Illegal Sand Mafia: ಭೀಮಾ ತೀರದಲ್ಲಿ ಅಕ್ರಮ ಮರಳು ಸಾಗಾಟ ತಡೆಯಲು ಹೋದ ಹೆಡ್​​ಕಾನ್​ಸ್ಟೇಬಲ್​ ಭಯಾನಕ ಹತ್ಯೆ

Head Constable: ಮೈಸೂರ್ ಚೌಹಾನ್ ಅವರು ಟ್ರ್ಯಾಕ್ಟರ್​ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚೌಹಾಣ್ ಅವರು ನೆಲೋಗಿ ಠಾಣೆಯಲ್ಲಿ ಹೆಡ್ ಕಾನ್​​​ಸ್ಟೇಬಲ್​​ ಆಗಿ ಸೇವೆ ಸಲ್ಲಿಸುತ್ತಿದ್ದರು.

Illegal Sand Mafia: ಭೀಮಾ ತೀರದಲ್ಲಿ ಅಕ್ರಮ ಮರಳು ಸಾಗಾಟ ತಡೆಯಲು ಹೋದ ಹೆಡ್​​ಕಾನ್​ಸ್ಟೇಬಲ್​ ಭಯಾನಕ ಹತ್ಯೆ
ಭೀಮಾ ತೀರದಲ್ಲಿ ಅಕ್ರಮ ಮರಳು ಸಾಗಾಟ ತಡೆಯಲು ಹೋದ ಹೆಡ್​​ಕಾನ್​ಸ್ಟೇಬಲ್​ ಹತ್ಯೆ
Follow us
ಸಾಧು ಶ್ರೀನಾಥ್​
|

Updated on:Jun 16, 2023 | 7:58 AM

ಕಲಬುರಗಿ: ಭೀಮಾ ತೀರದಲ್ಲಿ (Bheema theera) ಅಕ್ರಮ ಮರಳು ಸಾಗಾಟ (Illegal Sand Mafia) ತಡೆಯಲು ಹೋದ ಹೆಡ್​​ಕಾನ್​ಸ್ಟೇಬಲ್ (Head Constable)​ ಹತ್ಯೆಗೀಡಾಗಿದ್ದಾರೆ. ಟ್ರ್ಯಾಕ್ಟರ್​ ಹರಿಸಿ, ಹೆಡ್​​ ಕಾನ್​ಸ್ಟೇಬಲ್​ ​ಮೈಸೂರ್ ಚೌಹಾಣ್ ​(51) ಅವರನ್ನು ಹತ್ಯೆ ಮಾಡಲಾಗಿದೆ. ಕಲಬುರಗಿ (Kalaburagi) ಜಿಲ್ಲೆಯ ಜೇವರ್ಗಿ ತಾಲೂಕಿನ ನಾರಾಯಣಪುರ ಬಳಿ ಈ ಘಟನೆ ನಡೆದಿದ್ದು, ಅಕ್ರಮ ಮರಳು ಸಾಗಾಟ ಹಿನ್ನೆಲೆಯಲ್ಲಿ ನಿನ್ನೆ ಗುರುವಾರ ರಾತ್ರಿ 10ರ ಸುಮಾರಿಗೆ ಚೌಹಾಣ್ ಅವರು ತಪಾಸಣೆಗೆ ಹೋಗಿದ್ದರು.

ಆ ವೇಳೆ ದುಷ್ಕರ್ಮಿಗಳು ಬೈಕ್​​ನಲ್ಲಿ ಹೋಗುತ್ತಿದ್ದ ಮೈಸೂರ್​​ ಚೌಹಾಣ್​ ಮೇಲೆ ಟ್ರ್ಯಾಕ್ಟರ್ ಹರಿಸಿದ್ದಾರೆ. ಮೈಸೂರ್ ಚೌಹಾನ್ ಅವರು ಟ್ರ್ಯಾಕ್ಟರ್​ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚೌಹಾಣ್ ಅವರು ನೆಲೋಗಿ ಠಾಣೆಯಲ್ಲಿ ಹೆಡ್ ಕಾನ್​​​ಸ್ಟೇಬಲ್​​ ಆಗಿ ಸೇವೆ ಸಲ್ಲಿಸುತ್ತಿದ್ದರು. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಚೌಡಾಪೂರ್ ತಾಂಡಾ ನಿವಾಸಿಯಾಗಿದ್ದರು. ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Heavy Traffic! ಶಕ್ತಿ ಯೋಜನೆ ಜಾರಿ -ಮಹಿಳೆಯರಿಗೆ ಉಚಿತ ಬಸ್​​ ಪ್ರಯಾಣದ ಎಫೆಕ್ಟ್​​, ಕೆಎಸ್ಆರ್ಟಿಸಿ ಸರ್ವರ್ ಡೌನ್, ಮಹಿಳೆಯರ ಪರದಾಟ

ಗದಗ ಜಿಲ್ಲೆಯಲ್ಲಿ ಎಗ್ಗಿಲ್ಲದೇ ಅಕ್ರಮ ಮರಳು ಗಣಿಗಾರಿಕೆ.. ಗಣಿ, ಕಂದಾಯ, ಪೊಲೀಸ್ ಇಲಾಖೆ ಶಾಮೀಲು ಆರೋಪ

ಗದಗ ಜಿಲ್ಲೆಯಲ್ಲಿ ಎಗ್ಗಿಲ್ಲದೇ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ತುಂಗಭದ್ರಾ ನದಿ ತೀರದಲ್ಲಿ ಕೊರ್ಲಹಳ್ಳಿ, ಶೀರನಳ್ಳಿ, ಶಿಂಗಟಾಲೂರ, ಗಂಗಾಪೂರ ಗ್ರಾಮಗಳ ಸಮೀಪ ಮರಳು ಲೂಟಿ ನಡೆದಿದೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ, ನದಿ ಪಾತ್ರ, ಜಮೀನುಗಳಲ್ಲಿ ಕೋಟ್ಯಾಂತರ ಮೌಲ್ಯದ ಅಕ್ರಮ ಮರಳು ರಾಶಿ ರಾಶಿಯಾಗಿ ಸಂಗ್ರಹವಾಗುತ್ತಿದೆ.

ನದಿಯಲ್ಲಿ ನೀರು ಇದ್ದರೂ ದಂಧೆಕೋರರು ಜೆಸಿಬಿಗಳ ಮೂಲಕ ಮರಳು ಹೆಕ್ಕಿ ತೆಗೆಯುತ್ತಿದ್ದಾರೆ. ನಾಲ್ಕು ದಿನಗಳ ಹಿಂದೆ ನಡೆದಿದ್ದ ಸಭೆಯಲ್ಲಿ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ಅವರು ಅಕ್ರಮ ಮರಳು ಗಣಿಗಾರಿಕೆ ಕಡಿವಾಣ ಹಾಕುವಂತೆ ಜಿಲ್ಲಾಡಳಿತಕ್ಕೆ ಖಡಕ್ ಎಚ್ಚರಿಕೆ ನೀಡಿದ್ದರು. ಆದರೂ ಡೋಂಟ್ ಕೇರ್ ಎನ್ನಲಾಗಿದೆ. ಗಣಿ, ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳು ಈ ಅಕ್ರಮದಲ್ಲಿ ಶಾಮೀಲು ಆಗಿರುವ ಆರೋಪ ಕೇಲಿಬಂದಿದೆ. ಅಧಿಕಾರಿಗಳಿಗೆ ಗೊತ್ತಿದ್ದರೂ ತಾಲೂಕಾಡಳಿತ ಅಕ್ರಮ ತಡೆಯುತ್ತಿಲ್ಲ. ಹಗಲು, ರಾತ್ರಿ ಎನ್ನದೆ ಅಕ್ರಮ ಮರಳು ಭರ್ಜರಿ ಸಾಗಾಟ ನಡೆದಿದೆ. ಉಸ್ತುವಾರಿ ಸಚಿವರ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದ ಅಧಿಕಾರಿಗಳು ತಾವು ಆಡಿದ್ದೇ ಆಟ ಅನ್ನುತ್ತಿದ್ದಾರೆ.‌

ಕಲಬುರ್ಗಿ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:45 am, Fri, 16 June 23