ಸಹಕಾರ ಇಲಾಖೆಯ ನಿವೇಶನ ಹಂಚಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ, ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು

|

Updated on: Jun 16, 2023 | 8:24 AM

ಸಂಘದ ಅಧ್ಯಕ್ಷ ರಾಮಶಾಮಯ್ಯ ಕೇವಲ 2.88 ಲಕ್ಷ ರೂಪಾಯಿಗೆ ಪಾರ್ವತಮ್ಮಗೆ ಮಾರಾಟ ಮಾಡಿದ್ದರು. ವಿದ್ಯಾಪೀಠದ ನಿವೇಶನ ಸಂಖ್ಯೆ 38 ಹಾಗೂ ಮಲ್ಲತಳ್ಳಿಯ ನಿವೇಶನ ಹಂಚಿಕೆಯಲ್ಲೂ ಹೀಗೆಯೇ ಗೋಲ್ ಮಾಲ್ ನಡೆದಿದೆ.

ಸಹಕಾರ ಇಲಾಖೆಯ ನಿವೇಶನ ಹಂಚಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ, ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್  ದಾಖಲು
ಸಹಕಾರ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ
Follow us on

ಬೆಂಗಳೂರು: ರಾಜ್ಯ ಸಹಕಾರ ಇಲಾಖೆಯಲ್ಲಿ (Cooperative Department) ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ತತ್ಸಂಬಂಧ, ಸಹಕಾರ ಇಲಾಖೆಯ ಸಹಾಯಕ ನಿಭಂದಕ ಗಂಗಾಧರ್ ದೂರಿನ ಮೇರೆಗೆ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ (KR Puram Police Station) ಎಫ್ಐಆರ್ ದಾಖಲಾಗಿದೆ. ಐಟಿಐ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ನಿವೇಶನ ಹಂಚಿಕೆಯಲ್ಲಿ ಈ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. 2021-2022 ನೇ ಸಾಲಿನಲ್ಲಿ ನಿರ್ಮಿಸಲಾಗಿದ್ದ ನಿವೇಶನಗಳ ಹಂಚಿಕೆ ಸಂಬಂಧ (Site allotment scam) ಸಂಘದ ಅಧ್ಯಕ್ಷರಾದ ಜಿ ಎಸ್ ರಾಮಶಾಮಯ್ಯ ಹಾಗೂ ಕಾರ್ಯದರ್ಶಿ ಶಿವಾನಂದ ಸೇರಿ 13 ಮಂದಿ ವಿರುದ್ದ ಎಫ್ ಐ ಆರ್ (FIR) ದಾಖಲಾಗಿದೆ.

ಎಳ್ಳುಕುಂಟೆ ಬಡಾವಣೆಯಲ್ಲಿ ನಿರ್ಮಾಣವಾಗಿದ್ದ ನಿವೇಶನ ಸಂಖ್ಯೆ 895, 896, 897, 898, 899, 900, 901, 902, 905, 907, 908, 910, 912, 913, 914 ನಿವೇಶನಗಳನ್ನ ಅತೀ ಕಡಿಮೆ ಬೆಲೆಗೆ ಮಾರಾಟ ಮಾಡಿರುವ ಆರೋಪ ಎದುರಾಗಿದೆ. ತನ್ಮೂಲಕ ಅತೀ ಕಡಿಮೆ ಬೆಲೆಗೆ ಮಾರಾಟ ಮಾಡಿ ಸಂಘಕ್ಕೆ ಆರ್ಥಿಕ ನಷ್ಟವನ್ನುಂಟುಮಾಡಲಾಗಿದೆ. ಜೊತೆಗೆ ನಾಯಂಡಳ್ಳಿ ಬಡಾವಣೆಯ ನಿವೇಶನ ಸಂಖ್ಯೆ 695 ನ್ನ ಸಂಘದ ಸದಸ್ಯರಲ್ಲದ ಪಾರ್ವತಮ್ಮ ಎಂಬುವವರಿಗೆ ಮಾರಾಟ ಮಾಡಿರುವ ಗುರುತರ ಆರೋಪವೂ ಎದುರಾಗಿದೆ.

ಇದನ್ನೂ ಓದಿ:  ಭೀಮಾ ತೀರದಲ್ಲಿ ಅಕ್ರಮ ಮರಳು ಸಾಗಾಟ ತಡೆಯಲು ಹೋದ ಹೆಡ್​​ಕಾನ್​ಸ್ಟೇಬಲ್​ ಭಯಾನಕ ಹತ್ಯೆ

ಸಂಘದ ಅಧ್ಯಕ್ಷ ರಾಮಶಾಮಯ್ಯ ಕೇವಲ 2.88 ಲಕ್ಷ ರೂಪಾಯಿಗೆ ಪಾರ್ವತಮ್ಮಗೆ ಮಾರಾಟ ಮಾಡಿದ್ದರು. ವಿದ್ಯಾಪೀಠದ ನಿವೇಶನ ಸಂಖ್ಯೆ 38 ಹಾಗೂ ಮಲ್ಲತಳ್ಳಿಯ ನಿವೇಶನ ಹಂಚಿಕೆಯಲ್ಲೂ ಹೀಗೆಯೇ ಗೋಲ್ ಮಾಲ್ ನಡೆದಿದೆ. ಒಟ್ಟಾರೆ ಕೋಟ್ಯಂತರ ರೂಪಾಯಿ ಮೌಲ್ಯದ ನಿವೇಶನಗಳನ್ನ ಅತೀ ಕಡಿಮೆ ಬೆಲೆಗೆ ಮಾರಾಟ ಮಾಡಿರುವ ಸಂಬಂಧ ಪೊಲೀಸ್ ದೂರು ನೀಡಲಾಗಿದೆ. ಇದರಿಂದಾಗಿ ಸಂಘಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಒಟ್ಟು 13 ಮಂದಿ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುವಂತೆ ದೂರು ನೀಡಲಾಗಿದೆ. ಕೆ ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:24 am, Fri, 16 June 23