಹಲ್ಲೆ
ಬೆಂಗಳೂರು: ಜನವರಿ 10ರಂದು ಬೆಂಗಳೂರಿನ ಕೆಂಗೇರಿಯಲ್ಲಿ ಟೀ ಅಂಗಡಿ ಮಾಲೀಕ ಶಿವಕುಮಾರ್ ಹಾಗೂ ಆತನ ಪತ್ನಿ ಮೇಲೆ ಟಿಪ್ಪು ಹಾಗೂ ಅವನ ಸ್ನೇಹಿತರು ಸೇರಿ ಹಲ್ಲೆ ಮಾಡಿದ್ದರು. ಇದೀಗ ಟಿಪ್ಪುನನ್ನ ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಪ್ರತಿದಿನ ಶಿವಕುಮಾರ್ ಅಂಗಡಿಗೆ ಬರುತ್ತಿದ್ದ ಆರೋಪಿ ಟಿಪ್ಪು ಟೀ ಹಾಗೂ ಸಿಗರೇಟ್ನ್ನ ಸಾಲ ಪಡೆದಿದ್ದಾನೆ. ಬಾಕಿ ಸಾಲವನ್ನ ವಾಪಸ್ ಕೇಳಿದ್ದಕ್ಕೆ ಶಿವಕುಮಾರ್ ದಂಪತಿ ಮೇಲೆ ತನ್ನ ಏರಿಯಾದ ಗ್ಯಾಂಗ್ ಕರೆತಂದು ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಬಂಧಿಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ