AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: 20 ಸಾವಿರ ರೂ ಮನೆ ಬಾಡಿಗೆ, 30 ಲಕ್ಷ ರೂ ಭದ್ರತಾ ಠೇವಣಿ; ಬೆಂಗಳೂರಿನ ಮನೆಮಾಲೀಕರ ಸುಲಿಗೆ ಇದು ಎಂದ ವ್ಯಕ್ತಿ

ಬೆಂಗಳೂರಿನಲ್ಲಿ ಬದುಕೋದು ಕಷ್ಟ, ಬಾಡಿಗೆ ಮನೆ ಮಾಡಿ ನೆಮ್ಮದಿಯಿಂದ ಇರೋಣ ಅಂದ್ರೆ ಮನೆ ಮಾಲೀಕರ ಡಿಮ್ಯಾಂಡ್ ಹೆಚ್ಚಾಗಿದೆ. ಇದೀಗ ಇದಕ್ಕೆ ಸಾಕ್ಷಿಯಂತಿದೆ ಈ ಪೋಸ್ಟ್. ಬೆಂಗಳೂರಿನಲ್ಲಿ 2ಬಿಹೆಚ್‌ಕೆ ಮನೆ ಖಾಲಿಯಿದ್ದು, ತಿಂಗಳ ಬಾಡಿಗೆ 20,000 ರೂ ಹಾಗೂ 30 ಲಕ್ಷ ರೂ. ಠೇವಣಿಯಾಗಿದೆ. ಈ ಜಾಹೀರಾತಿನ ಪೋಸ್ಟ್ ವೈರಲ್ ಆಗಿದ್ದು ನೆಟ್ಟಿಗರು ದುರಾಸೆಯುಳ್ಳ ಮನೆ ಮಾಲೀಕರ ವಿರುದ್ಧ ಗರಂ ಆಗಿದ್ದಾರೆ.

Viral: 20 ಸಾವಿರ ರೂ ಮನೆ ಬಾಡಿಗೆ, 30 ಲಕ್ಷ ರೂ ಭದ್ರತಾ ಠೇವಣಿ; ಬೆಂಗಳೂರಿನ ಮನೆಮಾಲೀಕರ ಸುಲಿಗೆ ಇದು ಎಂದ ವ್ಯಕ್ತಿ
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on: Nov 04, 2025 | 4:10 PM

Share

ಬೆಂಗಳೂರು, ನವೆಂಬರ್ 04: ಬೆಂಗಳೂರಿನಲ್ಲಿ (Bengaluru) ಕಡಿಮೆ ಬಾಡಿಗೆಯುಳ್ಳ ಮನೆ ಸಿಗುವುದೇ ಕಷ್ಟ. ಸಿಕ್ಕರೆ ಅದೇ ಅದೃಷ್ಟ ಎಂದು ಅಂದುಕೊಳ್ಬೇಕು. ನೀವೇನಾದ್ರೂ ಬೆಂಗಳೂರಿನಲ್ಲಿ ಮನೆ ಹುಡುಕುತ್ತಿದ್ರೆ ಎರಡು ಬೆಡ್ ರೂಮ್‌ವುಳ್ಳ ಈ ಮನೆಯ ಡೆಪಾಸಿಟ್ (Deposit) ನೋಡಿಯೇ ತಲೆ ಗ್ರಿರ್ ಎನ್ನುತ್ತೆ. ಇದೀಗ ಬೆಂಗಳೂರಿನ ಮನೆ ಮಾಲೀಕರು ಆಸೆ ಬುರುಕರು ಎನ್ನುವುದನ್ನು ಸಾರಿ ಹೇಳುವಂತಿದೆ ಈ ಪೋಸ್ಟ್. ಹೌದು ಬೆಂಗಳೂರಿನ ಫ್ರೇಜರ್ ಟೌನ್ ಪ್ರದೇಶದಲ್ಲಿ 2ಬಿಹೆಚ್‌ಕೆ ಬಾಡಿಗೆ ಮನೆ ಲಭ್ಯವಿದೆ. ಆದರೆ ತಿಂಗಳ ಬಾಡಿಗೆ 20 ಸಾವಿರ ರೂ ಆಗಿದ್ದು, 30 ಲಕ್ಷ ರೂ ಭದ್ರತಾ ಠೇವಣಿ. ಈ ಜಾಹೀರಾತಿನಲ್ಲಿ ಉಲ್ಲೇಖಿಸಲಾದ ಡೆಪಾಸಿಟ್ ಮೊತ್ತವನ್ನು ನೋಡಿಯೇ ಬಳಕೆದಾರರು ಶಾಕ್ ಆಗಿದ್ದಾರೆ.

ಬೆಂಗಳೂರಿನ ಮನೆ ಬಾಡಿಗೆ ಕೇಳೀದ್ರೆ ನೀವು ಶಾಕ್‌ ಆಗ್ತೀರಾ

ರೆಡ್ಡಿಟ್ ಖಾತೆಯಲ್ಲಿ 2 ಬಿಹೆಚ್ ಕೆ ಬಾಡಿಗೆ ಮನೆ ಖಾಲಿಯಿದ್ದು, ತಿಂಗಳ ಬಾಡಿಗೆ 20,000 ರೂ ಹಾಗೂ ಭದ್ರತಾ ಠೇವಣಿ 30 ಲಕ್ಷ ರೂ ಜಾಹೀರಾತು ಹೊಂದಿರುವ ಸ್ಕ್ರೀನ್ ಶಾಟ್ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ಗೆ ಬೆಂಗಳೂರಿನ ಮನೆ ಮಾಲೀಕರು ಹಾದಿ ತಪ್ಪುತ್ತಿದ್ದಾರೆ ಎಂದು ಶೀರ್ಷಿಕೆ ನೀಡಲಾಗಿದೆ. ಈ ಜಾಹೀರಾತಿನಲ್ಲಿ ಈ ಸುಸಜ್ಜಿತ ಬಾಡಿಗೆ ಮನೆಯಲ್ಲಿ ಏನೆಲ್ಲಾ ಸೌಲಭ್ಯಗಳಿವೆ ಎಂದು ಇಲ್ಲಿ ಬರೆಯಲಾಗಿದೆ. ಈ ಸುಸಜ್ಜಿತ 2 ಬಿಹೆಚ್ ಕೆ ಮನೆಯಲ್ಲಿ ಇಂಟೀರಿಯರ್ ಡಿಸೈನ್, ಪ್ರೀಮಿಯಂ ಹಾಸಿಗೆಗಳು, ಮಾಡ್ಯುಲರ್ ಕಿಚನ್ ಉಪಕರಣಗಳು, ಪೂರ್ಣ ಪವರ್ ಬ್ಯಾಕಪ್, ಇನ್-ಹೌಸ್ ಸೆಕ್ಯುರಿಟಿ ಹಾಗೂ ಕಾರ್ ಪಾರ್ಕ್ ಹೊಂದಿರುವ ಸ್ಟೈಲಿಶ್ ಮನೆ ಎಂದು ಉಲ್ಲೇ ಖಿಸಿರುವುದನ್ನು ನೋಡಬಹುದು.

ವೈರಲ್‌ ಪೋಸ್ಟ್‌ ಇಲ್ಲಿದೆ ನೋಡಿ

Reddit Post

ಇದನ್ನೂ ಓದಿ:ಬೆಂಗಳೂರಿನ ಜೀವಂತ ಸ್ವರ್ಗ ಈ ಭಾರತೀಯ ಸಿಟಿ: ಸ್ವಚ್ಛ ಸುಂದರ ನಗರ ಕಂಡು ಬೆರಗಾದ ವ್ಯಕ್ತಿ

ಈ ಪೋಸ್ಟ್ ವೈರಲ್ ಆಗಿದ್ದು, ಬಳಕೆದಾರರು ಖಾರವಾಗಿಯೇ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರ 30 ಲಕ್ಷ ರೂ. ಠೇವಣಿ? ನೀವು ಬಿಲ್ಡರ್‌ನ ಫ್ಲಾಟ್ ಖರೀದಿಸಿ ಬಾಡಿಗೆಗೆ ಬದಲಾಗಿ ಇಎಂಐ ಪಾವತಿಸಬಹುದು. 30 ಲಕ್ಷ ರೂ ಠೇವಣಿ ನೀಡಿ ಈ ಬಾಡಿಗೆ ಮನೆಗೆ ಯಾರು ಹೋಗುತ್ತಾರೆ ನನಗೆ ತಿಳಿದಿಲ್ಲ ಎಂದಿದ್ದಾರೆ. ಮತ್ತೊಬ್ಬರು ಇಷ್ಟು ದುಡ್ಡು ಇದ್ದರೆ ಬೆಂಗಳೂರಿನಲ್ಲಿ ಮನೆ ಖರೀದಿಸಬಹುದಲ್ಲದೇ, ಬಾಡಿಗೆ ಮನೆಯಲ್ಲಿ ಇರುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ನೀವು ಒಂಟಿಯಾಗಿದ್ದು ಕೆಲಸ ಮಾಡುತ್ತಿದ್ದರೆ, ಪಿಜಿಗೆ ಹೋಗಿ. ಈ ರೀತಿಯ ಠೇವಣಿ ಕೊಟ್ಟು ಬಾಡಿಗೆ ಮನೆಯಲ್ಲಿ ಇರಬೇಡಿ. ಇದು ಸಂಪೂರ್ಣ ಅಸಂಬದ್ಧ ಎಂದು ಸಲಹೆ ನೀಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?