ಬೆಂಗಳೂರು: ಚೀನಾದ ಆಂತರಿಕ ವ್ಯವಹಾರಗಳಲ್ಲಿ ಸಾಮ್ರಾಜ್ಯಶಾಹಿ ಆಮೆರಿಕಾದ ಹಸ್ತಕ್ಷೇಪ ವಿಷಯದ ಕುರಿತು ಆಯೋಜಿಸಲಾಗಿದ್ದ ಸೆಮಿನಾರ್ ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರಿನ ಚಿತ್ರಕಲಾ ಪರಿಷತ್ನಲ್ಲಿ(Chitrakala Parishath) ನಾಳೆ (ಆಗಸ್ಟ್ 28) ಇಂಡಿಯಾ ಚೀನಾ ಫ್ರೆಂಡ್ಶಿಪ್ ಅಸೋಸಿಯೇಷನ್ (ICFA) ಸೆಮಿನಾರನ್ನು ಆಯೋಚಿಸಿದೆ. ಭಾರತದ ಶತ್ರುರಾಷ್ಟ್ರ ಚೀನಾದ ಪರವಾಗಿ ಸೆಮಿನಾರ್ ಆಯೋಜನೆ ಹಿನ್ನೆಲೆ ವಿವಾದ ಹುಟ್ಟುಕೊಂಡಿದೆ.
ಇನ್ನು ಕಾರ್ಯಕ್ರಮದ ಅತಿಥಿಯಾಗಿ ಮಾಜಿ ಸಿಎಂ ಸಿದ್ದರಾಮಯ್ಯರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ಕಾರ್ಯಕ್ರಮದಲ್ಲಿ ತಾವು ಭಾಗವಹಿಸಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಅನುಮತಿ ಇಲ್ಲದೇ ನನ್ನ ಹೆಸರು ಹಾಕಿದ್ದಾರೆ ಎಂದು ಗರಂ ಆಗಿದ್ದಾರೆ. ಆದರೆ ಭಾಷಣಕಾರರಾಗಿ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಡಾಕ್ಟರ್ ಎಲ್.ಹನುಮಂತಯ್ಯ, ಪಿಜಿಆರ್ ಸಿಂಧ್ಯಾ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ.
ICFA ಅಧ್ಯಕ್ಷರೂ ಆಗಿರುವ ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮತ್ತೊಂದೆಡೆ ಚೀನಾ ಪರವಾದ ಸೆಮಿನಾರ್ ನಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಏಕೆ ಭಾಗವಹಿಸಬೇಕು ಎಂದು ಬಿಜೆಪಿ ಪ್ರಶ್ನಿಸಿದೆ. ಕಾಂಗ್ರೆಸ್ ಪಕ್ಷಕ್ಕೂ ಚೀನಾಕ್ಕೂ ಇರುವ ಸಂಬಂಧವೇನು? ಈ ಕಾರ್ಯಕ್ರಮ ಕೆಪಿಸಿಸಿಯಿಂದಲೇ ಆಯೋಜನೆಗೊಂಡಿದೆಯೇ? ಎಂದು ಬಿಜೆಪಿ ನಾಯಕರು ಪ್ರಶ್ನೆ ಮಾಡಿದ್ದಾರೆ.
ಭಾರತದ ಚೀನಾ ರಾಯಭಾರಿ ವೆಹಿಡೋಂಗ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮುಂಬೈನಲ್ಲಿರುವ ಚೀನಾ ಕೌನ್ಸಲ್ ಜನರಲ್ ಕೊಂಗ್ ಕ್ಸಿಯನೂಹಾ ಕೂಡ ಭಾಗಿಯಾಗಲಿದ್ದು ಚೀನಾದ ರಾಯಭಾರಿ ಜೊತೆಗೆ ನಾಳೆ ಕಾಂಗ್ರೆಸ್ ನಾಯಕರು ವೇದಿಕೆ ಹಂಚಿಕೊಳ್ಳುವ ಬಗ್ಗೆ ಕುತೂಹಲ ಹೆಚ್ಚಾಗಿದೆ.
I had declined the invitation of India-China Friendship Association to participate in their event which will be held tomorrow. It is surprising to see my name despite declining it.
I declined to participate as my party's & my position are against the agenda of the program. pic.twitter.com/TmsrazwBTD
— Siddaramaiah (@siddaramaiah) August 27, 2022
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:32 pm, Sat, 27 August 22