Bengaluru: ಹತ್ಯೆಯಾದವನ ಬರ್ತ್​ಡೇ ದಿನವೇ ಹಂತಕರಿಗೆ ಜೀವಾವಧಿ ಶಿಕ್ಷೆ

2018ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಸಿದ್ಧಾರ್ಥ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಹೆಚ್​ 59ನೇ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಕೊಲೆಯಾದ ಸಿದ್ಧಾರ್ಥ್ ಹುಟ್ಟುಹಬ್ಬದ ದಿನವೇ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯದ ಈ ಆದೇಶದಿಂದ ಮಗನ ಸಾವಿಗೆ ನ್ಯಾಯ ಸಿಕ್ಕಿದೆ ಎಂದು ಸಿದ್ದಾರ್ಥ್​ ತಂದೆ ಕೌಶಲೇಂದ್ರ ತಿಳಿಸಿದ್ದಾರೆ.

Bengaluru: ಹತ್ಯೆಯಾದವನ ಬರ್ತ್​ಡೇ ದಿನವೇ ಹಂತಕರಿಗೆ ಜೀವಾವಧಿ ಶಿಕ್ಷೆ
ಆರೋಪಿಗಳಿಗೆ ಶಿಕ್ಷೆ ಪ್ರಕಟ
Updated By: ಪ್ರಸನ್ನ ಹೆಗಡೆ

Updated on: Nov 04, 2025 | 3:35 PM

ಬೆಂಗಳೂರು, ನವೆಂಬರ್​ 04: ಹತ್ಯೆಯಾದವನ ಬರ್ತ್​ಡೇ ದಿನವೇ ಹಂತಕರಿಗೆ ಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಿರುವ ಅಪರೂಪದ ಪ್ರಸಂಗ ಬೆಂಗಳೂರಲ್ಲಿ ನಡೆದಿದೆ. 2018 ಜೂನ್​ನಲ್ಲಿ ನಡೆದಿದ್ದ ಪಾಟ್ನಾ ಮೂಲದ ಸಿದ್ಧಾರ್ಥ ಕೊಲೆ ಪ್ರಕರಣ ಸಂಬಂಧ ಮಹತ್ವದ ತೀರ್ಪು ನೀಡಿರುವ ಬೆಂಗಳೂರಿನ ಸಿಸಿಹೆಚ್​ 59ನೇ ನ್ಯಾಯಾಲಯ ಪ್ರಕರಣದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ 10 ಸಾವಿರ ರೂ.ಗಳನ್ನ ಮೃತನ ತಂದೆಗೆ ಪಾವತಿಸಲು ನ್ಯಾಯಾಲಯ ಸೂಚಿಸಿದೆ.

2018ರ ಜೂನ್ 26ರಂದು, ಸಿದ್ಧಾರ್ಥ್ ತಮ್ಮ ಸ್ನೇಹಿತರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ರಾತ್ರಿ 2.45ರ ಸುಮಾರಿಗೆ, ಮೂತ್ರ ವಿಸರ್ಜನೆ ಮಾಡಲು ಕಾರು ನಿಲ್ಲಿಸಿದಾಗ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರನ್ನು ಉದ್ದೇಶಪೂರ್ವಕವಾಗಿ ಬೈಕ್‌ನಿಂದ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿದ್ದು, ಆರೋಪಿಗಳು ಸಿದ್ದಾರ್ಥ್​ಗೆ ದೊಣ್ಣೆಯಿಂದ ಹೊಡೆದು ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಿಸದೆ ಸಿದ್ದಾರ್ಥ್​ ಜೂನ್ 28, 2018 ರಂದು ಮೃತಪಟ್ಟಿದ್ದರು. ಘಟನೆ ಬಳಿಕ ಆರೋಪಿಗಳಾದ ಗಿರೀಶ್ ಮತ್ತು ಮಹೇಶ್ ಎಂಬವರನ್ನ ಮೈಕೋಲೇಔಟ್​​ ಠಾಣೆ ಪೊಲೀಸರು​ ಬಂಧಿಸಿದ್ದು, ತನಿಖೆ ನಡೆಸಿ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ ಕೊಲೆಯಾಗಿರುವ ಸಿದ್ಧಾರ್ಥ್​ ಜನ್ಮದಿನವಾದ ಅಕ್ಟೋಬರ್​ 24ರಂದೇ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.

ಇದನ್ನೂ ಓದಿ: ಅಣ್ಣನನ್ನು ಕೊಂದು ಗರ್ಭಿಣಿ ಅತ್ತಿಗೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ 15 ವರ್ಷದ ಬಾಲಕ

‘ಮಗನ ಸಾವಿಗೆ ನ್ಯಾಯ ಸಿಕ್ಕಿದೆ’

ಕೊಲೆ ಪ್ರಕರಣ ವಿಚಾರವಾಗಿ ಬೆಂಗಳೂರಿನ ಸಿಸಿಹೆಚ್​ 59ನೇ ನ್ಯಾಯಾಲಯ ನೀಡಿರುವ ಆದೇಶ ಮಗನ ಸಾವಿಗೆ ಸಿಕ್ಕ ನ್ಯಾಯ ಎಂದು ಸಿದ್ದಾರ್ಥ್​ ಪೋಷಕರು ಹೇಳಿದ್ದಾರೆ. ನಮ್ಮ ನೋವಿಗೆ ಉತ್ತರ ಸಿಕ್ಕಿದೆ ಎಂದು ಮೃತ ಸಿದ್ಧಾರ್ಥ್​ ತಂದೆ ಕೌಶಲೇಂದ್ರ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:33 pm, Tue, 4 November 25