ಬೆಂಗಳೂರು: ಬಿಜೆಪಿ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು ಅವರ ಕೆಲಸವನ್ನು ಮಾಡುತ್ತಿದ್ದಾರೆ. ಯಾರೂ ಕೂಡ ಎಸ್‌ಐಟಿ ಮೇಲೆ ಒತ್ತಡವನ್ನು ಹಾಕುತ್ತಿಲ್ಲ ಎಂದು ಬೆಂಗಳೂರಿನಲ್ಲಿ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ. ವಿಪಕ್ಷಗಳು ಶಾಸಕ ರಮೇಶ್ ಜಾರಕಿಹೊಳಿ ಬಂಧನಕ್ಕೆ ಆಗ್ರಹಿಸುತ್ತಿರುವ ಬೆನ್ನಲ್ಲೇ ಎಸ್‌ಐಟಿ ತನಿಖೆ ಆರಂಭದಲ್ಲಿಯೇ ಬಂಧನ ಮಾಡಬೇಕು ಎಂಬುದು ತಪ್ಪು. ಪ್ರಕರಣದ ತನಿಖೆ ಅಂತ್ಯವಾಗಿದ್ದರೂ ಬಂಧಿಸದಿದ್ದರೆ ಪ್ರಶ್ನಿಸಬಹುದು. ಎಸ್‌ಐಟಿ ಹಂತ ಹಂತವಾಗಿ ತನಿಖೆ ಮಾಡುತ್ತಿದೆ. ಎಸ್‌ಐಟಿಯಲ್ಲಿ ಇರುವವರೆಲ್ಲಾ ಹಿರಿಯ ಅಧಿಕಾರಿಗಳೇ. ಎಸ್‌ಐಟಿ ತನಿಖೆ ಮೇಲೆ ಭರವಸೆ ಇದೆ ಎಂದು ಪ್ರವೀಣ್ ಸೂದ್ ತಿಳಿಸಿದ್ದಾರೆ.
ಪ್ರತಿದಿನ ಎಸ್‌ಐಟಿ ತನಿಖೆಯ ಬಗ್ಗೆ ಕೇಳುವುದು ತಪ್ಪಾಗುತ್ತದೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತೆಂಬ ಭರವಸೆ ಇದೆ. ಹಂತ ಹಂತವಾಗಿ ತನಿಖೆ ನಡೆಯುತ್ತಿದೆ. ಪ್ರತಿದಿನ ಕರೆ ಮಾಡಿ ತನಿಖೆ ಯಾವ ಹಂತದಲ್ಲಿ ಇದೆ ಎಂದು ಕೇಳುವುದು ಸರಿಯಲ್ಲ.ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತದೆ ಎಂಬ ಭರವಸೆ ಇದೆ ಎಂದು ಅವರು ತಿಳಿಸಿದ್ದಾರೆ.
ಮಾರ್ಚ್ 29ರಿಂದ ಅಜ್ಞಾತ ಸ್ಥಳದಲ್ಲಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು. ಆದರೆ ಮೂಲಗಳ ಪ್ರಕಾರ ಅವರು ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಕಡಿಮೆ ಇದೆ ಎಂದು ತಿಳಿದುಬಂದಿದೆ. ರಮೇಶ್ ಜಾರಕಿಹೊಳಿ ವಿಚಾರಣೆಗೆ ಮತ್ತೊಂದು ದಿನ ಬರುವುದಾಗಿ ಮನವಿ ನೀಡುವ ಸಾಧ್ಯತೆ ಹೆಚ್ಚಾಗಿದೆ.
ಇದನ್ನೂ ಓದಿ: ಕೊಲ್ಹಾಪುರ ದೇವಿ ದರ್ಶನ ಪಡೆದು ವಾಪಸಾದ ರಮೇಶ್ ಜಾರಕಿಹೊಳಿ, ನಾಳೆ ಬೆಳಗ್ಗೆ ಬೆಂಗಳೂರಿಗೆ?
SIT officers will make their investigation properly in Ramesh Jarkiholi in case said DP and IGP Praveen Sood
Published On - 11:12 am, Fri, 2 April 21