ಚೆನ್ನೈನಿಂದ ಬೆಂಗಳೂರಿಗೆ ಸ್ಟಾರ್ಟ್ಅಪ್ ಕಂಪನಿ ಶಿಫ್ಟ್, ಹವಾಮಾನ, ಅಭಿವೃದ್ಧಿಯಲ್ಲಿ ಬೆಂಗಳೂರು ಉತ್ತಮ

ಚೆನ್ನೈ ಮೂಲದ ಸ್ಟಾರ್ಟ್ಅಪ್ ಫ್ರಗೇರಿಯಾ ಕಂಪನಿ ಚೆನ್ನೈಯಿಂದ ತನ್ನ ಕೇಂದ್ರ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರ ಮಾಡುತ್ತಿದೆ. ಇದೀಗ ಈ ವಿಚಾರವಾಗಿ ಚೆನ್ನೈನಲ್ಲಿ ಭಾರೀ ಚರ್ಚೆ ಗ್ರಾಸವಾಗಿದೆ. ಸ್ಟಾರ್ಟ್ಅಪ್ ಫ್ರಗೇರಿಯಾ ಕಂಪನಿಯ ಸಂಸ್ಥಾಪಕ ಹರೀಶ್ ವರದರಾಜನ್ ಅವರ ಪೋಸ್ಟ್​​ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಬೆಂಗಳೂರು ಕಂಪನಿ ಸ್ಥಾಪನೆಗೆ ಕಾರಣ ಏನು? ಎಂಬ ಬಗ್ಗೆ ಇಲ್ಲಿದೆ ಹೇಳಿದ್ದಾರೆ.

ಚೆನ್ನೈನಿಂದ ಬೆಂಗಳೂರಿಗೆ ಸ್ಟಾರ್ಟ್ಅಪ್ ಕಂಪನಿ ಶಿಫ್ಟ್, ಹವಾಮಾನ, ಅಭಿವೃದ್ಧಿಯಲ್ಲಿ ಬೆಂಗಳೂರು ಉತ್ತಮ
ವಿಧಾನ ಸೌಧ

Updated on: Oct 01, 2025 | 3:41 PM

ಬೆಂಗಳೂರಿನಿಂದ (Bengaluru) ನಾವು ನಮ್ಮ ಕಂಪನಿಗಳನ್ನು ಸ್ಥಳಾಂತರ ಮಾಡುತ್ತೇವೆ ಎಂಬ ಕೆಲವೊಂದು ಕಂಪನಿಗಳ ಹೇಳಿಕೆಯ ನಡುವೆ, ಚೆನ್ನೈ ಮೂಲದ ಸ್ಟಾರ್ಟ್ಅಪ್ ಫ್ರಗೇರಿಯಾ ಕಂಪನಿ (Startup Fragaria Company) ಚೆನ್ನೈಯಿಂದ ತನ್ನ ಕೇಂದ್ರ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರ ಮಾಡುತ್ತೇವೆ ಎಂದು ಹೇಳಿದೆ. ತನ್ನ ಪ್ರಧಾನ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸುತ್ತಿದೆ ಎಂದು ಕಂಪನಿಯ ಸಂಸ್ಥಾಪಕ ಹರೀಶ್ ವರದರಾಜನ್ ಲಿಂಕ್ಡ್ಇನ್/ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಚೆನ್ನೈನಲ್ಲಿ ಎಲ್ಲವೂ ಚೆನ್ನಾಗಿದೆ ಆದರೆ ವಾತಾವಾರಣ ಹಾಗೂ ಅಲ್ಲಿ ಜಾಗತಿಕ ಉತ್ಪನ್ನವನ್ನು ನಿರ್ಮಿಸುವ ಮತ್ತು ಸ್ಟ್ರಾಬೆರಿಗಳನ್ನು ಬೆಳೆಸುವ ಪರಿಸರ ಇಲ್ಲ ಎಂದು ಹೇಳಿದೆ. ಇದರ ಜತೆಗೆ ಬೆಂಗಳೂರಿಗೆ ತಮ್ಮ ಕಂಪನಿಯನ್ನು ಯಾಕೆ ಸ್ಥಳಾಂತರ ಮಾಡುತ್ತಿದ್ದೇವೆ ಎಂಬುದಕ್ಕೂ ಕಾರಣ ನೀಡಿದ್ದಾರೆ. ಹವಾಮಾನ, ಮಾರುಕಟ್ಟೆ ಪ್ರವೇಶ, ಬೆಂಬಲಿತ ಕೃಷಿ ಕಾನೂನುಗಳು, ವಲಸಿಗರ ವಾಸಯೋಗ್ಯತೆ ಮತ್ತು ಬೆಂಗಳೂರಿನ ಅಭಿವೃದ್ಧಿ ಹೊಂದುತ್ತಿರುವ ನವೋದ್ಯಮ ಪರಿಸರ ವ್ಯವಸ್ಥೆ ಉತ್ತಮವಾಗಿದೆ.

ಆದರೆ ಕಂಪನಿಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವು ಚೆನ್ನೈನಲ್ಲಿ ಇರುತ್ತದೆ ಎಂದು ಹೇಳಿದ್ದಾರೆ. ನಮ್ಮ ಉದ್ಯೋಗಿಗಳು ಹಾಗೂ ಮೂಲಸೌಕರ್ಯ, ಬೆಂಗಳೂರಿನಂತೆ ನವೋದ್ಯಮಗಳ ವಿಚಾರಗಳಿಗೆ ಚೆನ್ನೈ ಬೆಳಯುತ್ತಿಲ್ಲ, ಆ ಕಾರಣಕ್ಕೆ ಈ ಬದಲಾವಣೆಗಳನ್ನು ತರಬೇಕಿದೆ ಎಂದು ಹೇಳಿದ್ದಾರೆ. ಇನ್ನು ಹರೀಶ್ ವರದರಾಜನ್ ಅವರು ಈ ಬಗ್ಗೆ ಸೋಶಿಯಲ್​​​ ಮೀಡಿಯಾದಲ್ಲಿ ಹಂಚಿಕೊಂಡ ಪೋಸ್ಟ್​​​ಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ. ಹವಾಮಾನದ ವಿಚಾರದಲ್ಲಿ ಈ ಹೇಳಿಕೆಯನ್ನು ಟೀಕಿಸಿದ್ದಾರೆ. ಚೆನ್ನೈ ಹೆಚ್ಚಿನ ಬೆಳಿಗ್ಗೆ ಮತ್ತು ಸಂಜೆ ಸಮುದ್ರದ ತಂಗಾಳಿಯನ್ನು ಆನಂದಿಸುತ್ತದೆ. ತೀವ್ರ ಶಾಖ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಮಾತ್ರ ಇರುತ್ತದೆ. ಚೆನ್ನೈ ಈಗಾಗಲೇ ಪ್ರತಿಭೆ ಮತ್ತು ಮೂಲಸೌಕರ್ಯವನ್ನು ಹೊಂದಿದೆ. ಬಹುಶಃ ನಾವು ಬೆಂಗಳೂರಿನತ್ತ ಹೋಗುವ ಬದಲು ಇಲ್ಲಿಯೇ ಉತ್ತಮ ಸೌಕರ್ಯಗಳನ್ನು ನಿರ್ಮಾಣ ಮಾಡಬಹುದು ಎಂದು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ಟಿಸಿಎಸ್​ನಲ್ಲಿ ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳ ಸಂಖ್ಯೆ 12 ಸಾವಿರವಾ, 30 ಸಾವಿರವಾ?

ವೈರಲ್​​ ಪೋಸ್ಟ್​ ಇಲ್ಲಿದೆ ನೋಡಿ:

ಇನ್ನು ಕೆಲವರು ಶಿಕ್ಷಣ ಮತ್ತು ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಿದ್ದರೂ ಚೆನ್ನೈ ಸ್ಟಾರ್ಟ್‌ಅಪ್‌ಗಳನ್ನು ಪಡೆಯುವಲ್ಲಿ ವಿಫಲವಾಗಿದೆ ಎಂದು ಹೇಳಿದ್ದಾರೆ. ಚೆನ್ನೈ ಮೂಲದ ಮತ್ತೊಂದು ಸ್ಟಾರ್ಟ್‌ಅಪ್ ಬೆಂಗಳೂರಿಗೆ ಸ್ಥಳಾಂತರಗೊಳ್ಳುತ್ತಿದೆ. ಬೆಂಗಳೂರು ಲಾಭ ಗಳಿಸುವ ಸಲುವಾಗಿ ನಾವು ನಮ್ಮ ಶಿಕ್ಷಣದಲ್ಲಿ ಭಾರಿ ಹೂಡಿಕೆ ಮಾಡುತ್ತಿದ್ದೇವೆ ಎಂದು ವೃತ್ತಿಪರರೊಬ್ಬರು ಹೇಳಿದ್ದಾರೆ. ಬೆಂಗಳೂರಿನ ಮುನ್ನಡೆ ಕೇವಲ ವಾಸಯೋಗ್ಯತೆಯಲ್ಲಿ ಮಾತ್ರವಲ್ಲದೆ, ನವೋದ್ಯಮಗಳು ಮತ್ತು ನಾವೀನ್ಯತೆಯನ್ನು ಅಭಿವೃದ್ಧಿ ಮಾಡುವ ನೀತಿಗಳನ್ನು ಹೊಂದಿದೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ನಾವು ತಮಿಳುನಾಡ ರಾಜಕಾರಣಿಗಳಿಗೆ ಪದೇ ಪದೇ ಹೇಳುತ್ತಿದ್ದೇವೆ. ಮುಸುಕಿನ ರೀತಿಯಲ್ಲಿ ಕೆಲಸ ಮಾಡಬೇಡಿ, ಚೆನ್ನೈ ಅನನುಕೂಲ ಸ್ಥಿತಿಯಲ್ಲಿದೆ, ಬೆಂಗಳೂರು ಸಂಚಾರ ಮತ್ತು ನೀರಸ ಜೀವನಶೈಲಿಯೊಂದಿಗೆ ಸಹ, ಅದು ಇನ್ನೂ ವಾಸಯೋಗ್ಯತೆ ಉತ್ತಮವಾಗುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 3:38 pm, Wed, 1 October 25