Video: ಬೆಂಗಳೂರಿನ ಜೀವಂತ ಸ್ವರ್ಗ ಈ ಭಾರತೀಯ ಸಿಟಿ: ಸ್ವಚ್ಛ ಸುಂದರ ನಗರ ಕಂಡು ಬೆರಗಾದ ವ್ಯಕ್ತಿ
ಬೆಂಗಳೂರಿನಲ್ಲಿ ರಸ್ತೆಗುಂಡಿಗಳು ಹಾಗೂ ಕಸರಹಿತವಾದ ಸ್ವಚ್ಛ ಪ್ರದೇಶವನ್ನು ಕಾಣಸಿಗುವುದೇ ಕಡಿಮೆ. ಆದರೆ ಇದೀಗ ಇಲ್ಲೊಬ್ಬ ವ್ಯಕ್ತಿ ಬೆಂಗಳೂರಿನ ಉತ್ತರ ಹೊರವಲಯದಲ್ಲಿರುವ ಭಾರತೀಯ ಸಿಟಿಯೂ ರಸ್ತೆಗುಂಡಿಗಳಿಲ್ಲದೇ, ಸ್ವಚ್ಛವಾಗಿದ್ದು ಎಲ್ಲ ರೀತಿಯಲ್ಲೂ ಪರಿಪೂರ್ಣವಾಗಿರುವ ಈ ಸ್ವಚ್ಛ ಸುಂದರ ಪರಿಸರವನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಬೆಂಗಳೂರು, ನವೆಂಬರ್ 04: ಬೆಂಗಳೂರು (Bengaluru) ಅಂದ್ರೆ ಟ್ರಾಫಿಕ್ ಸಮಸ್ಯೆಗಳು, ರಸ್ತೆಗುಂಡಿಗಳು, ಸ್ವಚ್ಛವಾಗಿರದ ಪಾದಚಾರಿ ಮಾರ್ಗಗಳೇ ಕಣ್ಣೇದುರಿಗೆ ಬರುತ್ತದೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ವಿದೇಶಿಗರು ಸೇರಿದಂತೆ ಉದ್ಯಮಿಗಳು ಧ್ವನಿ ಎತ್ತುತ್ತಿದ್ದಾರೆ. ಇದೆಲ್ಲದರ ನಡುವೆ ಬೆಂಗಳೂರಿನಲ್ಲೂ ರಸ್ತೆಗುಂಡಿಗಳಲ್ಲದ ಸ್ವಚ್ಛ ಹಾಗೂ ಪರಿಸರ ಸ್ನೇಹಿ ಪಾದಚಾರಿ ಮಾರ್ಗ ಹಾಗೂ ಸ್ವಲ್ಪ ಸುಂದರ ನಗರವಿದೆ ಎಂದರೆ ನೀವು ನಂಬುತ್ತೀರಾ. ಇಲ್ಲೊಬ್ಬ ವ್ಯಕ್ತಿಗೆ ಇಂತಹ ಪ್ರದೇಶವೊಂದು ಕಣ್ಣಿಗೆ ಬಿದ್ದಿದೆ. ಇದುವೇ ಬೆಂಗಳೂರಿನ ಭಾರತೀಯ ಸಿಟಿ (Bharatiya City) ಹೌದು, ಬೆಂಗಳೂರಿನ ಉತ್ತರ ಹೊರವಲಯದಲ್ಲಿರುವ ಖಾಸಗಿಯಾಗಿ ಅಭಿವೃದ್ಧಿಪಡಿಸಲಾದ ಏರಿಯಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ನಗರದ ಮೂಲಸೌಕರ್ಯದ ಕುರಿತು ಚರ್ಚೆಯನ್ನು ಹುಟ್ಟು ಹಾಕಿದೆ.
@indianGems (ಇಂಡಿಯನ್ ಜೆಮ್ಸ್) ಹೆಸರಿನ ಖಾತೆಯಲ್ಲಿ ಬೆಂಗಳೂರಿನ ಉತ್ತರ ಹೊರವಲಯದಲ್ಲಿರುವ ಭಾರತೀಯ ಸಿಟಿಯನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ “ನಾನು ಬೆಂಗಳೂರಿನಲ್ಲಿದ್ದೆ. ಈ 200 ಎಕರೆ ಪ್ರದೇಶವನ್ನು ಖಾಸಗಿ ಸಂಸ್ಥೆಗಳು ಹೇಗೆ ನಿರ್ವಹಿಸುತ್ತವೆ ಎಂಬುದನ್ನು ನೋಡಿ ಬೆರಗಾದೆ. ರಸ್ತೆಗಳು ಗುಂಡಿಗಳು/ಧೂಳು ಮುಕ್ತವಾಗಿದ್ದವು, ಅಗಲವಾದ ಪಾದಚಾರಿ ಮಾರ್ಗಗಳೊಂದಿಗೆ ಸರಿಯಾದ ತೋಟ. ನಮ್ಮ ಸರ್ಕಾರವು ಈ ರೀತಿಯ ರಸ್ತೆಗಳನ್ನು ನಿರ್ವಹಿಸುವುದನ್ನು ತಡೆಯುತ್ತಿರುವುದು ಏನು?” ಎಂದು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
I was in Bengaluru and was blown away by how this 200 acre area is maintained by private firms 😭
Roads were pothole/dust free, with proper markings. Proper plantation with wide footpaths.
What is stopping our Government from maintaining roads like this? pic.twitter.com/TN1S7C8MUz
— 🚨Indian Gems (@IndianGems_) November 2, 2025
ಈ ವಿಡಿಯೋದಲ್ಲಿ ಭಾರತೀಯ ಸಿಟಿಯೂ ಸ್ವಚ್ಛ ಬೀದಿಗಳು, ವಿಸ್ತಾರವಾದ ಉದ್ಯಾನವನಗಳು ಮತ್ತು ಸೈಕ್ಲಿಂಗ್ ಸ್ನೇಹಿ ಮಾರ್ಗಗಳನ್ನು ನೋಡಬಹುದು. ಎತ್ತರದ ಗಗನಚುಂಬಿ ಕಟ್ಟಡಗಳು, ಕೆಲವು 50 ಮಹಡಿಗಳಿಗಿಂತ ಹೆಚ್ಚು ಎತ್ತರದಂತೆ ಕಾಣುತ್ತಿದ್ದವು. ಹಚ್ಚ ಹಸಿರಿನ ಪರಿಸರವು ಇಲ್ಲಿನ ನಿವಾಸಿಗಳಿಗೆ ನಗರ ಸೌಕರ್ಯಗಳು ಲಭ್ಯವಿರುವುದನ್ನು ನೋಡಬಹುದು.
ಇದು ಬೆಂಗಳೂರಿನಲ್ಲಿ ಅತ್ಯಂತ ಉತ್ತಮವಾಗಿ ವಿನ್ಯಾಸಗೊಳಿಸಲಾದ ಪ್ರದೇಶಗಳಲ್ಲಿ ಒಂದಾಗಿದೆ. ಸೈಕಲ್ ಸವಾರಿ ಮಾಡಲು ರಸ್ತೆಗೆ ಇಳಿಯಬೇಕಿಲ್ಲ. ಉತ್ತಮವಾದ ಅಗಲವಾದ ಪಾದಚಾರಿ ಮಾರ್ಗವಿದೆ. ಉದ್ಯಾನವನದಲ್ಲೂ ಸೈಕಲ್ ತುಳಿಯಬಹುದು. ಇಲ್ಲಿನ ವಾತಾವರಣವು ತುಂಬಾ ಪ್ರಶಾಂತವಾಗಿದೆ ಎಂದು ಹೇಳಿರುವುದನ್ನು ನೋಡಬಹುದು.
ಇದನ್ನೂ ಓದಿ:ಟ್ರಾಫಿಕ್ ಪೊಲೀಸರಿಂದ ದಂಡ ತಪ್ಪಿಸಲು ಬಾಣಲೆಯನ್ನೇ ಹೆಲ್ಮೆಟ್ ಆಗಿ ಬಳಸಿದ ಸವಾರ
ನವೆಂಬರ್ 2 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಭಾರತ ಬೆಳೆಯಲು ಖಾಸಗೀಕರಣವೊಂದೇ ದಾರಿ ಎಂದಿದ್ದಾರೆ. ಇನ್ನೊಬ್ಬರು, ಭಾರತೀಯ ನಗರ — ಬೆಂಗಳೂರಿನ ಜೀವಂತ ಸ್ವರ್ಗ! ಥಣಿಸಂದ್ರದಲ್ಲಿ 125 ಎಕರೆಗಳಷ್ಟು ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ವಿಶ್ವ ದರ್ಜೆಯ ಪಟ್ಟಣವು, ಭಾರತೀಯ ಅರ್ಬನ್‌ನ ಕಳೆದ ದಶಕದಲ್ಲಿ ನಗರ ಜೀವನವನ್ನು ಪರಿವರ್ತಿಸಿದೆ. ಒಂದು ಭೇಟಿಯು ರಸ್ತೆಯ ಖಾಸಗಿ ಹೈ ಎಂಡ್ ಅಪಾರ್ಟ್‌ಮೆಂಟ್‌ಗಳ ಅನುಭವವನ್ನು ನೀಡಿತು ಎಂದು ಹೇಳಿದ್ದಾರೆ. ಇಂತಹ ಖಾಸಗೀಕರಣದಿಂದ ಮಾತ್ರ ಈ ರೀತಿ ಸ್ವಚ್ಛ ಸುಂದರ ರಸ್ತೆಗುಂಡಿಗಳಿಲ್ಲದ ನಗರ ನಿರ್ಮಾಣವಾಗಲು ಸಾಧ್ಯ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




