ಬೆಂಗಳೂರು: ಉಮೇಶ್ ಕತ್ತಿ(Umesh Katti) ವಿಧಿವಶ ಹಿನ್ನೆಲೆ ಸಿದ್ದರಾಮಯ್ಯನವರ(Siddaramaiah) ಇಂದಿನ ಕನ್ಯಾಕುಮಾರಿ ಪ್ರವಾಸ ರದ್ದು ಗೊಳಿಸಲಾಗಿದೆ. ಕತ್ತಿ ಅಂತ್ಯಕ್ರಿಯೆಯಲ್ಲಿ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಮಧ್ಯಾಹ್ನ ಬೆಳಗಾವಿಗೆ ಪ್ರಯಾಣ ಬೆಳೆಸಲಿದ್ದಾರೆ.
ರಾಜಕೀಯ ಗಣ್ಯರು ಹೆಚ್ಎಎಲ್ ಏರ್ಪೋರ್ಟ್ ನಲ್ಲಿ ಉಮೇಶ್ ಕತ್ತಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೃಷಿ ಸಚಿವ ಬಿಸಿ. ಪಾಟೀಲ್, ಸಚಿವ ಭೈರತಿ ಬಸವರಾಜ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಕೆಜೆ ಜಾರ್ಜ್, ಎಮ್.ಟಿ.ಬಿ. ನಾಗರಾಜ್ ಸೇರಿದಂತೆ ಅನೇಕರು ಅಂತಿಮ ದರ್ಶನ ಪಡೆದ್ರು.
ಈ ವೇಳೆ HALನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಉಮೇಶ್ ಕತ್ತಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಉಮೇಶ್ ಕತ್ತಿ ನನಗೆ ಒಳ್ಳೆಯ ಸ್ನೇಹಿತ. ನೇರ ನುಡಿಯ ವ್ಯಕ್ತಿಯಾಗಿದ್ದವ. ಕತ್ತಿ ಆರೋಗ್ಯದ ಬಗ್ಗೆ ಮೊದಲಿಂದ ನಿರ್ಲಕ್ಷ್ಯ ವಹಿಸಿದ್ರು. ಸರ್ಕಾರ ಮೂರು ದಿನ ಶೋಕಾಚರಣೆ ಮಾಡಬೇಕಾಗಿತ್ತು. ಯಾಕೆಂದರೆ ಉಮೇಶ್ ಕತ್ತಿ ಹಾಲಿ ಸಚಿವರಾಗಿದ್ದವರು. ಹಾಗಾಗಿ ಮೂರು ದಿನ ಶೋಕಾಚರಣೆ ಮಾಡಬೇಕಾಗಿತ್ತು. ಉಮೇಶ್ ಕತ್ತಿ ನನ್ನ ಜೊತೆ ಬಹಳ ಆತ್ಮೀಯವಾಗಿದ್ದರು. ನಾನು ಕೂಡ ಬೆಳಗಾವಿಗೆ ಹೋಗುತ್ತೇನೆ ಎಂದರು. ಇದನ್ನೂ ಓದಿ: Umesh Katti Obituary: 6 ಪಕ್ಷದಿಂದ 8 ಬಾರಿ ಶಾಸಕರಾಗಿದ್ದ ಉಮೇಶ್ ಕತ್ತಿ
ಆತಂಕದ ನಡುವೆಯೋ ಜನೋತ್ಸವಕ್ಕೆ ಸಿದ್ಧತೆ
ಇನ್ನು ಉಮೇಶ್ ಕತ್ತಿ ವಿಧಿವಶ ಹಿನ್ನೆಲೆ ಜನೋತ್ಸವಕ್ಕೆ ಮತ್ತೆ ಆತಂಕ ಎದುರಾಗಿದೆ. ಆದ್ರೆ ಆತಂಕದ ನಡುವೆಯೇ BJP ಜನೋತ್ಸವ ಸಮಾವೇಶಕ್ಕೆ ಸಿದ್ಧತೆ ನಡೆಸಿದೆ. ನಾಳೆ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಸಮಾವೇಶ ನಡೆಯಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರ ಸಮೀಪ ಬೃಹತ್ ವೇದಿಕೆ ಸಿದ್ಧವಾಗುತ್ತಿದೆ. ಸದ್ಯ ಜನೋತ್ಸವ ಸಮಾವೇಶ ನಡೆಯುವ ಸ್ಥಳ ಬಿಕೋ ಎನ್ನುತ್ತಿದೆ.
ಸುಮಾರು 3 ಲಕ್ಷ ಜನ ಸೇರಿಸಲು ಬಿಜೆಪಿ ಪ್ಲಾನ್ ಮಾಡಿತ್ತು. ಪ್ರವೀಣ್ ಹತ್ಯೆ ಆದ ವೇಳೆ ಮೊದಲ ಜನೋತ್ಸವ ರದ್ದು ಮಾಡಿದ್ದರು. ಆದ್ರೆ ಈಗ ಮತ್ತೆ ಅದೇ ಜಾಗದಲ್ಲಿ ಜನೋತ್ಸವಕ್ಕೆ ತಯಾರಿ ಮಾಡಿಕೊಂಡಿದ್ದಾರೆ. ಜನೋತ್ಸವ ನಡೆಯುತ್ತೋ ಇಲ್ಲವೋ ಎಂಬ ಆತಂಕದಲ್ಲಿ ಸ್ಥಳೀಯ ನಾಯಕರಿದ್ದಾರೆ. ಈಗಾಗಲೇ 20 ಎಕ್ಕರೆಗೂ ಹೆಚ್ಚಿನ ಜಾಗದಲ್ಲಿ ಜರ್ಮನ್ ಮಾದರಿಯ ಪೆಂಡಲ್ ಹಾಕಲಾಗಿದೆ. ಚೇರ್ ಗಳನ್ನೂ ಹಾಕಿ ಸಿದ್ದಪಡಿಸಲಾಗಿದೆ. ರಸ್ತೆಯುದ್ದಕ್ಕೂ ಫ್ಲೆಕ್ಸ್ಗಳನ್ನ ಹಾಕಿ ಸಿದ್ದತೆ ಮಾಡಿಕೊಳ್ಳಲಾಗಿದೆ.
Published On - 11:11 am, Wed, 7 September 22