AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಣ್ಣನನ್ನು ಕೊಂದು ಗರ್ಭಿಣಿ ಅತ್ತಿಗೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ 15 ವರ್ಷದ ಬಾಲಕ

ಗುಜರಾತ್​ನ ಜುನಾಗಢದಲ್ಲಿ ಭಯಾನಕ ಘಟನೆ ವರದಿಯಾಗಿದೆ. 15 ವರ್ಷದ ಬಾಲಕನೊಬ್ಬ ಅಣ್ಣನನ್ನು ಕೊಂದು, ಗರ್ಭಿಣಿ ಅತ್ತಿಗೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ನಗರದ ಜನತೆಯನ್ನೇ ಬೆಚ್ಚಿಬೀಳಿಸಿದೆ. ಅಕ್ಟೋಬರ್ 16ರಂದು ಈ ಜೋಡಿ ಕೊಲೆ ನಡೆದಿದೆ. ಸುಮಾರು ಎರಡು ವಾರಗಳ ನಂತರ ಬಿಹಾರದಲ್ಲಿರುವ ಮಹಿಳೆಯ ಕುಟುಂಬವು ಅನುಮಾನ ವ್ಯಕ್ತಪಡಿಸಿದ ನಂತರ ಬೆಳಕಿಗೆ ಬಂದಿತು.

ಅಣ್ಣನನ್ನು ಕೊಂದು ಗರ್ಭಿಣಿ ಅತ್ತಿಗೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ 15 ವರ್ಷದ ಬಾಲಕ
ಕ್ರೈಂ
ನಯನಾ ರಾಜೀವ್
|

Updated on: Nov 04, 2025 | 12:21 PM

Share

ಜುನಾಗಢ, ನವೆಂಬರ್ 04: ಗುಜರಾತ್ ಜುನಾಗಢದಲ್ಲಿ ಭಯಾನಕ ಘಟನೆ ವರದಿಯಾಗಿದೆ. 15 ವರ್ಷದ ಬಾಲಕನೊಬ್ಬ ಅಣ್ಣನನ್ನು ಕೊಂದು, ಗರ್ಭಿಣಿ ಅತ್ತಿಗೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದೆ. ಅಕ್ಟೋಬರ್ 16ರಂದು ಜೋಡಿ ಕೊಲೆ(Murder) ನಡೆದಿದೆ. ಸುಮಾರು ಎರಡು ವಾರಗಳ ನಂತರ ಬಿಹಾರದಲ್ಲಿರುವ ಮಹಿಳೆಯ ಕುಟುಂಬವು ಅನುಮಾನ ವ್ಯಕ್ತಪಡಿಸಿದ ನಂತರ ಬೆಳಕಿಗೆ ಬಂದಿದೆ.

ಆರೋಪಿ ತನ್ನ ಅಣ್ಣನ ನಡುವೆ ಜಗಳ ಮಾಡಿದ್ದ, ಕೋಪದಲ್ಲಿ ಅಣ್ಣನ ತಲೆಗೆ ಕಬ್ಬಿಣದ ರಾಡ್​​ನಿಂದ ಹೊಡೆದು ಹಲ್ಲೆ ನಡೆಸಿದ್ದಾನೆ. ಆತ ಕುಸಿದುಬಿದ್ದ ಬಳಿಕ, ಅತ್ತಿಗೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಾಲಕ ಅಣ್ಣನಿಗೆ ಪದೇ ಪದೇ ಹೊಡೆದಿದ್ದಾಗಿ ಒಪ್ಪಿಕೊಂಡಿದ್ದಾನೆ. ತಾನು ಗರ್ಭಿಣಿ ದಯವಿಟ್ಟು ಮಗುವಿಗಾಗಿಯಾದರೂ ತನ್ನನ್ನು ಬಿಟ್ಟುಬಿಡು ಎಂದು ಆಕೆ ಹೇಳಿದ್ದಕ್ಕೆ, ತನ್ನ ಜತೆ ಲೈಂಗಿಕ ಸಂಪರ್ಕ ಹೊಂದಿದರೆ ಬಿಡುತ್ತೇನೆ ಎಂದು ಒತ್ತಾಯಿಸಿದ್ದಾನೆ. ಆಕೆಯ ಮೇಲೆ ಅತ್ಯಾಚಾರ ನಡೆದ ಬಳಿಕ ಆಕೆ ಕಿರುಚುತ್ತಾ ಓಡಿ ಹೋಗಿದ್ದಾಳೆ.

ಮತ್ತಷ್ಟು ಓದಿ:  ಕುಡಿತದ ವಿಚಾರದಲ್ಲಿ ಗಲಾಟೆ: ಮಗನಿಂದಲೇ ದಿನೇಶ್ ಬೀಡಿ ಬ್ರ್ಯಾಂಡ್ ಮಾಲೀಕನ ಹತ್ಯೆ

ಆಕೆಯ ಹೊಟ್ಟೆಯ ಭಾಗಕ್ಕೆ ಮೊಣಕಾಲನ್ನು ಊರಿ, ನಂತರ ಕತ್ತು ಹಿಸುಕಿ ಆಕೆಯನ್ನು ಹತ್ಯೆ ಮಾಡಿದ್ದಾನೆ. ನಂತರ ಬಾಲಕ ಎರಡೂ ಶವಗಳನ್ನು ಮನೆಯ ಹಿಂಭಾಗದ ಐದು ಅಡಿ ಆಳದ ಗುಂಡಿಯಲ್ಲಿ ಹೂತು, ಬಟ್ಟೆಗಳನ್ನು ಸುಟ್ಟು, ರಕ್ತದ ಕಲೆಗಳನ್ನು ಒರೆಸಿದ್ದಾನೆ ಎಂದು ಅಧಿಕಾರಿ ಹೇಳಿದ್ದಾರೆ.

ಘಟನೆಯ ಸಮಯದಲ್ಲಿ ಮನೆಯಲ್ಲಿದ್ದ ತಾಯಿ ಸಾಕ್ಷ್ಯಗಳನ್ನು ನಾಶಮಾಡಲು ಸಹಾಯ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದಾಘಿ ಆರೋಪಿಯ ಅಣ್ಣನ ಕುತ್ತಿಗೆಯೇ ಮುರಿದುಹೋಗಿತ್ತು. ಮಹಿಳೆಯ ಅರ್ಧ ಬೆಳೆದ ಭ್ರೂಣವನ್ನು ಹೊರಹಾಕಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೀಪಾವಳಿಯ ಸಮಯದಲ್ಲಿ ಮಹಿಳೆಯನ್ನು ಸಂಪರ್ಕಿಸಲು ಪದೇ ಪದೇ ಪ್ರಯತ್ನಿಸಿದರೂ ಉತ್ತರಿಸಲಿಲ್ಲ, ನಂತರ ಆಕೆಯ ಕುಟುಂಬದವರಿಗೆ ಅನುಮಾನ ಬಂದಿತ್ತು. ಹಿಮತ್‌ನಗರ ಬಳಿ ರಸ್ತೆ ಅಪಘಾತದಲ್ಲಿ ದಂಪತಿಗಳು ಸಾವನ್ನಪ್ಪಿದ್ದಾರೆ ಎಂದು ತಾಯಿ ಅವರಿಗೆ ತಿಳಿಸಿದರೂ, ಯಾವುದೇ ಸಾಕ್ಷಿ ಸಿಗಲಿಲ್ಲ.ಬಳಿಕ ಆಕೆಯ ಕುಟುಂಬದವರು ಪೊಲೀಸರನ್ನು ಭೇಟಿಯಾದರು.ಬಾಲಕ ಕೊಲೆಯನ್ನು ಒಪ್ಪಿಕೊಂಡಿದ್ದಾನೆ ಹಾಗೂ ಸಮಾಧಿ ಸ್ಥಳಕ್ಕೆ ಕರೆದೊಯ್ದಿದ್ದಾನೆ.

ನಂತರ ಅವಶೇಷಗಳನ್ನು ಹೊರತೆಗೆಯಲಾಯಿತು.ಈ ಕುಟುಂಬವು ಸುಮಾರು 40 ವರ್ಷಗಳ ಹಿಂದೆ ಬಿಹಾರದಿಂದ ವಲಸೆ ಬಂದಿತ್ತು. ಕೋವಿಡ್ -19 ಸಾಂಕ್ರಾಮಿಕ ರೋಗದ ಸಮಯದಲ್ಲಿ ನಿಧನರಾದ ತಂದೆ ದೇವಸ್ಥಾನದ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. ಅಣ್ಣ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು, ಆದರೆ ಆರೋಪಿ ದನಗಳನ್ನು ನಿರ್ವಹಿಸಲು ಸಹಾಯ ಮಾಡುತ್ತಿದ್ದ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ