AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷಿಣ ಸಂಚಾರ ವಿಭಾಗ ಪೊಲೀಸರ ವಿಶೇಷ ಕಾರ್ಯಾಚರಣೆ; 85 ವಾಹನಗಳ ಮೇಲೆ ಬರೋಬ್ಬರಿ 1 ಕೋಟಿ 7 ಲಕ್ಷ ದಂಡ

ದಕ್ಷಿಣ ಸಂಚಾರ ವಿಭಾಗ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು 84 ದ್ವಿಚಕ್ರ ವಾಹನಗಳು ಮತ್ತು 1 ಕಾರನ್ನು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಒಟ್ಟು 85 ವಾಹನಗಳ ಮೇಲೆ ಬರೋಬ್ಬರಿ 1 ಕೋಟಿ 7 ಲಕ್ಷ ದಂಡ ಬಾಕಿ ಇದೆ. ಸದ್ಯ ವಾಹನ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ದಕ್ಷಿಣ ಸಂಚಾರ ವಿಭಾಗ ಪೊಲೀಸರ ವಿಶೇಷ ಕಾರ್ಯಾಚರಣೆ; 85 ವಾಹನಗಳ ಮೇಲೆ ಬರೋಬ್ಬರಿ 1 ಕೋಟಿ 7 ಲಕ್ಷ ದಂಡ
ಟ್ರಾಫಿಕ್​ ಪೊಲೀಸರು
ರಾಚಪ್ಪಾಜಿ ನಾಯ್ಕ್
| Edited By: ಆಯೇಷಾ ಬಾನು|

Updated on:Feb 17, 2024 | 2:41 PM

Share

ಬೆಂಗಳೂರು, ಫೆ.17: ಟ್ರಾಫಿಕ್ ನಿಯಮ ಉಲ್ಲಂಘಿಸಿ 50 ಸಾವಿರ ರೂ.ಗಿಂತ ಹೆಚ್ಚಿನ ಮೊತ್ತದ ದಂಡವಿದ್ದ ವಾಹನಗಳ ವಿರುದ್ದ ದಕ್ಷಿಣ ಸಂಚಾರ ವಿಭಾಗ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ 84 ದ್ವಿಚಕ್ರ ವಾಹನಗಳು ಮತ್ತು 1 ಕಾರನ್ನು ವಶಕ್ಕೆ (Seized) ಪಡೆಯಲಾಗಿದೆ. ವಶಪಡಿಸಿಕೊಂಡ ವಾಹನಗಳ ಮೇಲೆ ಒಟ್ಟು 10,210 ವಿವಿಧ ಸಂಚಾರ ನಿಯಮ (Traffic Rules) ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಒಟ್ಟು 85 ವಾಹನಗಳ ಮೇಲೆ ಬರೋಬ್ಬರಿ 1 ಕೋಟಿ 7 ಲಕ್ಷ ದಂಡ ಬಾಕಿ ಇದೆ. ಸದ್ಯ ಎಲ್ಲಾ ವಾಹನಗಳನ್ನು ಸೀಜ್ ಮಾಡಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ರಾಜ್ಯದಲ್ಲಿದೆ ಬರೋಬ್ಬರಿ 91,58,577 ಹಳೆಯ ವಾಹನಗಳು

ವಾಹನ ದಟ್ಟಣೆಯಿಂದ ಸದಾ ಗಿಜಿಗುಡುವ ಸಿಲಿಕಾನ್​ ಸಿಟಿಯ ರಸ್ತೆಗಳಲ್ಲಿ ಇನ್ನೂ ಕೂಡ ಹಳೆಯ ವಾಹನಗಳ ಸಂಚಾರ ಮುಂದುವರೆದಿದೆ. ಗುಜರಿ ಸೇರಬೇಕಿದ್ದ ವೆಹಿಕಲ್ಸ್​ ರಾಜಧಾನಿಯ ರಸ್ತೆಯಲ್ಲಿ ಹೊಗೆಯುಗುಳುತ್ತಾ ಸಂಚಾರ ಮಾಡ್ತಿದ್ದು, ಪರಿಣಾಮ ಮಾಲಿನ್ಯ ಪ್ರಮಾಣ ಕೂಡ ಹೆಚ್ಚಾಗ್ತಿದೆ. ನಗರದಲ್ಲಿ ಬರೋಬ್ಬರಿ 33 ಲಕ್ಷ ಹಳೆಯ ವಾಹನಗಳು ಇರೋದನ್ನ ಖುದ್ದು ಸಾರಿಗೆ ಇಲಾಖೆಯ ಅಂಕಿ ಅಂಶಗಳೇ ಬಯಲು ಮಾಡಿವೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಮೊದಲಿದ್ದ ಶಾಂತಿ ಈಗ ಇಲ್ಲ: ಜಿ ಪರಮೇಶ್ವರ್

ರಾಜ್ಯದಲ್ಲಿ ಇನ್ನೂ ಕೂಡ 15 ವರ್ಷದ ಹಳೆಯ ಬರೋಬ್ಬರಿ 91,58,577 ವಾಹನಗಳು ಇದ್ದು, ಈ ಪೈಕಿ ಬೆಂಗಳೂರಿನಲ್ಲಿ 33,00,558 ಹಳೆಯ ವಾಹನಗಳು ಇರೋದನ್ನ ಖುದ್ದು ಸಾರಿಗೆ ಇಲಾಖೆಯ ಅಂಶಗಳೇ ರಿವೀಲ್ ಮಾಡಿದೆ. ನಗರದಲ್ಲಿ 15 ವರ್ಷದ ಹಳೆಯ 27,89364 ಸಾರಿಗೇತರ ವಾಹನ, 1,13,339 ಸರಕು ವಾಹನ. 1,35,988 ಲಘು ಸರಕು ವಾಹನಗಳಿವೆ. 20,554 ಹಳೆಯ ಬಸ್ಸುಗಳು, 63,346 ಟ್ಯಾಕ್ಸಿಗಳು, 1,77,967 ಹಳೆಯ ಲಘು ವಾಹನಗಳು ಸೇರಿ ಒಟ್ಟು 33 ಲಕ್ಷದ 558 ಹಳೆಯ ವಾಹನಗಳು ಇರೋದನ್ನ ಖುದ್ದು ಸಾರಿಗೆ ಇಲಾಖೆಯ ಅಂಕಿ ಅಂಶಗಳೇ ರಿವೀಲ್ ಮಾಡಿದೆ.

ನೋಂದಣಿಯಾಗಿ 15 ವರ್ಷ ಪೂರೈಸಿರುವ ಹಳೆಯ ವಾಹನಗಳಿಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೇಶದೆಲ್ಲೆಡೆ ವಾಹನಗಳ ಸ್ಕ್ರ್ಯಾಪಿಂಗ್ ನೀತಿ ಅಥವಾ ಗುಜರಿ ನೀತಿಯನ್ನ ಜಾರಿಗೆ ತಂದಿದೆ. ವಾಹನಗಳ ಸ್ಕ್ರ್ಯಾಪಿಂಗ್ ನೀತಿ ಅನ್ವಯ 15 ವರ್ಷದ ಹಳೆಯ ವಾಹನಗಳನ್ನ ಟೆಸ್ಟಿಂಗ್ ಮಾಡಿಸಿ, ಅವುಗಳು ಸಂಚಾರಕ್ಕೆ ಯೋಗ್ಯವಾಗಿದೆಯಾ ಅನ್ನೋದನ್ನ ಪರಿಶೀಲನೆ ಮಾಡಬೇಕು. ಸಂಚಾರಕ್ಕೆ ಯೋಗ್ಯವಲ್ಲದ ವಾಹನಗಳನ್ನ ಗುಜರಿಗೆ ಹಾಕಬೇಕು ಅನ್ನೋ ನಿಯಮ ಇದೆ. ಬಟ್ ಇದು ಕೇವಲ ಬಾಯ್​ ಮಾತಿಗೆ ಸೀಮಿತವಾದಂತೆ ಕಾಣ್ತಿದ್ದು, ಇನ್ನೂ ಕೂಡ ಹೊಗೆಯನ್ನ ಉಗುಳುತ್ತಾ ಹಳೆಯ ವಾಹನಗಳು ನಗರದಲ್ಲಿ ಸಂಚಾರ ಮಾಡುತ್ತಿವೆ. ಈ ಬಗ್ಗೆ ವಾಹನ ಸವಾರರು ಕೇಂದ್ರ ಮತ್ತು ರಾಜ್ಯ ಸರ್ಕಾರ ಗುಜರಿ ಪಾಲಿಸಿ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:19 pm, Sat, 17 February 24

Follow Us
ರಾಚಪ್ಪಾಜಿ ನಾಯ್ಕ್
ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ